ಚೆನ್ನೈ:ಭಾರತೀಯ ತಂತ್ರಜ್ಞಾನ ವಿದ್ಯಾಲಯ (ಐಐಟಿ) ಮದ್ರಾಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗವು ಏರ್ ಟ್ಯಾಕ್ಸಿ ವಿನ್ಯಾಸಗೊಳಿಸಿದ್ದು, ರಸ್ತೆ ಟ್ಯಾಕ್ಸಿಗಳಿಗಿಂತ ವೇಗವಾಗಿ ಆಕಾಶ ಮಾರ್ಗದಲ್ಲಿ ಸಂಚರಿಸಲಿದೆ.
ಐದು ವರ್ಷಗಳಲ್ಲಿ ಏರ್ ಟ್ಯಾಕ್ಸಿ ಸಾರ್ವಜನಿಕ ಬಳಕೆಗೆ ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ. 100 ಕಿ.ಮೀ ವ್ಯಾಪ್ತಿಯಲ್ಲಿ ಐದು ಕೆ.ಜಿ ವಸ್ತುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಏರ್ ಟ್ಯಾಕ್ಸಿ ಜುಲೈನಲ್ಲಿ ಪರಿಚಯಿಸಲಾಗುವುದು ಎಂದು ಹೇಳಿತ್ತು.
ಸಂಚಾರಿ ತಂತ್ರಜ್ಞಾನದ ಇಂಜಿನಿಯರ್ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪರೀಕ್ಷೆಯನ್ನು ನಡೆಸಲು ಎದುರು ನೋಡುತ್ತಿದ್ದಾರೆ. ಐಐಟಿ-ಮದ್ರಾಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪರವಾಗಿ, ವಿದ್ಯುತ್ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸಲು ಡ್ರೋನ್‌ಗಳನ್ನು ಈಗಾಗಲೇ ವಿನ್ಯಾಸಗೊಳಿಸಲಾಗಿದೆ. ನಾವು ಸಣ್ಣ ಗಾತ್ರದ ಟ್ಯಾಕ್ಸಿಗಳನ್ನು ವಿನ್ಯಾಸಗೊಳಿಸಿದ್ದು, ಕಾರ್ಯನಿರ್ವಹಣೆಗೆ ಸೀಮಿತ ಪ್ರಮಾಣದ ವಿದ್ಯುತ್ ಮಾತ್ರ ಬಳಕೆ ಮಾಡಿಕೊಳ್ಳಲಿವೆ ಎಂದು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಸತ್ಯ ನಾರಾಯಣ ಚಕ್ರವರ್ತಿ ಹೇಳಿದ್ದಾರೆ.
ಐದು ಕೆಜಿ ಪೇಲೋಡ್ ಸಾಮರ್ಥ್ಯದ ಸಣ್ಣ ಇ-ಪ್ಲೇನ್ ಟ್ಯಾಕ್ಸಿ ಪರಿಚಯಿಸಲು ನಾವು ಯೋಜಿಸಿದ್ದೇವೆ. ಕಠಿಣ ಮತ್ತು ಸಂಚಾರಿ ದಟ್ಟಣೆ ರಸ್ತೆ ಸಂಚಾರ ಮಾರ್ಗದಲ್ಲಿ ಕಸಿ ಶಸ್ತ್ರಚಿಕಿತ್ಸೆಗೆ ಪ್ರಮುಖ ಮಾನವ ಅಂಗಗಳನ್ನು ಸಾಗಿಸಲು ಈ ವಾಹನವನ್ನು ಬಳಸಬಹುದು. 50 ಕೆಜಿ ಪೇಲೋಡ್‌ನ ಏರ್ ಟ್ಯಾಕ್ಸಿಗಳ ಮೂಲಕ ಸಾಮರ್ಥ್ಯ, ಅಗತ್ಯ ಔಷಧಗಳಾದ ಲಸಿಕೆ ಮತ್ತು ಉಪಕರಣಗಳನ್ನು ಸಾಗಿಸಬಹುದು ಎಂದರು.