ಕರ್ನಾಟಕ

karnataka

ETV Bharat / science-and-technology

ವರ್ಷದ ಮೊದಲ ಉಡ್ಡಯನಕ್ಕೆ ಇಸ್ರೋ ಸಿದ್ಧತೆ: ನಾಳೆ 3 ಉಪಗ್ರಹ ಹೊತ್ತು ನಭಕ್ಕೆ ಜಿಗಿಯಲಿದೆ PSLV-C 52 - ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾವಣೆ

ನಾಳೆ ಉಡಾವಣೆಯಾಗಲಿರುವ ಭೂ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್​ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ಈ ಉಪಗ್ರಹ ವಿನ್ಯಾಸ ಮಾಡಲಾಗಿದೆ.

Countdown for launch of India's 'eye in the sky' satellite begins
ಭಾರತದ ಅತ್ಯಂತ ಪ್ರಮುಖ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

By

Published : Feb 13, 2022, 10:13 AM IST

Updated : Feb 13, 2022, 10:28 AM IST

ಚೆನ್ನೈ(ತಮಿಳುನಾಡು): ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಪಿಎಸ್‌ಎಲ್‌ವಿ-ಸಿ 52 ರಾಕೆಟ್‌ ಅನ್ನು ನಾಳೆ ಉಡಾವಣೆ ಮಾಡಲಿದ್ದು, ಕ್ಷಣಗಣನೆ ಆರಂಭವಾಗಿದೆ.

ಈ ರಾಕೆಟ್​ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗುತ್ತದೆ. ಈಗ RISAT-1A ಉಪಗ್ರಹವನ್ನು ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂದು ನಾಮಕರಣ ಮಾಡಲಾಗಿದೆ.

ಉಡಾವಣೆಯಾಗಲಿರುವ ಭೂ ವೀಕ್ಷಣಾ ಉಪಗ್ರಹದಲ್ಲಿ INSPIREsat-1 ಮತ್ತು INS-2TD ಸೇರಿದಂತೆ ಒಟ್ಟು ಮೂರು ಸಣ್ಣ ಉಪಗ್ರಹಗಳಿರಲಿವೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 5.59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆಗೊಳ್ಳಲಿದೆ.

ಪಿಎಸ್​ಎಲ್​ವಿ ರಾಕೆಟ್​ನ ನಾಲ್ಕು ಹಂತಗಳು ಅಥವಾ ಇಂಜಿನ್​ಗಳನ್ನು ಹೊಂದಿದ್ದು, ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ಇಂಧನವನ್ನು ತುಂಬಲಾಗಿದೆ. ಮೊದಲ ಮತ್ತು ಮೂರನೇ ಹಂತದಲ್ಲಿ ಘನ ಇಂಧನ, ಎರಡನೇ ಮತ್ತು ನಾಲ್ಕನೇ ಹಂತದಲ್ಲಿ ದ್ರವ ಇಂಧನದ ಮೂಲಕ ರಾಕೆಟ್ ಉಡಾವಣೆಗೊಳ್ಳಲಿದೆ.

44.4 ಮೀಟರ್ ಎತ್ತರ ಮತ್ತು 321 ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್​ನ ಒಟ್ಟು ಇಂಧನದ ತೂಕವೇ 9 ಟನ್ ಇರಲಿದೆ. ಜೊತೆಗೆ ಆರು ಬೂಸ್ಟರ್ ಮೋಟಾರ್​ಗಳನ್ನು ಇದು ಹೊಂದಿದ್ದು, ಇಂಧನ ಸಾಮರ್ಥ್ಯ ಹೆಚ್ಚಿಸಲಾಗಿದೆ.

ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ 1,710 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವನ್ನು 529 ಕಿಮೀ ದೂರದ ಕಕ್ಷೆಗೆ ತಲುಪಿಸಲಾಗುತ್ತದೆ. ಇದರ ಜೊತೆಗೆ 17.5 ಕೆಜಿ ಇರುವ INSPIREsat-1 ಮತ್ತು 8.1 ಕೆಜಿ ಇರುವ INS-2TD ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತದೆ. ಈ ಕಾರ್ಯಾಚರಣೆಯು ಕೇವಲ 18.78 ನಿಮಿಷಗಳಲ್ಲಿ ಮುಗಿಯುತ್ತದೆ ಎಂದು ತಿಳಿದುಬಂದಿದೆ.

ಉಪಯೋಗವೇನು?ಈಗ ಉಡಾವಣೆಯಾಗಲಿರುವ ಭೂ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್​ಗಳಿಗಾಗಿ ಕೆಲಸ ಮಾಡಲಿದೆ. ಎಂಥಹ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವಂತೆ ಈ ಉಪಗ್ರಹವನ್ನು ವಿನ್ಯಾಸ ಮಾಡಲಾಗಿದೆ.

ಈ ಉಪಗ್ರಹವು ಐದು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಹಗಲು- ರಾತ್ರಿಯ ವೇಳೆಯು ಕಾರ್ಯನಿರ್ವಹಣೆ ಮಾಡುತ್ತದೆ. ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇರುವ ಈ ಉಪಗ್ರಹ ರಾಷ್ಟ್ರದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದ ಹೇಳಲಾಗುತ್ತಿದೆ. ಉಪಗ್ರಹವು ಹೆಚ್ಚಿನ ಡೇಟಾ ನಿರ್ವಹಣೆಯಲ್ಲಿ ಅತ್ಯದ್ಭುತವಾಗಿದೆ. ಹೆಚ್ಚಿನ ಶೇಖರಣಾ ಸಾಧನಗಳನ್ನು ಹೊಂದಿದೆ.

ಇದನ್ನೂ ಓದಿ:ಫೆ.14ರಂದು ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಉಡಾವಣೆ

INSPIREsat-1 ಎಂಬುದು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IIST) ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವಾಗಿದೆ. ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಈ ಉಪಗ್ರಹ ನಿರ್ಮಾಣ ಮಾಡಲಾಗಿದೆ.

ಇನ್ನು INS-2TD ಉಪಗ್ರಹವನ್ನುಇಸ್ರೋ ನಿರ್ಮಾಣ ಮಾಡಿದ್ದು, ಇದರಲ್ಲಿರುವ ಥರ್ಮಲ್ ಇಮೇಜಿಂಗ್ ಕ್ಯಾಮೆರಾದ ಮೂಲಕ ತೇವ ಭೂಮಿಗಳು, ಸರೋವರಗಳು, ನೀರಿನ ಮೇಲ್ಮೈ ತಾಪಮಾನ ತಿಳಿಯಲು, ಬೆಳೆಗಳು, ಕಾಡುಗಳು ಲೆಕ್ಕಚಾರಕ್ಕೆ ಬಳಸಲಾಗುತ್ತದೆ.

Last Updated : Feb 13, 2022, 10:28 AM IST

ABOUT THE AUTHOR

...view details