ಕರ್ನಾಟಕ

karnataka

ETV Bharat / science-and-technology

ಹ್ಯಾಕರ್​ಗಳಿದ್ದಾರೆ ಹುಷಾರ್​.. ಕುಕೊಯಿನ್​ ಖಾತೆ ಹ್ಯಾಕ್​​ ಮಾಡಿದ ಗ್ಯಾಂಗ್​.. 22600 ಡಾಲರ್​​​​​​​​​​​ ಕಳ್ಳತನ! - KuCoin ನ Twitter ಖಾತೆ

ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಕುಕೊಯಿನ್‌ನ ಖಾತೆಯನ್ನು 45 ನಿಮಿಷಗಳ ಕಾಲ ಹ್ಯಾಕ್ ಮಾಡಲಾಗಿತ್ತು. ಆ ಸಮಯದಲ್ಲಿ 22 ಬಿಟ್‌ಕಾಯಿನ್ ಮತ್ತು ಎಥೆರಿಯಮ್ ವಹಿವಾಟುಗಳನ್ನು ನಿರ್ಬಂಧಿಸಿ, ವಿಥ್​ ಡ್ರಾ ಮಾಡಿಕೊಳ್ಳಲಾಗಿದೆ ಕ್ರಿಪ್ಟೋ ಎಕ್ಸ್‌ಚೇಂಜ್ ಕುಕೊಯಿನ್ ವರದಿ ಮಾಡಿದೆ.

Etv Bharat
Etv Bharat

By

Published : Apr 26, 2023, 11:53 AM IST

ನವದೆಹಲಿ: ಸಿಂಗಾಪುರ ಮೂಲದ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಕುಕೊಯಿನ್ ತನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ. ಇದು ಹ್ಯಾಕರ್‌ಗಳಿಗೆ ಉತ್ತೇಜಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಈ ಪರಿಣಾಮವಾಗಿ $22,600 ಡಾಲರ್​​ ಮೌಲ್ಯದ ಕ್ರಿಪ್ಟೋಕರೆನ್ಸಿ ಕಳ್ಳತನವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕಂಪನಿ "ಇಟಿಡಿರೇಟ್ KuCoin.com ಹ್ಯಾಂಡಲ್ ಅನ್ನು 00:00 ಏಪ್ರಿಲ್ 24 ರಿಂದ (UTC ಪ್ಲಸ್ 2) ಸರಿಸುಮಾರು 45 ನಿಮಿಷಗಳ ಕಾಲ ಹ್ಯಾಕ್ ಮಾಡಲಾಗಿತ್ತು. ಈ ಮೂಲಕ ಕಂಪನಿ ಟ್ವಿಟರ್​ ಅಕೌಂಟ್​ನಲ್ಲಿ ನಕಲಿ ಚಟುವಟಿಕೆಗಳನ್ನು ನಡೆಸಲಾಗಿದ್ದು, ಆ ಸಮಯದಲ್ಲಿ ನಕಲಿ ಪೋಸ್ಟ್​ಗಳನ್ನ ಮಾಡಲಾಗಿದೆ. ಇನ್ನು ದುರದೃಷ್ಟವಶಾತ್ ಅನೇಕ ಬಳಕೆದಾರರ ಆಸ್ತಿಯನ್ನೂ ಕೂಡಾ ಈ ಮೂಲಕ ನಿರ್ಬಂಧಿಸಲಾಗಿದೆ. ಇದರಿಂದ ಕಂಪನಿಗೆ ಅಪಾರ ನಷ್ಟವಾಗಿದೆ ಎಂದು ಕಂಪನಿ ಹೇಳಿದೆ.

ಇದು ಕೇವಲ KuCoin ನ Twitter ಖಾತೆಯನ್ನು ಮಾತ್ರವೇ ಹ್ಯಾಕ್​ ಮಾಡಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ, ಅಧಿಕೃತ Twitter ಖಾತೆಯನ್ನು ತಕ್ಷಣ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಎಲ್ಲ ಕ್ರಮವನ್ನು ಕೈಗೊಂಡಿದ್ದೇವೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಉಲ್ಲಂಘನೆ ಮತ್ತು ನಕಲಿ ಚಟುವಟಿಕೆಯಿಂದಾಗಿ ಉಂಟಾದ ಎಲ್ಲ ಬಗೆಯ ಹಾನಿಯನ್ನು ಸಂಪೂರ್ಣವಾಗಿ ಮರುಪಾವತಿಸುವುದಾಗಿ ಕಂಪನಿ ಇದೇ ವೇಳೆ ಭರವಸೆ ನೀಡಿದೆ. 45 ನಿಮಿಷಗಳ ಸಂಕ್ಷಿಪ್ತ ಅವಧಿಗೆ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದರೂ, ಆ ಸಮಯದಲ್ಲಿ 22 ಬಿಟ್‌ಕಾಯಿನ್ ಮತ್ತು ಎಥೆರಿಯಮ್ ವಹಿವಾಟುಗಳನ್ನು ಹ್ಯಾಕ್​ ಮಾಡಿ ವಿಥ್​ ಡ್ರಾ ಮಾಡಲಾಗಿದೆ ಎಂದು ಕ್ರಿಪ್ಟೋ ಎಕ್ಸ್‌ಚೇಂಜ್ ವರದಿ ಮಾಡಿದೆ. ಇದು ದುರದೃಷ್ಟವಶಾತ್ ಹ್ಯಾಕರ್‌ಗಳಿಗೆ ಒಟ್ಟು $22,628 ಕದಿಯಲು ಸಾಧ್ಯವಾಗಿದೆ.

ಈ ಘಟನೆಯಿಂದ ಎಚ್ಚೆತ್ತುಕೊಂಡಿದರುವ ಕಂಪನಿಯು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸುತ್ತದೆ ಎಂದು ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. " ಏಪ್ರಿಲ್ 24 ರಂದು, 22,628 ಅಮೆರಿಕನ್​ ಡಾಲರ್​ ಮೌಲ್ಯದ ಮೋಸದ ಚಟುವಟಿಕೆಗಳನ್ನು ಪತ್ತೆ ಹಚ್ಚಿದ್ದು, ಅದನ್ನು ವಶಕ್ಕೆ ಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಈ ಘಟನೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು KuCoin ಡಾಟ್ ಕಾಂ ತಿಳಿಸಿದೆ.

2020 ರಲ್ಲಿ ಕುಕೊಯಿನ್‌ನ ಕಂಪನಿಯ ವೆಬ್​ಸೈಟ್​ ಹ್ಯಾಕ್​ ಮಾಡಿ 150 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಕಳ್ಳತನ ಮಾಡಲಾಗಿತ್ತು. ಈ ವೇಳೆ ತನಿಖೆ ನಡೆಸಿದ್ದ ಕಂಪನಿ, ಹ್ಯಾಕ್​ ಮಾಡಲಾದ ಸಮಯದಲ್ಲಿ ಭಾರಿ ಮೊತ್ತದ ಹಣ ವಾಪಸ್​ ಪಡೆದಿರುವುದನ್ನು ಪತ್ತೆ ಹಚ್ಚಲಾಗಿತ್ತು. ಇದೇ ವೇಳೆ, ಟ್ವಿಟರ್‌ನ ಅಸ್ತಿತ್ವದಲ್ಲಿರುವ 2FA (ಟು-ಫ್ಯಾಕ್ಟರ್ ಅಥೆಂಟಿಕೇಶನ್) ಜೊತೆಗೆ, KuCoin ತಂಡವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಭದ್ರತೆಯನ್ನು ಬಲಪಡಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸುತ್ತದೆ ಎಂದು ಕಂಪನಿ ಮೂಲಗಳನ್ನು ಉಲ್ಲೇಖಿಸಿ ಭರವಸೆ ನೀಡಲಾಗಿದೆ. "ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ನಾವು ಟ್ವಿಟರ್‌ನೊಂದಿಗೆ ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ" ಎಂದು ಕಂಪನಿ ಹೇಳಿದೆ. ಇದನ್ನೂ ಓದಿ:ಟ್ವಿಟರ್ ಯೂಟರ್ನ್: ಪೇ ಮಾಡದಿದ್ದರೂ ಅನೇಕರಿಗೆ ಮರಳಿ ಸಿಕ್ಕ ಬ್ಲೂಟಿಕ್!

ABOUT THE AUTHOR

...view details