ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್. ತನ್ನ ಗ್ರಾಹಕರ ಹಿತಾಸಕ್ತಿ ಕಾಪಾಡಲು ಯೋನೊ ಮತ್ತು ಯೊನೊ ಲೈಟ್‌ನಲ್ಲಿ ಹೊಸ ಮತ್ತು ವರ್ಧಿತ ಭದ್ರತಾ ಪೀಚರ್ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾಟ್‌ಫಾರ್ಮ್‌ಗಳ ಹೊಸ ಆವೃತ್ತಿಯು ಗ್ರಾಹಕರನ್ನು ವಿವಿಧ ಡಿಜಿಟಲ್ ವಂಚನೆಗಳಿಂದ ರಕ್ಷಿಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸಿಮ್ ಬೈಂಟಿಂಗ್ (SIM Binding) ಯೊನೊ ಮತ್ತು ಯೋನೊ ಲೈಟ್ ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳ ಸಿಮ್ ಹೊಂದಿರುವ ಸಾಧನಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಯೋನೊ ಮತ್ತು ಯೋನೊ ಲೈಟ್‌ನ ಹೊಸ ಆವೃತ್ತಿಯನ್ನು ಪಡೆಯಲು ಬಳಕೆದಾರರು ತಮ್ಮ ಮೊಬೈಲ್ ಅಪ್ಲಿಕೇಷನ್ ಅನ್ನು ಅಪ್ಡೇಟ್ ಮಾಡಬೇಕಾಗಿದೆ.
ಈ ಆ್ಯಪ್ನಲ್ಲಿ ಒಂದು ಬಾರಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನೋಂದಣಿ ಪ್ರಕ್ರಿಯೆ ನೋಂದಾಯಿಸುವ ಪ್ರಕ್ರಿಯೆಯು ನೋಂದಾಯಿತ ಮೊಬೈಲ್ ಸಂಖ್ಯೆಯ (RMN) ಸಿಮ್ ಅನ್ನು ಬ್ಯಾಂಕಿನೊಂದಿಗೆ ಪರಿಶೀಲಿಸುತ್ತದೆ. ಗ್ರಾಹಕರು ನೋಂದಾಯಿತ ಸಂಪರ್ಕ ಸಂಖ್ಯೆಯ ಸಿಮ್ ಹೊಂದಿರುವ ಸಾಧನದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.