ಕರ್ನಾಟಕ

karnataka

ETV Bharat / science-and-technology

ಧೂಳಿನ ಕಣ ಪತ್ತೆ ಟೆಕ್ನಾಲಜಿ ಜೊತೆ ಹೊಸ ಕಾರ್ಡ್ಲೆಸ್ ವ್ಯಾಕ್ಯೂಮ್ ಪರಿಚಯಿಸಿದ ಡೈಸನ್ !

ಡೈಸನ್ ವಿ15 ಡಿಟೆಕ್ಟ್ ಕಾರ್ಡ್-ಫ್ರೀ ವ್ಯಾಕ್ಯೂಮ್ ದೇಶದಲ್ಲಿ ರೂ. 62,900 ಕ್ಕೆ ಲಭ್ಯವಿದ್ದು, ಲೇಸರ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ.

ಧೂಳಿನ ಕಣ ಪತ್ತೆಯ ಟೆಕ್ನಾಲಜಿ ಜೊತೆ ಹೊಸ ಕಾರ್ಡ್ಲೆಸ್ ವ್ಯಾಕ್ಯೂಮ್ ಪರಿಚಯಿಸಿದ ಡೈಸನ್ !
ಧೂಳಿನ ಕಣ ಪತ್ತೆಯ ಟೆಕ್ನಾಲಜಿ ಜೊತೆ ಹೊಸ ಕಾರ್ಡ್ಲೆಸ್ ವ್ಯಾಕ್ಯೂಮ್ ಪರಿಚಯಿಸಿದ ಡೈಸನ್ !

By

Published : Jul 25, 2022, 5:40 PM IST

ನವದೆಹಲಿ: ಡೈಸನ್ ಭಾರತದಲ್ಲಿ ತನ್ನ ಹೊಸ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಪರಿಚಯಿಸಿದೆ. ಡೈಸನ್ ವಿ 15 ಡಿಟೆಕ್ಟ್ ಇದರ ಹೆಸರು. ಜಾಗತಿಕವಾಗಿ 370ಕ್ಕೂ ಹೆಚ್ಚು ನುರಿತ ಇಂಜಿನಿಯರ್‌ಗಳ ತಂಡವು ಇದನ್ನು ಅಭಿವೃದ್ಧಿಪಡಿಸಿದೆ. ಹಾಗೆ ಇದರಲ್ಲಿ ಹೈಪರ್ಡಿಮಿಯಮ್ ಮೋಟಾರ್​ ಅನ್ನು ಬಳಕೆ ಮಾಡಲಾಗಿದ್ದು, ಇದು ಅತ್ಯಂತ ಶಕ್ತಿಯುತವಾದ ಹೆಚ್ಚಿನ ಸ್ವಚ್ಛತೆ ಮಾಡುತ್ತದೆ. ಅದಕ್ಕೆ ಬೇಕಾದ 240 ಏರ್ ವ್ಯಾಟ್ ಹೀರಿಕೊಳ್ಳುವಿಕೆ ನಿರ್ಮಾಣ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡೈಸನ್ ವಿ15 ಡಿಟೆಕ್ಟ್ ಕಾರ್ಡ್-ಫ್ರೀ ವ್ಯಾಕ್ಯೂಮ್ ದೇಶದಲ್ಲಿ62,900 ರೂ. ಕ್ಕೆ ಲಭ್ಯವಿದೆ. ಇತ್ತೀಚಿನ ವ್ಯಾಕ್ಯೂಮ್​ಗಳು ಅಳವಡಿಸಿಕೊಂಡ ಲೇಸರ್ ತಂತ್ರಜ್ಞಾನ ಇದರಲ್ಲೂ ಇದ್ದು, ಕಣ್ಣಿಗೆ ಕಾಣದಿರುವ ಧೂಳು ಸಹ ಕಂಡು ಹಿಡಿದು ಅದನ್ನು ಸ್ವಚ್ಛಮಾಡುತ್ತದೆ. ಇನ್ನು ನಿಖರವಾಗಿ 1.5 ಡಿಗ್ರಿ ಕೋನದಲ್ಲಿ ತಿರುಗಲಿದೆ ಎಂದು ಇಂಜಿನಿಯರ್ ಮತ್ತು ಸಂಸ್ಥಾಪಕ ಜೇಮ್ಸ್ ಡೈಸನ್ ಹೇಳಿದ್ದಾರೆ.

ಡೈಸನ್ V15 ಡಿಟೆಕ್ಟ್ ಶಕ್ತಿಯುತ ಮತ್ತು ಬುದ್ಧಿವಂತ ಸಾಧನವಾಗಿದೆ. ಇದರ ಬಳೆಕೆಯು ಆರೋಗ್ಯಕರವಾಗಿದೆ. ಈ ಹೊಸ ವ್ಯಾಕ್ಯೂಮ್ ಕ್ಲೀನರ್‌ನ LCD ಪರದೆಯು ನೈಜ - ಸಮಯದ ವೈಜ್ಞಾನಿಕ ಪುರಾವೆಗಳನ್ನು ಸಹ ಪ್ರದರ್ಶಿಸುತ್ತದೆ. ಸೂಕ್ಷ್ಮದರ್ಶಕ ಧೂಳಿನ ಕಣಗಳನ್ನು ಎಣಿಸುವ ಮತ್ತು ಅಳೆಯುವ ಮೂಲಕ ಆಳವಾದ ಶುದ್ಧತೆ ಹೊಂದಿದೆ.

ಇನ್ನು ಈ ಕಂಪನಿಯು ಹೊಸ ಆಂಟಿ - ಟ್ಯಾಂಗಲ್ ಶಂಕುವಿನಾಕಾರದ ಬ್ರಷ್ ಬಾರ್ ಅನ್ನು ಅಭಿವೃದ್ಧಿಪಡಿಸಿದೆ. ಅದು ಕೂದಲನ್ನು ಸುರುಳಿಯಾಗಿ ಬಿನ್‌ಗೆ ತಿರುಗಿಸುತ್ತದೆ, ಇದು ಬ್ರಷ್ ಬಾರ್‌ನ ಸುತ್ತಲೂ ಕೂದಲು ಸಿಕ್ಕಿಹಾಕಿಕೊಳ್ಳುವುದನ್ನು ತಡೆಯುತ್ತದೆ.

ಡೈನಾಮಿಕ್ ಲೋಡ್ ಸೆನ್ಸಿಂಗ್ ತಂತ್ರಜ್ಞಾನವು ಎಲ್ಲ ರೀತಿಯ ನೆಲದ ಮೇಲೂ ಅತ್ಯುತ್ತಮವಾಗಿ ಶುಚಿಗೊಳಿಸುತ್ತದೆ. ವ್ಯಾಕ್ಯೂಮ್ ಅನ್ನು 'ಡೈಸನ್ V12 ಡಿಟೆಕ್ಟ್' ಗಿಂತ 1.5 ಪಟ್ಟು ಹೆಚ್ಚು ಹೀರಿಕೊಳ್ಳುವಿಕೆ ಮತ್ತು 54 ಪ್ರತಿಶತ ಹೆಚ್ಚು ಬಿನ್ ಸಾಮರ್ಥ್ಯದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಮೂಢನಂಬಿಕೆಯ ಪರಮಾವಧಿ..! ಋತುಮತಿಯಾದ ವಿದ್ಯಾರ್ಥಿನಿಯರಿಗೆ ಸಸಿ ನೆಡದಂತೆ ಶಿಕ್ಷಕಿಯ ತಾಕೀತು

ABOUT THE AUTHOR

...view details