ಕರ್ನಾಟಕ

karnataka

ETV Bharat / science-and-technology

ಕಚೇರಿ ಕೆಲಸ ಸುಲಭವಾಗುವುದಾರೆ ಎಐ ಬಳಸಲು ಸಿದ್ಧ ಎಂದ ಶೇ 83ರಷ್ಟು ಭಾರತೀಯರು!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಉದ್ಯೋಗ ಕಸಿಯಬಹುದು ಎಂಬ ಆತಂಕವಿದ್ದರೂ ಸಹ, ತಮ್ಮ ಕೆಲಸ ಸುಲಭವಾಗುವುದಾದರೆ ಕೆಲಸದ ಸ್ಥಳದಲ್ಲಿ ತಾವು ಎಐ ಬಳಸಲು ಸಿದ್ಧವಿರುವುದಾಗಿ ಶೇ 83ರಷ್ಟು ಭಾರತೀಯ ಉದ್ಯೋಗಿಗಳು ಹೇಳಿದ್ದಾರೆ.

Despite worries, 83% of Indian workers willing to let AI help at job
ಕಚೇರಿ ಕೆಲಸ ಸುಲಭವಾಗುವುದಾರೆ ಎಐ ಬಳಸಲು ಸಿದ್ಧ ಎಂದ ಶೇ 83ರಷ್ಟು ಭಾರತೀಯರು!

By

Published : Jun 1, 2023, 4:00 PM IST

ನವದೆಹಲಿ :ತಮ್ಮ ಕೆಲಸದ ಭಾರವನ್ನು ಕಡಿಮೆ ಮಾಡಬಹುದಾದರೆ ತಾವು ತಮ್ಮ ಕೆಲಸವನ್ನು ಎಐ (artificial intelligence -AI) ನಿಂದ ಮಾಡಿಸಲು ಸಿದ್ಧವಿರುವುದಾಗಿ ಶೇ 83 ರಷ್ಟು ಭಾರತೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಗುರುವಾರ ವರದಿಯೊಂದು ಹೇಳಿದೆ. ಎಐ ಜನರ ಕೆಲಸವನ್ನು ಕಿತ್ತುಕೊಳ್ಳಲಿದೆ ಎಂಬ ಆತಂಕದ ಮಧ್ಯೆಯೂ ಭಾರತದ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಎಐ ಬಳಸಲು ಉತ್ಸುಕವಾಗಿರುವುದು ಆಶ್ಚರ್ಯಕರವಾಗಿದೆ. ಹಾಗೆಯೇ ಶೇ 74 ರಷ್ಟು ಜನರಿಗೆ ಎಐ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತದೆ ಎಂಬ ಭಯವೂ ಇದೆ.

ಆದಾಗ್ಯೂ, ಮೈಕ್ರೋಸಾಫ್ಟ್‌ನ ಪ್ರಕಾರ, ಪ್ರತಿ ನಾಲ್ಕು ಭಾರತೀಯ ಉದ್ಯೋಗಿಗಳ ಪೈಕಿ ಮೂವರು ಮಾತ್ರ AI ಅನ್ನು ಆಡಳಿತಾತ್ಮಕ ಕಾರ್ಯಗಳಿಗೆ (86 ಪ್ರತಿಶತ) ಮಾತ್ರವಲ್ಲದೆ ವಿಶ್ಲೇಷಣಾತ್ಮಕ ಕೆಲಸಗಳಿಗೆ (88 ಪ್ರತಿಶತ) ಮತ್ತು ಸೃಜನಶೀಲ ಕೆಲಸಗಳೀಗೆ (87 ಪ್ರತಿಶತ) ಬಳಸಲು ಇಚ್ಛಿಸುತ್ತಾರೆ ಎಂದು ವರ್ಕ್ ಟ್ರೆಂಡ್ ಇಂಡೆಕ್ಸ್ 2023 ವರದಿ ಹೇಳಿದೆ. ಎಐನೊಂದಿಗೆ ಹೆಚ್ಚು ಪರಿಚಿತವಾಗಿರುವ ಸುಮಾರು ಶೇಕಡಾ 100 ರಷ್ಟು ಸೃಜನಶೀಲ ವೃತ್ತಿಪರರು ತಮ್ಮ ಕೆಲಸದ ಸೃಜನಶೀಲ ಅಂಶಗಳಿಗಾಗಿ ಎಐ ಅನ್ನು ಬಳಸಲು ಬಯಸುತ್ತಾರೆ.

ಏತನ್ಮಧ್ಯೆ, ಉದ್ಯೋಗ ಕಡಿತಗೊಳಿಸುವ ಬದಲು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಎಐ ಕೆಲಸದ ಸ್ಥಳದಲ್ಲಿ ಮೌಲ್ಯವನ್ನು ನೀಡುತ್ತದೆ ಎಂದು 1.6 ರಷ್ಟು ಹೆಚ್ಚು ಭಾರತೀಯ ಕಂಪನಿಗಳ ಮ್ಯಾನೇಜರ್​ಗಳ ಅಭಿಪ್ರಾಯವಾಗಿದೆ. ಎಐ ಸಂಪೂರ್ಣ ಹೊಸ ರೀತಿಯಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ ಮತ್ತು ಎಐ ಅನ್ನು ಅಳವಡಿಸಿಕೊಂಡಾಗ ಸಂಸ್ಥೆಗಳು ಹಿಂದಿನ ಸಂಪ್ರದಾಯ ಮುರಿದು, ಪ್ರತಿಯೊಬ್ಬರ ಸೃಜನಶೀಲತೆ ಮತ್ತು ಉತ್ಪಾದಕತೆ ಹೆಚ್ಚಿಸುತ್ತವೆ ಎಂದು ಡೇಟಾ ತೋರಿಸಿದೆ.

"ಮುಂದಿನ ಪೀಳಿಗೆಯ ಎಐ ಉತ್ಪಾದಕತೆಯು ಬೆಳವಣಿಗೆಯ ಹೊಸ ಅಲೆ ಸೃಷ್ಟಿಸಲಿದೆ. ಎಐ ನಮ್ಮ ಉದ್ಯೋಗಗಳಿಂದ ಒತ್ತಡವನ್ನು ತೆಗೆದುಹಾಕುತ್ತದೆ ಮತ್ತು ಸೃಷ್ಟಿಯ ಸಂತೋಷವನ್ನು ಮರುಶೋಧಿಸಲು ನಮ್ಮನ್ನು ಮುಕ್ತಗೊಳಿಸುತ್ತದೆ" ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮಾಡರ್ನ್ ವರ್ಕ್ ಕಂಟ್ರಿ ಹೆಡ್ ಭಾಸ್ಕರ್ ಬಸು ಹೇಳಿದ್ದಾರೆ. ಕೆಲಸದ ಸ್ಥಳದಲ್ಲಿ ಇರುವ ಪ್ರತಿಯೊಬ್ಬರಿಗೂ ಉತ್ತಮ ಕೆಲಸದ ವಾತಾವರಣವನ್ನು ನಿರ್ಮಾಣ ಮಾಡಲು ಎಐ ತಂತ್ರಜ್ಞಾನ ಸೂಕ್ತವಾಗಿ ಬಳಸುವುದು ಪ್ರತಿಯೊಂದು ಕಂಪನಿ ಹಾಗೂ ಕಂಪನಿ ಮುಖ್ಯಸ್ಥರ ಜವಾಬ್ದಾರಿಯಾಗಿದೆ ಎಂದು ಬಸು ತಿಳಿಸಿದರು.

ತಾವು ಭವಿಷ್ಯದಲ್ಲಿ ನೇಮಕ ಮಾಡಿಕೊಳ್ಳಲಿರುವ ಉದ್ಯೋಗಿಗಳು ಎಐ ಜೊತೆಗೆ ಕೆಲಸ ಮಾಡಲು ಬೇಕಾದ ಕೌಶಲಗಳನ್ನು ಹೊಂದಿರಬೇಕೆಂದು ಬಯಸುವುದಾಗಿ ಶೇಕಡಾ 90ರಷ್ಟು ಭಾರತೀಯ ಕಂಪನಿಗಳ ಮುಖ್ಯಸ್ಥರು ಹೇಳಿದ್ದಾರೆ. ಹಾಗೆಯೇ ಉದ್ಯೋಗಿಗಳ ವಿಷಯಕ್ಕೆ ಬಂದರೆ- ಶೇ 78 ರಷ್ಟು ಉದ್ಯೋಗಿಗಳು ತಾವು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಅಗತ್ಯವಾದ ಕೌಶಲ ತರಬೇತಿ ಹೊಂದಿಲ್ಲ ಎಂದು ಹೇಳಿದ್ದಾರೆ.

ತಾವು ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಲು ತಮ್ಮ ಬಳಿ ಸಾಕಷ್ಟು ಸಮಯ ಹಾಗೂ ಅದಕ್ಕೆ ಅಗತ್ಯವಾದ ಚೈತನ್ಯವಿಲ್ಲ ಎಂದು ಶೇ 76 ರಷ್ಟು ಭಾರತೀಯ ಉದ್ಯೋಗಿಗಳು ಹೇಳಿದ್ದಾರೆ ಹಾಗೂ ಹೊಸತನದ ಕೆಲಸಗಳನ್ನು ಮಾಡುವುದು ಇಂಥವರಿಗೆ ಕಷ್ಟಕರವಾಗಲಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : ಎಲೋನ್ ಮಸ್ಕ್ ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ

ABOUT THE AUTHOR

...view details