ನವದೆಹಲಿ:ಐಟಿ ದಿಗ್ಗಜ ಕಾಗ್ನಿಜೆಂಟ್ ಸ್ವದೇಶಿ ಡ್ರೋನ್ ಸ್ಟಾರ್ಟ್ಅಪ್ ಗರುಡಾ ಏರೋಸ್ಪೇಸ್ ಜೊತೆಗೆ ಮೆಮೊರಂಡಮ್ ಆಫ್ ಅಂಡರ್ಸ್ಟಂಡಿಂಗ್ (ಎಂಒಯು)ಗೆ ಸಹಿ ಹಾಕಿದೆ.
ಡ್ರೋನ್ ಸೇವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಜೊತೆಗೆ ಕೃಷಿ, ಉತ್ಪಾದನೆ, ಶಕ್ತಿ ಮತ್ತು ಉಪಯುಕ್ತತೆಗಳು, ಚಿಲ್ಲರೆ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್‌ನಂತಹ ಕೈಗಾರಿಕೆಗಳು ಡ್ರೋನ್ ಸೇವೆಗಳು ವೇಗವಾಗಿ ಬೆಳೆಯುತ್ತಿದೆ ಎಂದು ಕಾಗ್ನಿಜೆಂಟ್ ಉಪಾಧ್ಯಕ್ಷರಾದ ಅಚಲ್ ಕಟಾರಿಯಾ ತಿಳಿಸಿದ್ದಾರೆ.
ಕಾಗ್ನಿಜೆಂಟ್ ಮತ್ತು ಗರುಡಾ ಏರೋಸ್ಪೇಸ್ ಜೊತೆಯಾಗಿ ಎಂಡ್-ಟು-ಎಂಡ್ ಡ್ರೋನ್ ಆಧಾರಿತ ನಿರ್ವಹಣೆ ಮತ್ತು ಮೇಲ್ವಿಚಾರಣೆ ತರಲು ಸಜ್ಜಾಗಿದೆ. ಕೃಷಿ, ಗೋದಾಮಿನ ನಿರ್ವಹಣೆ ಮತ್ತು ಶಕ್ತಿ ಮತ್ತು ಉಪಯುಕ್ತತೆಗಳಂತಹ ಕ್ಷೇತ್ರಗಳನ್ನು ವಲಯಗಳನ್ನು ಇದು ಒಳಗೊಂಡಿರಲಿದೆ.
ಕಾಗ್ನಿಜೆಂಟ್ ಜೊತೆಗಿನ ಈ ಒಪ್ಪಂದ ವಿಶ್ವ ದರ್ಜೆ ತಂತ್ರಜ್ಞಾನದ ಮೂಲಕ ಮೇಡ್ ಇನ್ ಇಂಡಿಯಾಕ್ಕೆ ಒತ್ತು ನೀಡಲಿದೆ. ಈ ಸಹಯೋಗವು ಕಾಗ್ನಿಜೆಂಟ್ ಅಸೋಸಿಯೇಟ್‌ಗಳಿಗೆ ಅದರ ಸೇವಾ ಮಾರ್ಗಗಳಾದ ಅನಾಲಿಟಿಕ್ಸ್, ಐಒಟಿಗಳಲ್ಲಿ ಅಂತಹ ಉದ್ದೇಶ-ಚಾಲಿತ ಡ್ರೋನ್ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಗರುಡ ಏರೋಸ್ಪೇಸ್ ದೇಶಾದ್ಯಂತ 26 ನಗರಗಳಲ್ಲಿ 400 ಡ್ರೋನ್‌ಗಳ ಫ್ಲೀಟ್ ಮತ್ತು 500 ಪೈಲಟ್‌ಗಳ ಉತ್ತಮ ತರಬೇತಿ ಪಡೆದ ತಂಡವನ್ನು ಹೊಂದಿದೆ.
ಇದನ್ನೂ ಓದಿ:ಸ್ಮಾರ್ಟ್ ಫೋನ್ ಇದ್ದರಷ್ಟೇ ಸಾಲದು.. ನೀವು ಕೂಡ ಸ್ಮಾರ್ಟ್ ಆಗಬೇಕು