ನವದೆಹಲಿ:ಗರ್ಭಿಣಿ ಮಹಿಳೆಯರಿಗೆ ಅಗತ್ಯ ಬೆಂಬಲ ನೀಡುವ ಸಲುವಾಗಿ ಭಾರತೀಯ ಸಂಶೋಧಕರು 'ಸ್ವಸ್ಥಗರ್ಭ' ಎಂಬ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ರೋರ್ಕಿ ಐಐಟಿ ಮತ್ತು ದೆಹಲಿಯ ಏಮ್ಸ್ ತಜ್ಞರು ಈ ಆ್ಯಪ್ ತಯಾರಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳೆರಯಿಗೆ ಕಡಿಮೆ ವೈದ್ಯಕೀಯ ಸೇವೆ ಲಭ್ಯ ಇರುವ ಹಿನ್ನೆಲೆ ಈ ಆ್ಯಪ್ ಮೂಲಕ ಅವರು ಪ್ರಯೋಜನ ಪಡೆಯಬಹುದಾಗಿದೆ.
ಈ ಆ್ಯಪ್ ಮೂಲಕ ಸಮಯಕ್ಕೆ ತಕ್ಕಂತೆ ವೈದ್ಯಕೀಯ ಸಲಹೆಯನ್ನು ಕೂಡ ಪಡೆಯಬಹುದಾಗಿದೆ. ಇದು ನೀವು ವೈದ್ಯರನ್ನು ಭೇಟಿಯಾಗುವ ಸಮಯ. ವೈದ್ಯಕೀಯ ಪರೀಕ್ಷೆಯ ದಾಖಲಾತಿ, ಗರ್ಭಿಣಿಯರ ಚಿಕಿತ್ಸೆ ಕುರಿತು ಸಂಪೂರ್ಣ ವಿವರ ಈ ಆ್ಯಪ್ ನೀಡಲಿದೆ. 150 ಮಂದಿ ಈ ಆ್ಯಪ್ ಬಳಕೆ ಮಾಡಿ ಇದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಾಗಿದೆ.