ಸ್ಯಾನ್ ಫ್ರಾನ್ಸಿಸ್ಕೊ: ಸದ್ಯ ಚಾಟ್‌ಜಿಪಿಟಿ ಎಲ್ಲಡೆ ಸದ್ದು ಮಾಡುತ್ತಿದ್ದು, ಇದೀಗ ಎಲ್ಲ ರೀತಿಯ ಮೊಬೈಲ್ ಬಳಕೆದಾರರು ಇದರ ಸೇವೆ ಪಡೆಯಬಹುದಾಗಿದೆ. ಹೌದು. ಇಷ್ಟು ದಿನ ಆ್ಯಪಲ್ ಬಳಕೆದಾರರಿಗೆ ಲಭ್ಯವಿದ್ದ ಚಾಟ್‌ಜಿಪಿಟಿ ಇದೀಗ ಆ್ಯಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಾಗಲಿದೆ. ಈ ಸಂಬಂಧ ಒಪನ್ಎಐನ ಸ್ಯಾಮ್ ಆಲ್ಟಾಮನ್ ತಿಳಿಸಿದ್ದು, ತಮ್ಮ ಬಹುಖ್ಯಾತಿಯ ಎಐ ಚಾಟ್ಬಾಟ್ ಆಗಿರುವ ಚಾಟ್‌ಜಿಪಿಟಿ ಮುಂದಿನವಾರದಿಂದ ಆ್ಯಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಐಫೋನ್ಗಾಗಿ ಉಚಿತವಾಗಿ ಐಒಎಸ್ ಚಾಟ್ಬಾಟ್ ತಂದ ಬೆನ್ನಲ್ಲೇ ಚಾಟ್‌ಜಿಪಿಟಿ ಆ್ಯಂಡ್ರಾಯ್ಡ್ ಆ್ಯಪ್ ತರಲು ಸಜ್ಜಾಗಿದ್ದು, ಈ ಸಂಬಂಧ ಘೋಷಿಸಿತು. ಆ್ಯಂಡ್ರಾಯ್ಡ್ಗೆ ಚಾಟ್ಜಿಟಿಪಿಯನ್ನು ಮುಂದಿನವಾರದಿಂದ ಪರಿಚಯಿಸಲಾಗುವುದು. ಇದನ್ನು ಗೂಗಲ್ ಪ್ಲೈ ಸ್ಟೋರ್ನಿಂದ ಇಂದಿನಿಂದಲೇ ಪ್ರಿ ಆರ್ಡರ್ ಮಾಡಬಹುದಾಗಿದೆ.
ಐಒಎಸ್ಆ್ಯಪ್ ಮಾದರಿಯಲ್ಲೇ ಆ್ಯಂಡ್ರಾಯ್ಡ್ಗೂ ಚಾಟ್‌ಜಿಪಿಟಿ ಆ್ಯಪ್ ಇರಲಿದೆ. ಬಳಕೆದಾರರು ತಮ್ಮ ಮಾತುಕತೆ ಮತ್ತು ಆದ್ಯತೆಯನ್ನು ತಮ್ಮ ಸಾಧನದಲ್ಲಿ ಸಿಂಕ್ರನೈಸ್ ಮಾಡಬಹುದಾಗಿದೆ. ಆ್ಯಂಡ್ರಾಯ್ಡ್ ಈ ಸೇವೆ ಅಮೆರಿಕದ ಬಳಕೆದಾರರಿಗೆ ಮೊದಲು ಲಭ್ಯವಾಗಲಿದ್ದು, ಬಳಿಕ ಇತರ ರಾಷ್ಟ್ರಗಳಿಗೆ ಸಿಗಲಿದೆ. ಆದರೆ ಈ ಕಂಪನಿಯ ಕುರಿತು ಇನ್ನು ಯಾವುದೇ ಯೋಜನೆ ಹೊರ ಬಂದಿಲ್ಲ. ಗೂಗಲ್ ಪ್ಲೇಸ್ಟೋರ್ನಲ್ಲಿ ಪ್ರೀ ರಿಜಿಸ್ಟರ್ ಮಾಡಿಕೊಳ್ಳಲು ಒಬ್ಬರು ಇದಕ್ಕೆ ಸೈನ್ ಇನ್ ಆಗಬಹುದಾಗಿದೆ.
ಒಪನ್ ಎಐನ ಚಾಟ್ ಜಿಪಿಟಿಗೆ ಕಸ್ಟಮೈಸ್ಡ್ ಸೂಚನೆ ಫೀಚರ್ ಮೂಲಕ ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ (ಎಐ)-ಚಾಟ್ಬಾಟ್ ಭವಿಷ್ಯದ ಸಂಭಾಷಣೆಗೆ ಹಂಚಿಕೆಕೊಳ್ಳಬಹುದಾಗಿದೆ. ಕಸ್ಟಮ್ ಸೂಚನೆ ಸದ್ಯ ಬೀಟಾದಲ್ಲಿ ಬಳಕೆದಾರರಿಗೆ ಲಭ್ಯವಿದೆ. ಇದನ್ನೂ ಶೀಘ್ರ ಬಳಕೆದಾರರಿಗೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಬಳಕೆದಾರರು ತಮ್ಮ ಹೊಸ ಸಂಭಾಷಣೆಗಳನ್ನು ಯಾವುದೆ ಸಂದರ್ಭದಲ್ಲಿ ಕಸ್ಟಮ್ ಸೂಚನೆಗಳನ್ನು ಎಡಿಟ್ ಮತ್ತು ಡಿಲೀಟ್ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚಾಗಿ ಬಳಕೆದಾರರ ಸೂಚನೆಯನ್ನು ಶೇರ್ಡ್ ಲಿಂಕ್ ವೀವರ್ಸ್ನಲ್ಲಿ ಹಂಚಿಕೊಳ್ಳಬಹುದಾಗಿದೆ. ಕಳೆದ ತಿಂಗಳು ಒಪನ್ ಎಐ ಐಒಎಸ್ ಚಾಟ್‌ಜಿಪಿಟಿ ಅಪ್ಲಿಕೇಷನ್ ಅನ್ನು ಅಪ್ಡೇಟ್ ಮಾಡಿತು. ಕೊತೆಗೆ ಬಿಂಗ್ ಇಂಟಿಗ್ರೇಷನ್ ಅನ್ನು ಪ್ಲಸ್ ಪ್ಲಾನ್ ಬಳಕೆದಾರರಿಗೆ ಸೇರಿಸಿತು. ಕಂಪನಿ ಇದೀಗ ಹಿಸ್ಟರಿ ಸರ್ಚ್ ಅನ್ನು ಅಪ್ಡೇಡ್ ಜೊತೆ ಅಭಿವೃದ್ಧಿಪಡಿಸಿದೆ.
ಐಫೋನ್ ಬಳಕೆದಾರರಿಗೆ ಈಗಾಗಲೇ ಲಭ್ಯ: ಸದ್ಯ ಚಾಟ್ ಜಿಪಿಟಿ ಉಚಿತವಾಗಿ ಬಳಕೆಗೆ ಲಭ್ಯ ಇದೆ. ಏಪ್ರಿಲ್ನಲ್ಲೇ ಇದನ್ನು ಆ್ಯಪಲ್ ಬಳಕೆದಾರರಿಗೆ ರೋಲ್ ಔಟ್ ಮಾಡಲಾಗಿದೆ. ಇದು ಕೂಡ ವಿವಿಧ ಡಿವೈಸ್ಗಳಾದ್ಯಂತ ಹಿಸ್ಟರಿಯನ್ನು ಸಿಂಕ್ ಮಾಡಲಿದೆ. ಇದರಲ್ಲಿ ನಮ್ಮ ಓಪನ್ ಸೋರ್ಸ್ ಸ್ಪೀಚ್ ರಿಕಗ್ನಿಶನ್ ಸಿಸ್ಟಮ್ ಆಗಿರುವ ವಿಸ್ಪರ್ ಕೂಡ ಇರಲಿದ್ದು, ವಾಯ್ಸ್ ಇನ್ಪುಟ್ಗೆ ಸಹಾಯವಾಗುತ್ತಿದೆ. ಚಾಟ್ ಜಿಪಿಟಿ ಪ್ಲಸ್ ಚಂದಾದಾರರು ಜಿಪಿಟಿ-4ರ ಎಲ್ಲ ವೈಶಿಷ್ಟ್ಯಗಳನ್ನು ಐಒಎಸ್ ಬಳಕೆದಾರರು ಪಡೆಯುತ್ತಿದ್ದಾರೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯು ಸಮಸ್ತ ಮಾನವ ಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಓಪನ್ ಎಐ ಉದ್ದೇಶವಾಗಿದೆ.
ಇದನ್ನೂ ಓದಿ: ಚಾಟ್‌ಜಿಪಿಟಿ ಬಳಕೆ ಮಾಡೋದು ಹೇಗೆ.. ಅದರ ಅತ್ಯುತ್ತಮ ಸಾಮರ್ಥ್ಯಗಳೇನು..?