ಕರ್ನಾಟಕ

karnataka

ETV Bharat / science-and-technology

ಡಿಜಿಟಲ್ ಪೇಮೆಂಟ್​, ಫುಡ್​ ಡೆಲಿವರಿ ಆ್ಯಪ್​ಗಳು ಭಾರತೀಯರಿಗೆ ಅಚ್ಚುಮೆಚ್ಚು - etv bharat kannada

Food grocery delivery, digital payments top Indians: ಭಾರತದ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಡಿಜಿಟಲ್ ಪೇಮೆಂಟ್​ ಮತ್ತು ಸರಕು ಡೆಲಿವರಿ ಆ್ಯಪ್​ಗಳು ಆದ್ಯತೆಯ ಆ್ಯಪ್​ಗಳಾಗಿವೆ ಎಂದು ವರದಿ ತಿಳಿಸಿದೆ.

Food & grocery delivery, digital payments top Indians' priorities on smartphones
Food & grocery delivery, digital payments top Indians' priorities on smartphones

By ETV Bharat Karnataka Team

Published : Nov 24, 2023, 12:27 PM IST

ನವದೆಹಲಿ: ಭಾರತದಲ್ಲಿನ ಸ್ಮಾರ್ಟ್​ಫೋನ್ ಬಳಕೆದಾರರು ಈಗ ಸರಾಸರಿ ಏಳು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಯಮಿತವಾಗಿ ಬಳಸುತ್ತಿದ್ದು ಅವುಗಳ ಪೈಕಿ ಡಿಜಿಟಲ್ ಪೇಮೆಂಟ್​, ಆಹಾರ ಮತ್ತು ದಿನಸಿ ಡೆಲಿವರಿ ಆ್ಯಪ್​ಗಳು ಆದ್ಯತೆಯ ಅಗ್ರಸ್ಥಾನದಲ್ಲಿವೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ವರದಿಯ ಪ್ರಕಾರ, ಭಾರತೀಯ ಗ್ರಾಹಕರಿಗೆ ಅನುಕೂಲವೇ ಉನ್ನತ ಆದ್ಯತೆಯಾಗಿದ್ದು, ಇದು ಅವರ ಮೊಬೈಲ್​ ಆ್ಯಪ್ ಬಳಕೆಯ ಹೆಚ್ಚಳಕ್ಕೆ ಕಾರಣವಾಗಿದೆ.

"ಗ್ರಾಹಕರು ಪ್ರತಿ ಖರೀದಿಯಲ್ಲಿ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಅನುಕೂಲತೆ ಈ ಮೂರು ಅಂಶಗಳನ್ನು ಬಯಸುತ್ತಾರೆ" ಎಂದು ಸಿಎಂಆರ್​ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ ಮುಖ್ಯಸ್ಥ ಪ್ರಭು ರಾಮ್ ಹೇಳಿದರು.

"ವಿಶ್ವಾಸಾರ್ಹತೆಯೊಂದಿಗೆ ಅನುಕೂಲ ಇದು ಕೇವಲ ಗೆಲುವಿನ ಸೂತ್ರವಲ್ಲದೆ ಆಧುನಿಕ ವ್ಯವಹಾರಗಳ ಜೀವನಾಡಿಯಾಗಿದೆ" ಎಂದು ಸಿಎಂಆರ್​ನ ಇಂಡಸ್ಟ್ರಿ ಕನ್ಸಲ್ಟಿಂಗ್ ಗ್ರೂಪ್​ನ ಹಿರಿಯ ವ್ಯವಸ್ಥಾಪಕ ಸುಗಂಧಾ ಶ್ರೀವಾಸ್ತವ ತಿಳಿಸಿದರು. ಗ್ರಾಹಕರು ಉತ್ಪನ್ನಗಳು ಮತ್ತು ಸೇವೆಗಳನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎಂಬುದರ ನಿರೂಪಣೆಯನ್ನು ಮೊಬೈಲ್ ಅಪ್ಲಿಕೇಶನ್ ಆಧಾರಿತ ಬ್ರಾಂಡ್​ಗಳು ಮರುರೂಪಿಸಿವೆ ಎಂದು ಶ್ರೀವಾಸ್ತವ ವಿವರಿಸಿದರು.

ಒಟಿಟಿ ಆ್ಯಪ್​ಗಳನ್ನು ನೋಡುವುದಾದರೆ ಅಮೆಜಾನ್ ಪ್ರೈಮ್ ವಿಡಿಯೋ ಸ್ಪಷ್ಟವಾಗಿ ಉನ್ನತ ಸ್ಥಾನದಲ್ಲಿದ್ದರೆ, ಡಿಸ್ನಿ ಹಾಟ್​ಸ್ಟಾರ್ ಎರಡನೇ ಸ್ಥಾನದಲ್ಲಿದೆ. ಅಮೆಜಾನ್ ಪ್ರೈಮ್ ವಿಡಿಯೋವನ್ನು 65 ಪ್ರತಿಶತ ಗ್ರಾಹಕರು ಡಿಸ್ನಿ ಹಾಟ್​ಸ್ಟಾರ್ ಅನ್ನು 37 ಪ್ರತಿಶತಕ್ಕಿಂತ ಹೆಚ್ಚು ಜನ ಇಷ್ಟಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಅಮೆಜಾನ್ ಫ್ರೆಶ್ ಗ್ರಾಹಕರ ತೃಪ್ತಿ (36 ಪ್ರತಿಶತ) ಮತ್ತು ಮೆಚ್ಚುಗೆ (60 ಪ್ರತಿಶತ) ಎರಡರಲ್ಲೂ ಮುಂಚೂಣಿಯಲ್ಲಿದ್ದರೆ, ಬ್ಲಿಂಕಿಟ್ ತೃಪ್ತಿ (19 ಪ್ರತಿಶತ) ಮತ್ತು ಮೆಚ್ಚುಗೆ (53 ಪ್ರತಿಶತ) ಎರಡರಲ್ಲೂ ಮುಂಚೂಣಿಯಲ್ಲಿದೆ.

ಮೊಬೈಲ್ ಅಪ್ಲಿಕೇಶನ್ (ಅಥವಾ ಆ್ಯಪ್) ಎಂಬುದು ಡೆಸ್ಕ್​ಟಾಪ್ ಅಥವಾ ಲ್ಯಾಪ್​ಟಾಪ್ ಕಂಪ್ಯೂಟರ್​ಗಳಿಗಿಂತ ಹೆಚ್ಚಾಗಿ ಸ್ಮಾರ್ಟ್​ಫೋನ್​ಗಳು ಮತ್ತು ಟ್ಯಾಬ್ಲೆಟ್​ಗಳಂಥ ಸಣ್ಣ ವೈರ್ ಲೆಸ್ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಸಲು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್ ಅಪ್ಲಿಕೇಶನ್ ಆಗಿವೆ. ಮೊಬೈಲ್ ಅಪ್ಲಿಕೇಶನ್​ಗಳನ್ನು ಕೆಲವೊಮ್ಮೆ ವೆಬ್-ಆಧಾರಿತ ಅಥವಾ ಸ್ಥಳೀಯ ಅಪ್ಲಿಕೇಶನ್​ಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಅಪ್ಲಿಕೇಶನ್​ಗಳು ಬಹುತೇಕ ಜನರ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿವೆ. ಸಾಮಾಜಿಕ ನೆಟ್ವರ್ಕಿಂಗ್ ಮತ್ತು ಮನರಂಜನೆ, ಉತ್ಪಾದಕತೆಯಿಂದ ವ್ಯವಹಾರದವರೆಗೆ ಹೀಗೆ ಎಲ್ಲವೂ ಮೊಬೈಲ್ ಆ್ಯಪ್​ಗಳ ಮೂಲಕ ನಡೆಯುತ್ತಿರುವ ಇಂದಿನ ಸಮಯದಲ್ಲಿ ಸ್ಮಾರ್ಟ್​ಫೋನ್ ಎಲ್ಲರಿಗೂ ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಆಲ್ಟ್​ಮ್ಯಾನ್ ವಜಾಕ್ಕೆ ಕಾರಣವಾಗಿತ್ತಾ ಓಪನ್ ಎಐನ ರಹಸ್ಯ ಪ್ರಾಜೆಕ್ಟ್​ 'ಕ್ಯೂ-ಸ್ಟಾರ್'?

ABOUT THE AUTHOR

...view details