ನವದೆಹಲಿ : ಇಯರ್ ಫೋನ್ಗಳನ್ನು ಅತಿಯಾಗಿ ಬಳಸಿ ಶ್ರವಣ ಸಾಮರ್ಥ್ಯ ಕಳೆದುಕೊಂಡಿದ್ದ 18 ವರ್ಷದ ಯುವಕನ ಶ್ರವಣ ಶಕ್ತಿಯನ್ನು ವೈದ್ಯರು ಮತ್ತೆ ಸರಿ ಮಾಡಿದ್ದಾರೆ. ಗೋರಖ್ಪುರದ ಪ್ರಿನ್ಸ್ ಎಂಬಾತನಿಗೆ ಅತಿಯಾಗಿ ಸಂಗೀತ ಕೇಳುವ ಹುಚ್ಚಿತ್ತು. ಹೀಗಾಗಿ ಆತ ಯಾವಾಗಲೂ ಬಿಗಿಯಾಗಿ ಕಿವಿಗೆ ಇಯರ್ ಫೋನ್ಗಳನ್ನು ಸಿಕ್ಕಿಸಿಕೊಂಡಿರುತ್ತಿದ್ದ. ಅಲ್ಲದೇ ಅವೇ ಇಯರ್ ಫೋನ್ಗಳನ್ನು ಆತ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದ. ಇದರಿಂದ ಆತನ ಕಿವಿಯಲ್ಲಿ ಸೋಂಕು ಸಹ ಉಂಟಾಗಿತ್ತು. ಸೋಂಕಿನಿಂದ ಆಗಾಗ ಕಿವಿ ನೋವು ಹಾಗೂ ಕಿವಿಯಿಂದ ಕೀವು ಸೋರುವ ಸಮಸ್ಯೆ ಎದುರಾಗಿತ್ತು.
ಹೀಗಾಗಿ ಪ್ರಿನ್ಸ್ ಸ್ಥಳೀಯ ಆಸ್ಪತ್ರೆಯಲ್ಲಿ ಎರಡು ಬಾರಿ ಮಾಸ್ಟಾಯ್ಡ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಅದರಲ್ಲಿ ಒಂದು ಯಶಸ್ವಿಯಾಗಲಿಲ್ಲ ಮತ್ತು ಇನ್ನೊಂದು ಅವನ ಶ್ರವಣ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಪ್ರೈಮಸ್ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಅಂಕುಶ್ ಸಯಾಲ್ ಯುವಕನಿಗೆ ಆಸಿಕ್ಯುಲೋಪ್ಲ್ಯಾಸ್ಟಿ (ಭಾಗಶಃ ಟೈಟಾನಿಯಂ ಆಸಿಕ್ಯುಲೋಪ್ಲ್ಯಾಸ್ಟಿ ಇಂಪ್ಲಾಂಟ್ ಪ್ಲೇಸ್‌ಮೆಂಟ್) ಜೊತೆಗೆ ಮಾಸ್ಟೊಡೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿ ಆತನ ಕಿವಿ ಮತ್ತೆ ಕೇಳುವಂತೆ ಮಾಡಿದ್ದಾರೆ.
"ದೀರ್ಘಕಾಲದವರೆಗೆ ಸೋಂಕು ಇದ್ದುದರಿಂದ, ನೋವಿನ ಸೂಕ್ಷ್ಮತೆಯ ವರದಿಯ ಆಧಾರದ ಮೇಲೆ ನಾವು ಮೊದಲು ಪ್ರತಿಜೀವಕಗಳ ಕೋರ್ಸ್‌ನೊಂದಿಗೆ ಕೀವು ಬರುವುದನ್ನು ನಿಯಂತ್ರಿಸಿದೆವು. ತದನಂತರ CT ಸ್ಕ್ಯಾನ್ ನಡೆಸಲಾಯಿತು. ಹಿಂದಿನ ಶಸ್ತ್ರಚಿಕಿತ್ಸೆಗಳ ಸಮಯದಲ್ಲಿ ಒಂದಿಷ್ಟು ಶೇಷವಸ್ತು ಅಲ್ಲಿಯೇ ಉಳಿದಿರುವುದು ತಿಳಿದಿತ್ತು. ಈಗ ನಾವು ಅದನ್ನು ತೆರವುಗೊಳಿಸಿದ್ದೇವೆ. ಮಾಸ್ಟೊಡೆಕ್ಟಮಿ ಮೂಲಕ ಇದನ್ನು ಮಾಡಿ, ಅವರ ಕೇಳುವ ಶಕ್ತಿಯನ್ನು ಪುನಃಸ್ಥಾಪಿಸಲು ಜರ್ಮನ್ ನಿರ್ಮಿತ ಟೈಟಾನಿಯಂ ಇಂಪ್ಲಾಂಟ್ ಅನ್ನು ಕಿವಿಯೊಳಗೆ ಇರಿಸಿದ್ದೇವೆ" ಎಂದು ಡಾ ಸಯಲ್ ಹೇಳಿದರು.