ಕರ್ನಾಟಕ

karnataka

ETV Bharat / science-and-technology

ಶೇ 75ರಷ್ಟು ಡೆಸ್ಕ್ ಉದ್ಯೋಗಿಗಳಿಂದ ಕೆಲಸದಲ್ಲಿ AI ಬಳಕೆ; ವರದಿ - ಬುದ್ಧಿವಂತ ಪರಿಕರಗಳ ಕಾರ್ಯತಂತ್ರದ ಬಳಕೆ

ಶೇ 75 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಕೃತಕ ಬುದ್ಧಿಮತ್ತೆ ಬಳಸುತ್ತಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

75% of Indian desk workers adopting AI
75% of Indian desk workers adopting AI

By

Published : Jul 20, 2023, 4:05 PM IST

ನವದೆಹಲಿ: ಸುಮಾರು 75 ಪ್ರತಿಶತದಷ್ಟು ಭಾರತೀಯ ಉದ್ಯೋಗಿಗಳು ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ. ಸೇಲ್ಸ್‌ಫೋರ್ಸ್ ಮಾಲೀಕತ್ವದ ಎಂಟರ್‌ಪ್ರೈಸ್ ಚಾಟ್ ಅಪ್ಲಿಕೇಶನ್ ಸ್ಲಾಕ್ ಪ್ರಕಾರ, ತಮ್ಮ ಕೆಲಸದಲ್ಲಿ AI ಅನ್ನು ಅಳವಡಿಸಿಕೊಂಡಿರುವ ಭಾರತೀಯ ಸಂಸ್ಥೆಗಳು ಇದನ್ನು ಅಳವಡಿಸಿಕೊಳ್ಳದ ಕಂಪನಿಗಳಿಗಿಂತ ಶೇಕಡಾ 53 ರಷ್ಟು ಹೆಚ್ಚು ಉತ್ಪಾದಕತೆಯ ಮಟ್ಟ ಹೊಂದಿವೆ ಎಂದು ವರದಿ ತೋರಿಸಿದೆ.

"ಬುದ್ಧಿವಂತ ಪರಿಕರಗಳ ಕಾರ್ಯತಂತ್ರದ ಬಳಕೆ ಮತ್ತು ಪ್ರಕ್ರಿಯೆಗಳ ಆಪ್ಟಿಮೈಸೇಶನ್ ಮೂಲಕ, ಉದ್ಯೋಗಿಗಳು ಅಭಿವೃದ್ಧಿ ಹೊಂದುವ ಮತ್ತು ಅರ್ಥಪೂರ್ಣ ಕೊಡುಗೆಗಳನ್ನು ನೀಡುವ ವಾತಾವರಣವನ್ನು ನಾವು ರಚಿಸಬಹುದು. ವ್ಯವಸ್ಥಾಪಕರು ಮತ್ತು ಉದ್ಯೋಗಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸರಿಯಾದ ಸಾಧನಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಭಾರತೀಯ ಕಂಪನಿಗಳು ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಭಾರತದಲ್ಲಿನ ಡೆಸ್ಕ್ ಕಾರ್ಮಿಕರ ನಿಜವಾದ ಸಾಮರ್ಥ್ಯ ಹೊರಹಾಕುವ ಸಾಮರ್ಥ್ಯ ಹೊಂದಿವೆ" ಎಂದು ಸ್ಲಾಕ್ ಟೆಕ್ನಾಲಜಿ ಇವಾಂಜೆಲಿಸ್ಟ್ ಡೆರೆಕ್‌ಗೆಲ್ ಲಾನೆಸ್ ಹೇಳಿದರು.

ನಿತ್ಯದ ಕೆಲಸ ಸ್ವಯಂಚಾಲಿತಗೊಳಿಸಲು ಎಐ ಬಳಕೆ:ದಿನನಿತ್ಯದ ಖರ್ಚು ವೆಚ್ಚದ ವರದಿಗಳಂಥ ದಿನನಿತ್ಯದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವುದು ತಮ್ಮ ಉತ್ಪಾದಕತೆಯನ್ನು ಸುಧಾರಿಸುತ್ತದೆ ಎಂದು ಜಾಗತಿಕವಾಗಿ ಸುಮಾರು ಶೇಕಡಾ 77 ರಷ್ಟು ಉದ್ಯೋಗಿಗಳು ಹೇಳುತ್ತಾರೆ. ಕೆಲಸದಲ್ಲಿ ಯಾಂತ್ರೀಕರಣವನ್ನು ಬಳಸುವುದರಿಂದ ವಾರಕ್ಕೆ ಕನಿಷ್ಠ 3.6 ಗಂಟೆಗಳಷ್ಟು ಉಳಿತಾಯ ಮಾಡಬಹುದು ಎಂದು ಜಾಗತಿಕವಾಗಿ ಉದ್ಯೋಗಿಗಳ ಅಭಿಪ್ರಾಯವಾಗಿದೆ. ಅಂದರೆ ಅರ್ಥಪೂರ್ಣ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರತಿ ಉದ್ಯೋಗಿಗೆ ವರ್ಷಕ್ಕೆ ಕನಿಷ್ಠ ಒಂದು ಕೆಲಸದ ತಿಂಗಳು ಸಿಗುವಷ್ಟು ಅವಧಿಗೆ ಇದು ಸಮನಾಗಿರುತ್ತದೆ. ಇದಲ್ಲದೇ ತಮಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಕೆಲಸ ಮಾಡುವ ವೇಳಾಪಟ್ಟಿಯನ್ನು ಉದ್ಯೋಗದಾತ ಕಂಪನಿಗಳು ನೀಡಿದರೆ ತಮ್ಮ ಕೆಲಸದ ಉತ್ಪಾದಕತೆ ಮತ್ತೂ ಹೆಚ್ಚಾಗಲಿದೆ ಎಂಬುದು ಉದ್ಯೋಗಿಗಳ ಅಭಿಪ್ರಾಯವಾಗಿದೆ.

ಜಾಗತಿಕವಾಗಿ ಕಾರ್ಮಿಕರು ಅವರಿಗೆ ಸರಿ ಹೊಂದುವ ಸ್ಥಳ (ಶೇ 36)ದಲ್ಲಿ ಕೆಲಸ ಮಾಡುವುದರಿಂದ ಮತ್ತು ವಿಶಿಷ್ಟವಾದ ಕೆಲಸದ ಸ್ಥಳದ ಪ್ರಯೋಜನಗಳಾದ ಊಟ ಅಥವಾ ಮನರಂಜನಾ ಚಟುವಟಿಕೆಗಳನ್ನು (ಶೇ 32) ಒದಗಿಸುವುದು ಸಹ ಅವರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂತೋಷದ ಭಾವನೆ ಮತ್ತು ಖುಷಿಯಿಂದ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ತಮ್ಮ ಉತ್ಪಾದಕತೆಗೆ ಪ್ರಮುಖ ಕಾರಣವಾಗಿದೆ ಎಂದು ಭಾರತದಲ್ಲಿನ ಬಹುಪಾಲು (94 ಪ್ರತಿಶತ) ಉದ್ಯೋಗಿಗಳು ಹೇಳುತ್ತಾರೆ.

ತಮ್ಮ ತಂಡದ ಸದಸ್ಯರಿಗೆ ಕೆಲಸ ಮತ್ತು ಜೀವನದಲ್ಲಿ ಸಮತೋಲನ ಸಾಧಿಸಲು ಸಹಾಯ ಮಾಡುವುದಲ್ಲಿ ಎದುರಾಗುವ ಸಮಸ್ಯೆಗಳಿಂದ ಉತ್ಪಾದಕತೆ ಹೆಚ್ಚಿಸಲು ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಭಾರತೀಯ ಕಂಪನಿಗಳಲ್ಲಿನ ಮ್ಯಾನೇಜರ್​ಗಳು. ಹಾಗೆಯೇ ಭಾರತದಲ್ಲಿ ಬುದ್ಧಿವಂತ ಉದ್ಯೋಗಿಗಳು ಬರೀ ಮೀಟಿಂಗ್​ಗಳು ಮತ್ತು ಇಮೇಲ್‌ಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ಅವರ ಉತ್ಪಾದಕತೆ ಕಡಿಮೆಯಾಗುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : Meta ಉಚಿತ ಎಐ ಮಾಡೆಲ್ Llama-2 ಬಿಡುಗಡೆ; ಚಾಟ್​ಜಿಪಿಟಿ, ಬಾರ್ಡ್​ಗೆ ಪೈಪೋಟಿ

For All Latest Updates

ABOUT THE AUTHOR

...view details