ಬೀಜಿಂಗ್, ಚೀನಾ:ಮಂಗಳ ಗ್ರಹದ ಮೇಲೆ ಮುಂದಿನ ತಿಂಗಳುಗಳಲ್ಲಿ ರೋವರ್ ಇಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಮಂಗಳನ ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಟಿಯಾನ್ವೆನ್-1 ಸ್ಪೇಸ್ ಕ್ರಾಫ್ಟ್ ಇಳಿಸಲಾಗಿದೆ ಎಂದು ಚೀನಾ ತಿಳಿಸಿದೆ.
ಬುಧವಾರ ಬೆಳಗ್ಗೆ ಚೀನಾದ ಕಾಲಮಾನದಂತೆ ಸ್ಪೇಸ್ ಕ್ರಾಫ್ಟ್ಅನ್ನು ಮಂಗಳನ ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಇಳಿಸಲಾಗಿದ್ದು, ಮುಂದಿನ ಮೂರು ತಿಂಗಳು ಅದೇ ಕಕ್ಷೆಯಲ್ಲಿ ಸ್ಪೇಸ್ ಕ್ರಾಫ್ಟ್ ಇರಲಿದೆ. ಇದಾದ ನಂತರ ಮಂಗಳನ ಮೇಲೆ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತದೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
ಕಕ್ಷೆಯಲ್ಲಿರುವ ವೇಳೆ ಮಂಗಳ ಗ್ರಹದ ಮೇಲ್ಮೈಯನ್ನು ಅಧ್ಯಯನ ಮಾಡಲಾಗುತ್ತದೆ. ಕ್ಯಾಮರಾ ಮತ್ತು ಇತರ ಸೆನ್ಸಾರ್ ಸಾಧನಗಳಿಂದ ವಿವಿಧ ರೀತಿಯ ಮಾಹಿತಿ ಸಂಗ್ರಹಣೆ ಮಾಡಲಾಗುತ್ತದೆ ಎಂದು ಚೀನಾ ಬಾಹ್ಯಾಕಾಶ ಆಡಳಿತ ಹೇಳಿದೆ.