ಸ್ಯಾನ್ಫ್ರಾನ್ಸಿಸ್ಕೋ: ಚಾಟ್ಜಿಪಿಟಿಯ ಸೃಷ್ಟಿಕರ್ತನಾಗಿದ್ದ ಓಪನ್ ಎಐನ ಸಿಇಒ ಸ್ಥಾನದಿಂದ ಸ್ಯಾಮ್ ಆಲ್ಟಮನ್ ಉದ್ಯೋಗದಿಂದ ವಜಾಗೊಂಡ ಮರು ದಿನವೇ ಮೈಕ್ರೋಸಾಫ್ಟ್ ಸಂಸ್ಥೆ ಅವರನ್ನು ಕೆಂಪು ಹಾಸಿನ(Red carpet) ಮೇಲೆ ಸ್ವಾಗತಿಸಿತು. ತಮ್ಮ ಮಾಜಿ ಸಿಇಒನ ಪದಚ್ಯುತಿಗೆ ಕೆಂಡಾಮಂಡಲವಾಗಿರುವ ಚಾಟ್ಜಿಪಿಟಿ ಡೆವಲಪ್ನ 500ಕ್ಕೂ ಉದ್ಯೋಗಿಗಳು ಇದೀಗ ಓಪನ್ಎಐಗೆ ಬೆದರಿಕೆ ಹಾಕಿದ್ದಾರೆ.
ಓಪನ್ಎಐನಲ್ಲಿ 770 ಉದ್ಯೋಗಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಓಪನ್ಎಐನಿಂದ ಸ್ಯಾಮ್ ವಜಾವನ್ನು ಖಂಡಿಸಿರುವ ಅವರು, ಉದ್ಯೋಗಿಯ ಬಗ್ಗೆ ಕಾಳಜಿ ಹೊಂದಿರದ ಕಂಪನಿಯೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಈ ಹಿಂದೆ ಸಹಿ ಮಾಡಿದಂತೆ ಓಪನ್ಎಐಗೆ ರಾಜೀನಾಮೆ ನೀಡುವ ಮತ್ತು ಮತ್ತೆ ಸೇರುವ ಆಯ್ಕೆಯನ್ನು ಮಾಡಬಹುದು. ಈಗಾಗಲೇ ಮೈಕ್ರೋಸಾಫ್ಟ್ ನಮಗೆ ಹೊಸ ಸ್ಥಾನ ಕಲ್ಪಿಸುವ ಭರವಸೆ ನೀಡಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಈ ಸಂಬಂಧ ಓಪನ್ ಎಐ ಬೋರ್ಡ್ಗೆ ಬರೆದ ಪತ್ರದಲ್ಲಿ 500ಕ್ಕೂ ಹೆಚ್ಚು ಮಂದಿ, ಮೈಕ್ರೋಸಾಫ್ಟ್ ನಮಗೆ ಹೊಸ ಉದ್ಯೋಗದ ಭರವಸೆಯನ್ನು ನೀಡಿದೆ. ನಾವು ಆಯ್ಕೆ ಮಾಡಿದರೆ, ಅಲ್ಲಿ ಸೇರಬಹುದು ಎಂಬುದನ್ನು ತಿಳಿಸಿದೆ.
ಸ್ಯಾಮ್ ಆಲ್ಟಮನ್ ವಜಾಕ್ಕೆ ಮುಖ್ಯ ಕಾರಣ ಓಪನ್ಎಐ ಮುಖ್ಯಸ್ಥ ವಿಜ್ಞಾನಿ ಇಲ್ಯಾ ಸುಟ್ಸಕೆವರ್ ಎಂದು ಹೇಳಲಾಗುತ್ತಿದೆ. ಇನ್ನು ಮಂಡಳಿಯ ನಿರ್ಧಾರದಲ್ಲಿ ಭಾಗಿಯಾಗಿದ್ದಕ್ಕೆ ಅವರು ವಿಷಾದಿಸಿದ್ದಾರೆ ಎಂದು ಕೂಡ ತಿಳಿಸಲಾಗಿದೆ. ಸ್ಯಾಮ್ ಆಲ್ಟಮನ್ ವಜಾದ ಸಂದರ್ಭದಲ್ಲಿ ಬೋರ್ಡ್ನಲ್ಲಿ ಮಾತನಾಡಿರುವ ಅವರು, ನಾನು ಎಂದಿಗೂ ಓಪನ್ಎಐ ಹಾನಿಗೊಳಿಸಲು ಇಷ್ಟಪಡುವುದಿಲ್ಲ. ನಾನು ಎಲ್ಲರನ್ನು ಇಷ್ಟಪಡುತ್ತೇನೆ. ನಾವು ಒಟ್ಟಾಗಿ ನಿರ್ಮಿಸೋಣ. ಮತ್ತೆ ಸಂಸ್ಥೆಗೆ ಸೇರಲು ಮಾಡಬೇಕಾದ ಎಲ್ಲಾ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಸಂಸ್ಥೆಗೆ ಉದ್ಯೋಗಿಗಳ ಬರೆದ ಪತ್ರದಲ್ಲಿ , ಓಪನ್ಎಐ ಕುರಿತು ದೂರದೃಷ್ಟಿ ನೋಡುವಲ್ಲಿ ಸಂಸ್ಥೆ ಅಸಮರ್ಥವಾಗಿದೆ ಎಂಬುದನ್ನು ನಿಮ್ಮ ಕ್ರಿಯೆ ಸ್ಪಷ್ಟಪಡಿಸಿದೆ. ಓಪನ್ಎಐ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿಲ್ಲ ಎಂಬುದು ನಿಮ್ಮ ನಡವಳಿಕೆ ಸ್ಪಷ್ಟಪಡಿಸಿದೆ. ಸಂಸ್ಥೆಯ ಸ್ಪರ್ಧೆ, ತೀರ್ಮಾನ ಮತ್ತು ನಮ್ಮ ಗುರಿ ಹಾಗೂ ಉದ್ಯೋಗಳ ಕಾಳಜಿ ಹೊಂದಿರದಂತಹ ಕಂಪನಿ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಓಪನ್ ಎಐ ತೊರೆದು, ಸ್ಯಾಮ್ ಅಲ್ಟಮನ್ ಮತ್ತು ಗ್ರೆಕ್ ಬ್ರಾಕ್ಮನ್ಗಾಗಿ ಹೊಸದಾಗಿ ಘೋಷಿಸಿರುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸ್ಯಾಮ್ ಆಲ್ಟಮನ್ ಅವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಂಡ ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾದೆಲ್ಲಾ, ತಮ್ಮ ಸಂಸ್ಥೆ ಎಲ್ಲಾ ಓಪನ್ಎಐಗೆ ಹೊಸ ಯೋಜನೆಯ ಭಾಗವಾಗಿಸಿ ಸ್ಥಾನ ಕಲ್ಪಿಸುವ ಭರವಸೆಯನ್ನು ನೀಡಿದೆ. ಆದರೆ, ಆಲ್ಟಮನ್ ಓಪನ್ಎಐಗೆ ಮತ್ತೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕುಲು ಸಾಧ್ಯವಿಲ್ಲ ಎಂದು ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಸಂಧಾನ ವಿಫಲ; ಓಪನ್ ಎಐಗೆ ಮರಳಲ್ಲ ಸ್ಯಾಮ್ ಆಲ್ಟ್ಮ್ಯಾನ್