ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಮಲಗುವ ಸಮಯದಲ್ಲಿ ತಮ್ಮ ಐಫೋನ್ ಚಾರ್ಜ್ ಹಾಕಿಟ್ಟು ಮಲಗುವವರಿಗೆ ಆ್ಯಪಲ್ ಮಹತ್ವದ ಎಚ್ಚರಿಕೆ ನೀಡಿದೆ. ಚಾರ್ಜಿಂಗ್ ಹಾಕಿಟ್ಟ ಫೋನ್ ಪಕ್ಕಕ್ಕೆ ಮಲಗಬೇಡಿ ಎಂದು ಅದು ಬಳಕೆದಾರರಿಗೆ ಸೂಚನೆ ನೀಡಿದೆ. ಫೋನ್ ಚಾರ್ಜಿಂಗ್ ಇಟ್ಟು ಅದರ ಪಕ್ಕಕ್ಕೆ ಮಲಗುವುದರಿಂದ ಅನಾರೋಗ್ಯ ಕಾಡಬಹುದು ಮತ್ತು ಗಾಯಗಳೂ ಉಂಟಾಗಬಹುದು ಎಂದು ಕಂಪನಿ ಹೇಳಿದೆ.
ತಮ್ಮ ತ್ವಚೆಯು ಮೊಬೈಲ್ ಸಾಧನ ಅಥವಾ ಚಾರ್ಜರ್ನೊಂದಿಗೆ ನೇರ ಸಂಪರ್ಕಕ್ಕೆ ಬರದಿರುವಂತೆ ಸಾಮಾನ್ಯ ಜ್ಞಾನ ಬಳಸುವಂತೆ ಕಂಪನಿ ಗ್ರಾಹಕರನ್ನು ಕೇಳಿದೆ. "ಸಾಧನ, ಪವರ್ ಅಡಾಪ್ಟರ್ ಅಥವಾ ವೈರ್ಲೆಸ್ ಚಾರ್ಜರ್ ಮೇಲೆ ಮಲಗಬೇಡಿ ಅಥವಾ ವಿದ್ಯುತ್ ಮೂಲಕ್ಕೆ ಸಂಪರ್ಕಿಸಿದಾಗ ಅವುಗಳನ್ನು ಕಂಬಳಿ, ದಿಂಬು ಅಥವಾ ನಿಮ್ಮ ದೇಹದ ಕೆಳಗೆ ಇಡಬೇಡಿ. ನಿಮ್ಮ ಐಫೋನ್, ಪವರ್ ಅಡಾಪ್ಟರ್ ಮತ್ತು ಯಾವುದೇ ವೈರ್ಲೆಸ್ ಚಾರ್ಜರ್ ಅನ್ನು ಬಳಕೆಯಲ್ಲಿರುವಾಗ ಅಥವಾ ಚಾರ್ಜ್ ಮಾಡುವಾಗ ಚೆನ್ನಾಗಿ ಗಾಳಿಯಾಡುವ ಪ್ರದೇಶದಲ್ಲಿ ಇರಿಸಿ" ಎಂದು ಕಂಪನಿ ಸಲಹೆ ನೀಡಿದೆ.
ದೇಹವು ಶಾಖದ ಪರಿಣಾಮವನ್ನು ಗ್ರಹಿಸುವ ಸಾಮರ್ಥ್ಯವಿಲ್ಲದ ವ್ಯಕ್ತಿಗಳಾಗಿದ್ದರೆ ಅಂಥವರು ವಿಶೇಷ ಕಾಳಜಿ ವಹಿಸುವಂತೆ ಸಲಹೆಯಲ್ಲಿ ಬಳಕೆದಾರರನ್ನು ಕೇಳಲಾಗಿದೆ. ಇದಲ್ಲದೆ, ಐಫೋನ್ಗಳನ್ನು ಚಾರ್ಜ್ ಮಾಡಲು ಸರಿಯಾದ ಪ್ರಮಾಣದ ವೋಲ್ಟೇಜ್ ನೀಡದ ಅಸುರಕ್ಷಿತ ಥರ್ಡ್-ಪಾರ್ಟಿ ಚಾರ್ಜರ್ಗಳನ್ನು ಬಳಸಬೇಡಿ ಎಂದು ಕಂಪನಿಯು ತನ್ನ ಬಳಕೆದಾರರಿಗೆ ಮನವಿ ಮಾಡಿದೆ. ಕಟ್ ಆದ, ಹರಿದ ಚಾರ್ಜಿಂಗ್ ವೈರ್ ಬಳಸದಂತೆಯೂ ಸಲಹೆ ನೀಡಲಾಗಿದೆ.
ಇದಲ್ಲದೆ ಸಿಂಕ್, ಬಾತ್ ಟಬ್ ಅಥವಾ ಶವರ್ ಸ್ಟಾಲ್ ನಂತಹ ಒದ್ದೆಯಾದ ಸ್ಥಳಗಳಲ್ಲಿ ಪವರ್ ಅಡಾಪ್ಟರ್ ಅನ್ನು ಬಳಸದಂತೆ ಮತ್ತು ಒದ್ದೆಯಾದ ಕೈಗಳಿಂದ ಪವರ್ ಅಡಾಪ್ಟರ್ ಅನ್ನು ಮುಟ್ಟದಂತೆ ಅಥವಾ ಸಂಪರ್ಕ ಕಡಿತಗೊಳಿಸದಂತೆ ಆ್ಯಪಲ್ ಹೇಳಿದೆ. ಕಾರಣಗಳು ಹೀಗಿವೆ..