ನವದೆಹಲಿ: ಮೆಟಾ ಹಿಡಿತದಲ್ಲಿರುವ ಮೆಸೇಜಿಂಗ್ ಆ್ಯಪ್‌ಗಳಲ್ಲಿ ವಾಟ್ಸ್ಆ್ಯಪ್ ಕೂಡಾ ಒಂದು. ಈ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಇದು ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಹೌದು, ಜೂಮ್ ಮತ್ತು ಗೂಗಲ್ ಮೀಟ್‌ನಂತೆಯೇ ಒಂದೇ ಸಮಯದಲ್ಲಿ ಹೆಚ್ಚಿನ ಜನರೊಂದಿಗೆ ಇನ್ಮುಂದೆ ವಾಟ್ಸ್ಆ್ಯಪ್ನಲ್ಲಿ ಕರೆ ಮಾಡಬಹುದಾಗಿದೆ.
ಇದಕ್ಕಾಗಿ ವಾಟ್ಸ್ಆ್ಯಪ್ ಕ್ರಿಯೇಟ್ ಕಾಲ್ ಲಿಂಕ್ ಎಂಬ ಹೊಸ ಫೀಚರ್ ತಂದಿದೆ. ಈ ವೈಶಿಷ್ಟ್ಯ ಈಗಾಗಲೇ ಅನೇಕ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇತರ ಆ್ಯಪ್‌ಗಳಿಗಿಂತ ಭಿನ್ನವಾಗಿ ಗ್ರೂಪ್ ಕಾಲಿಂಗ್ ಅನ್ನು ಬಳಕೆದಾರರಿಗೆ ಹೆಚ್ಚು ಸುಲಭವಾಗಿಸಲು ಈ ವೈಶಿಷ್ಟ್ಯ ಪರಿಚಯಿಸಲಾಗಿದೆ ಎಂದು ವಾಟ್ಸ್ಆ್ಯಪ್ ಹೇಳೀದೆ.
ಈ ಹೊಸ ಫೀಚರ್ನನ್ನು ಬಳಸುವುದು ಹೇಗೆ ಗೊತ್ತಾ?:
- ವಾಟ್ಸ್ಆ್ಯಪ್ ಓಪನ್ ಮಾಡಿ, ಬಳಿಕ ಚಾಟ್ ಪೇಜ್ನಲ್ಲಿರುವ ಕರೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಕ್ರಿಯೇಟ್ ಕಾಲ್ ಲಿಂಕ್ ಫೀಚರ್ ಕಾಣಲಿದೆ.
- ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಕರೆ ಪ್ರಕಾರ - ಆಡಿಯೋ/ವಿಡಿಯೋ, ವಾಟ್ಸ್ಆ್ಯಪ್ ಮೂಲಕ ಲಿಂಕ್ ಕಳುಹಿಸಿ, ಲಿಂಕ್ ಅನ್ನು ಕಾಪಿ ಅಥವಾ ಲಿಂಕ್ ಅನ್ನು ಹಂಚಿಕೊಳ್ಳಿ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
- ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರು ಆಯ್ಕೆ ಮಾಡಿದ ಕರೆ ಪ್ರಕಾರವನ್ನು ಆಧರಿಸಿ ಲಿಂಕ್ ಅನ್ನು ರಚಿಸಲಾಗಿದೆ. ಬಳಕೆದಾರರು ವಾಟ್ಸ್ಆ್ಯಪ್ ಮೂಲಕ ಲಿಂಕ್ ಅನ್ನು ಇತರರಿಗೆ ಕಳುಹಿಸಬಹುದು, ಕಾಪಿ ಮಾಡಬಹುದು ಅಥವಾ ಹಂಚಿಕೊಳ್ಳಬಹುದು.
- ಇತರ ಬಳಕೆದಾರರು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅವರು ಎರಡು ಆಯ್ಕೆಗಳನ್ನು ನೋಡುತ್ತಾರೆ. ಅವುಗಳೆಂದರೇ, ಜಾಯಿನ್ ಅಥವಾ ಲೀವ್. ಜಾಯಿನ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಗುಂಪು ಕರೆಯಲ್ಲಿ ಭಾಗವಹಿಸಬಹುದು. ಬಳಕೆದಾರರು ಒಮ್ಮೆ ರಚಿಸಿದ ಲಿಂಕ್ ಅನ್ನು 90 ದಿನಗಳವರೆಗೆ ಬಳಸಬಹುದು ಎಂದು ಟೆಕ್ ತಜ್ಞರು ಭಾವಿಸುತ್ತಾರೆ. ಈ ಬಗ್ಗೆ ವಾಟ್ಸ್ಆ್ಯಪ್ನಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.
- ಈ ಲಿಂಕ್ ಮೂಲಕ ಒಂದೇ ಬಾರಿಗೆ ಎಷ್ಟು ಜನರು ಗುಂಪು ಕರೆಯಲ್ಲಿ ಭಾಗವಹಿಸಬಹುದು ಎಂಬುದೂ ಅಸ್ಪಷ್ಟವಾಗಿದೆ. ಪ್ರಸ್ತುತ ಅಪ್‌ಡೇಟ್‌ನ ಪ್ರಕಾರ, ಒಂದು ಬಾರಿಗೆ 32 ಜನರು ವಾಟ್ಸ್ಆ್ಯಪ್ನಲ್ಲಿ ಭಾಗವಹಿಸಬಹುದು. ಶೀಘ್ರದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ.
- ಇತ್ತೀಚಿಗೆ ವಾಟ್ಸ್ಆ್ಯಪ್ ಗ್ರೂಪ್ ಸದಸ್ಯರ ಸಂಖ್ಯೆಯನ್ನು 512 ರಿಂದ 1024 ಕ್ಕೆ ಹೆಚ್ಚಿಸಲು ಪರೀಕ್ಷೆಯನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯವನ್ನು ಗ್ರೂಪ್ ಕಾಲಿಂಗ್‌ಗೂ ಪರಿಚಯಿಸುವಮತೆ ಕಾಣುತ್ತದೆ.
ಇದಲ್ಲದೆ, ವಾಟ್ಸ್ಆ್ಯಪ್ ಅನೇಕ ಆಂಡ್ರಾಯ್ಡ್ ಬಳಕೆದಾರರಿಗೆ ಕ್ರಿಯೇಟ್ ಅವತಾರ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ತಮ್ಮ ಆಯ್ಕೆಯ ಅವತಾರವನ್ನು ರಚಿಸಬಹುದು. ಅದರ ಆಧಾರದ ಮೇಲೆ, WhatsApp ಬಳಕೆದಾರರಿಗೆ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ನೀಡುತ್ತದೆ. ಬಳಕೆದಾರರು ಅದರಲ್ಲಿರುವ ಅವತಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಅದನ್ನು ಪ್ರೊಫೈಲ್ ಫೋಟೋ/ಡಿಪಿಯಾಗಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ:ವಾಟ್ಸ್ಆ್ಯಪ್ನಿಂದ ಶೀಘ್ರದಲ್ಲೇ ಗ್ರೂಪ್ ಪೋಲಿಂಗ್ ಫೀಚರ್ ಬಿಡುಗಡೆ