ಕರ್ನಾಟಕ

karnataka

ETV Bharat / science-and-technology

Cyber crime: ಕೀಸ್ಟ್ರೋಕ್ ಕೇಳಿಸಿಕೊಂಡು ಪಾಸ್​​ವರ್ಡ್​ ಕಳ್ಳತನ ಸಾಧ್ಯ! ಹೇಗೆ ಅಂತೀರಾ? - It is possible to steal a password by listening

Cyber crime with the help of AI: ಕಂಪ್ಯೂಟರ್​​ನ ಕೀಬೋರ್ಡ್​​ನಲ್ಲಿ ಟೈಪಿಸುವ ಸದ್ದುಗಳನ್ನು ಎಐ ಮೂಲಕ ಆಲಿಸಿ ಟೈಪ್ ಮಾಡಲಾದ ಅಕ್ಷರ ಯಾವುದೆಂಬುದನ್ನು ಕಂಡು ಹಿಡಿಯಲು ಸಾಧ್ಯ ಎಂದು ಸಂಶೋಧಕರು ಹೇಳಿದ್ದಾರೆ.

AI with 95% accuracy can steal passwords
AI with 95% accuracy can steal passwords

By

Published : Aug 17, 2023, 7:30 PM IST

ಸ್ಯಾನ್ ಫ್ರಾನ್ಸಿಸ್ಕೋ: ಸುಮ್ಮನೆ ತನ್ನ ಪಾಡಿಗೆ ತಾನು ಟೈಪಿಸುತ್ತಿರುವ ವ್ಯಕ್ತಿಯ ಕೀ ಬೋರ್ಡ್​​ನ ಕೀಸ್ಟ್ರೋಕ್​ಗಳನ್ನು ಆಲಿಸುವ ಮೂಲಕ ಬಳಕೆದಾರರ ಪಾಸ್​ವರ್ಡ್​​ಗಳನ್ನು ನಿಖರವಾಗಿ ಕದಿಯಲು ಸಾಧ್ಯ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಯುಎಸ್ ಮೂಲದ ಕಾರ್ನೆಲ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿರ್ದಿಷ್ಟ ಸ್ಥಳದಲ್ಲಿ ಹತ್ತಿರದ ಸ್ಮಾರ್ಟ್​ ಫೋನ್​ನಲ್ಲಿ ಎಐ ಪ್ರೋಗ್ರಾಂ ಅನ್ನು ಸಕ್ರಿಯಗೊಳಿಸಿದಾಗ, ಶೇಕಡಾ 95 ರಷ್ಟು ನಿಖರತೆಯೊಂದಿಗೆ ಟೈಪ್ ಮಾಡಿದ ಪಾಸ್​​ವರ್ಡ್​ ಅನ್ನು ಕಂಡು ಹಿಡಿಯಲು ಸಾಧ್ಯವಾಯಿತು ಎಂದು ತಿಳಿಸಲಾಗಿದೆ.

ಜನಪ್ರಿಯ ಆಫ್-ದಿ-ಶೆಲ್ಫ್ ಲ್ಯಾಪ್​ಟಾಪ್​ ಎಂದು ಕರೆಯಲ್ಪಡುವ ಮ್ಯಾಕ್​ಬುಕ್​ ಪ್ರೊ ನ 2021 ಆವೃತ್ತಿಯಲ್ಲಿ ಕೀ ಸ್ಟ್ರೋಕ್ ಶಬ್ದಗಳನ್ನು ಗುರುತಿಸಲು ಯುಕೆಯ ಕಂಪ್ಯೂಟರ್ ವಿಜ್ಞಾನಿಗಳ ಗುಂಪು ಎಐ ಮಾಡೆಲ್​ಗೆ ತರಬೇತಿ ನೀಡಿದೆ ಎಂದು ವರದಿ ಹೇಳಿದೆ. ಜೂಮ್ ವೀಡಿಯೊ ಕಾನ್ಫರೆನ್ಸ್ ಸಮಯದಲ್ಲಿ, ಲ್ಯಾಪ್​ಟಾಪ್​​ನ ಮೈಕ್ರೊಫೋನ್ ಮೂಲಕ ಟೈಪ್ ಮಾಡಿದ್ದನ್ನು ಆಲಿಸಿ ಹ್ಯಾಕರ್-ಸ್ನೇಹಿ ಎಐ ಸಾಧನವು ಟೈಪ್​ ಮಾಡಿದ ಅಕ್ಷರಗಳನ್ನು ಅತ್ಯಂತ ನಿಖರವಾಗಿ ಕಂಡುಹಿಡಿದಿತ್ತು.

ಸಂಶೋಧಕರ ಪ್ರಕಾರ ಇದು ಕೀ ಸ್ಟ್ರೋಕ್​ಗಳನ್ನು ಶೇಕಡಾ 93 ರಷ್ಟು ನಿಖರತೆಯೊಂದಿಗೆ ಕಂಡು ಹಿಡಿದಿತ್ತು. ಹೀಗಾಗಿ ಹ್ಯಾಕರ್​ಗಳು ಬಳಕೆದಾರರ ಕೀ ಸ್ಟ್ರೋಕ್​​ಗಳನ್ನು ಆಲಿಸುವ ಮೂಲಕ ಪಾಸ್​​ವರ್ಡ್​ ಹಾಗೂ ವೈಯಕ್ತಿಕ ಡೇಟಾ ಕದಿಯಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಇದು "ಅಕೌಸ್ಟಿಕ್ ಸೈಡ್-ಚಾನೆಲ್ ದಾಳಿ" (acoustic side-channel attack) ಎಂದು ಕರೆಯಲ್ಪಡುವ ಒಂದು ರೀತಿಯ ಸೈಬರ್ ದಾಳಿಯಾಗಿದೆ.

"ಕೀಬೋರ್ಡ್ ಧ್ವನಿಯ ಮೂಲಕ ಅವರ ಪಾಸ್​​ವರ್ಡ್​ ಅಥವಾ ಇನ್ನಿತರ ಮಾಹಿತಿಗಳನ್ನು ಕದಿಯಬಹುದು ಎಂಬುದು ಬಹಳಷ್ಟು ಬಳಕೆದಾರರಿಗೆ ಗೊತ್ತಿಲ್ಲ. ಹೀಗಾಗಿ ಅಂಥವರು ಸೈಬರ್​ ವಂಚನೆಗೆ ಬೇಗನೆ ಬಲಿಯಾಗಬಹುದು" ಎಂದು ಅಧ್ಯಯನ ಹೇಳಿದೆ. "ಉದಾಹರಣೆಗೆ, ಪಾಸ್​ವರ್ಡ್​ ಟೈಪ್ ಮಾಡುವಾಗ, ಜನರು ನಿಯಮಿತವಾಗಿ ತಮ್ಮ ಸ್ಕ್ರೀನ್​​ ಅನ್ನು ಮರೆಮಾಡುತ್ತಾರೆ, ಆದರೆ ತಮ್ಮ ಕೀಬೋರ್ಡ್​​ನ ಧ್ವನಿಯು ಹೊರಗಡೆ ಕೇಳಿಸದಂತೆ ಏನೂ ಮಾಡುವುದಿಲ್ಲ" ಎಂದು ಅದು ಹೇಳಿದೆ.

ನಿಖರತೆಯನ್ನು ಪರೀಕ್ಷಿಸಲು, ಸಂಶೋಧಕರು ಲ್ಯಾಪ್​ಟಾಪ್​ನಲ್ಲಿ 36 ಕೀಗಳನ್ನು ತಲಾ 25 ಬಾರಿ ಒತ್ತಿ ಪರೀಕ್ಷೆ ಮಾಡಿದ್ದಾರೆ. ಪ್ರತಿ ಬಾರಿಯ ಒತ್ತುವಿಕೆಯಲ್ಲಿ ಬೆರಳು ಬದಲಾದಂತೆ ಒತ್ತಡವೂ ಬದಲಾಗುತ್ತದೆ ಎಂಬುದನ್ನು ಅವರು ಕಂಡು ಹಿಡಿದಿದ್ದಾರೆ. ಪ್ರತಿ ಬಾರಿಯೂ ಕೀ ಒಂದನ್ನು ಟೈಪಿಸಿದಾಗ ಪ್ರತ್ಯೇಕ ಕೀ ಗಳು ಯಾವ ರೀತಿಯಲ್ಲಿ ಧ್ವನಿಯನ್ನು ಹೊರಸೂಸುತ್ತವೆ ಎಂಬುದನ್ನು ಎಐ ಮಾಡೆಲ್​ಗಳು ಸುಲಭವಾಗಿ ಕಂಡುಹಿಡಿಯಬಹುದು.

ಹಾನಿಯನ್ನು ಉಂಟುಮಾಡುವ ಉದ್ದೇಶದಿಂದ ಕಂಪ್ಯೂಟರ್, ಕಂಪ್ಯೂಟಿಂಗ್ ಸಿಸ್ಟಮ್ ಅಥವಾ ಕಂಪ್ಯೂಟರ್ ನೆಟ್​​ವರ್ಕ್​​ಗೆ ಅನಧಿಕೃತ ಪ್ರವೇಶವನ್ನು ಪಡೆಯುವ ಯಾವುದೇ ಪ್ರಯತ್ನವನ್ನು ಸೈಬರ್ ದಾಳಿ ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಸಿಸ್ಟಮ್ ಗಳನ್ನು ನಿಷ್ಕ್ರಿಯಗೊಳಿಸುವುದು, ಅಡ್ಡಿಪಡಿಸುವುದು, ನಾಶಪಡಿಸುವುದು ಅಥವಾ ನಿಯಂತ್ರಿಸುವುದು ಅಥವಾ ಈ ವ್ಯವಸ್ಥೆಗಳೊಳಗಿನ ಡೇಟಾವನ್ನು ಬದಲಾಯಿಸುವುದು, ನಿರ್ಬಂಧಿಸುವುದು, ಅಳಿಸುವುದು, ಕುಶಲತೆಯಿಂದ ನಿರ್ವಹಿಸುವುದು ಅಥವಾ ಕದಿಯುವ ಗುರಿಯನ್ನು ಸೈಬರ್ ದಾಳಿಗಳು ಹೊಂದಿವೆ.

ಇದನ್ನೂ ಓದಿ :SIM Dealers: ಸಿಮ್​ ಡೀಲರ್​ಗಳಿಗೆ ಪೊಲೀಸ್​ ವೆರಿಫಿಕೇಶನ್ ಕಡ್ಡಾಯ; ಬಲ್ಕ್​​ ಮಾರಾಟಕ್ಕೆ ನಿರ್ಬಂಧ

ABOUT THE AUTHOR

...view details