ಸ್ಯಾನ್ ಫ್ರಾನ್ಸಿಸ್ಕೊ : ಚಾಟ್‌ಜಿಪಿಟಿಯಂತಹ ಜನರೇಟಿವ್ ಕೃತಕ ಬುದ್ಧಿಮತ್ತೆ (ಎಐ) ಸಾಧನಗಳು ಅತಿಮಾನುಷ ಕಾರ್ಯಗಳನ್ನು (superhuman tasks) ನಿರ್ವಹಿಸಬಲ್ಲ ಅನ್ಯಲೋಕದ ಬುದ್ಧಿವಂತಿಕೆಯಂತಿದೆ, ಆದರೆ ಇದರಲ್ಲಿ ಮಾನವನಂತೆ ತಾರ್ಕಿಕವಾಗಿ ಯೋಚಿಸುವ ಕೊರತೆಯಿದೆ ಎಂದು ತಂತ್ರಜ್ಞಾನ ಕಂಪನಿ ಲಿಂಡೆನ್ ಲ್ಯಾಬ್ ಅನ್ನು ಸ್ಥಾಪಿಸಿದ ಅಮೇರಿಕನ್ ಉದ್ಯಮಿ ಫಿಲಿಪ್ ರೋಸ್‌ಡೇಲ್ ಹೇಳಿದ್ದಾರೆ. ಇವರು ಸೆಕೆಂಡ್ ಲೈಫ್‌ನ ಡೆವಲಪರ್ ಎಂದು ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಇರುವ ಜನರೇಟಿವ್ ಎಐ ಸ್ಥಿತಿಯನ್ನು ಇಂಟರ್ನೆಟ್‌ನ ಆರಂಭಿಕ ದಿನಗಳಿಗೆ ರೋಸ್‌ಡೇಲ್ ಹೋಲಿಸಿದ್ದಾರೆ. ಆಗ ಇಂಟರ್ನೆಟ್ ಬಗ್ಗೆ ಸಾಕಷ್ಟು ಉತ್ಸಾಹ ಹಾಗೂ ಮುಂದೇನಾಗಲಿದೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಸದ್ಯ ಚಾಟ್ಜಿಪಿಟಿ ಸ್ಥಿತಿ ಹಾಗೆಯೇ ಇದೆ ಎಂದು ಅವರು ತಿಳಿಸಿದ್ದಾರೆ.
ಅದ್ಭುತ ಸಾಮರ್ಥ್ಯಗಳ ಹೊರತಾಗಿಯೂ, ಪ್ರಸ್ತುತ AI ಮಾದರಿಗಳು ಮೆಮೊರಿಯನ್ನು ಓದುವ ಮತ್ತು ಬರೆಯುವ ಕೆಲಸಕ್ಕೆ ಸೀಮಿತವಾಗಿವೆ. ಹೀಗಾಗಿ ಇವು ಒಂದು ರೀತಿಯಲ್ಲಿ ಜೊಂಬಿ AI (ಜೊಂಬಿ - ಅನ್ಯಗ್ರಹದ ಜೀವಿಗಳು) ಗಳಾಗಿವೆ. ಇವು ಮಾನವರಂತೆ ಅರ್ಥ ಮಾಡಿಕೊಳ್ಳಲು ಮತ್ತು ತರ್ಕಿಸಲು ಸಾಧ್ಯವಿಲ್ಲವಾಗಿವೆ. ಇದಲ್ಲದೆ, ಸಾಫ್ಟ್‌ವೇರ್ ಕೋಡ್ ಬರೆಯುವ AI ಸಾಮರ್ಥ್ಯವು ನಿಜವಾಗಿಯೂ ಉತ್ತಮವಾಗಿದೆ. ಇದು ಪ್ರೋಗ್ರಾಮರ್‌ಗಳ ಸಮಯವನ್ನು ಉಳಿಸುತ್ತದೆ ಎಂದು ಎಂದು ಅವರು ಹೇಳಿದರು.
ಆದಾಗ್ಯೂ ಕಾಪಿರೈಟಿಂಗ್ ಬರೆಯುವುದು, ಚಿತ್ರ ಬಿಡಿಸುವುದು ಮತ್ತು ಹೊಸ ಒಳನೋಟಗಳನ್ನು ಒದಗಿಸುವಂತಹ ಸೃಜನಾತ್ಮಕ ಕಾರ್ಯಗಳನ್ನು ನಿರ್ವಹಿಸಲು AI ಸಮರ್ಥವಾಗಿದೆ. ನಾವು ಅಂತಿಮವಾಗಿ ಸಾಕಷ್ಟು ಲೆಕ್ಕಾಚಾರಗಳನ್ನು ಮಾಡುವ ಅವಕಾಶಗಳನ್ನು ಹೊಂದಿದ್ದೇವೆ. ಇದರಿಂದ ಹಲವಾರು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಆದರೆ ಚಾಟ್ ಜಿಪಿಟಿಯ ಅನೇಕ ಪ್ರಯೋಜನಗಳ ಹೊರತಾಗಿಯೂ, ಸಂಭವನೀಯ ಅಪಾಯವೂ ಇದೆ ಎಂದು ಎಂದು ರೋಸ್‌ಡೇಲ್ ತಿಳಿಸಿದರು.