ಸ್ಯಾನ್ ಫ್ರಾನ್ಸಿಸ್ಕೋ : ಭಾರತದಲ್ಲಿನ ಆ್ಯಂಡ್ರಾಯ್ಡ್ ಬಳಕೆದಾರರು ಈಗ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಚಾಟ್‌ಜಿಪಿಟಿಯನ್ನು ತಮ್ಮ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು OpenAI ಘೋಷಿಸಿದೆ. "ಆ್ಯಂಡ್ರಾಯ್ಡ್‌ಗಾಗಿ ಚಾಟ್‌ಜಿಪಿಟಿ ಈಗ ಯುಎಸ್, ಭಾರತ, ಬಾಂಗ್ಲಾದೇಶ ಮತ್ತು ಬ್ರೆಜಿಲ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ!" ಎಂದು ಕಂಪನಿಯು ಮಂಗಳವಾರ ಟ್ವೀಟ್ ಮಾಡಿದೆ.
"ಮುಂದಿನ ವಾರದಲ್ಲಿ ಇನ್ನಷ್ಟು ದೇಶಗಳಲ್ಲಿ ಚಾಟ್‌ಜಿಪಿಟಿ ಡೌನ್‌ಲೋಡ್ ಮಾಡಲು ಲಭ್ಯವಾಗಲಿದೆ" ಎಂದು ಓಪನ್ ಎಐ ಹೇಳಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿನ ಅಪ್ಲಿಕೇಶನ್‌ನಲ್ಲಿನ ವಿವರಣೆಯ ಪ್ರಕಾರ, ಆ್ಯಂಡ್ರಾಯ್ಡ್ನಲ್ಲಿನ ಚಾಟ್ ಜಿಪಿಟಿಯು ನಿಮ್ಮ ಡಿವೈಸ್ಗಳಲ್ಲಿನ ಹಿಸ್ಟರಿ ಸಿಂಕ್ ಮಾಡುತ್ತದೆ ಮತ್ತು ಓಪನ್ಎಐನ ಹೊಸ ಮಾಡೆಲ್ ಅಪ್ಡೇಟ್ಗಳನ್ನು ಒದಗಿಸುತ್ತದೆ" ಎಂದು ಬರೆಯಲಾಗಿದೆ.
AI ಚಾಟ್‌ಬಾಟ್ ಬಳಸಿ ಬಳಕೆದಾರರು ತ್ವರಿತ ಉತ್ತರಗಳು, ಸೂಕ್ತವಾದ ಸಲಹೆಗಳನ್ನು ಪಡೆಯಬಹುದು ಮತ್ತು ಸೃಜನಶೀಲತೆ ಹೆಚ್ಚಿಸಿಕೊಳ್ಳಬಹುದು. ಕಳೆದ ವಾರ, ಓಪನ್ ಎಐ ChatGPTಯಲ್ಲಿ ಹೊಸ 'ಕಸ್ಟಮೈಸ್ ಮಾಡಿದ ಸೂಚನೆಗಳು' (customised instructions) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಇದನ್ನು ಬಳಸಿ ಈ ಎಲ್ಲ ಕೆಲಸ ಮಾಡಿಕೊಳ್ಳಿ:ಇದನ್ನು ಬಳಸಿ ಭವಿಷ್ಯದ ಸಂಭಾಷಣೆಗಳಿಗಾಗಿ AI ಚಾಟ್‌ಬಾಟ್‌ನೊಂದಿಗೆ ಏನನ್ನಾದರೂ ಶೇರ್ ಮಾಡಿಕೊಳ್ಳಬಹುದು. ಪ್ಲಸ್ ಬಳಕೆದಾರರಿಗೆ ಕಸ್ಟಮ್ ಸೂಚನೆಗಳು ಪ್ರಸ್ತುತ ಬೀಟಾದಲ್ಲಿ ಲಭ್ಯವಿವೆ ಮತ್ತು ಕಂಪನಿಯು ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೆ ಮುಕ್ತವಾಗಿಸಲು ಯೋಜಿಸುತ್ತಿದೆ. ಹೊಸ ಸಂಭಾಷಣೆಗಳಿಗಾಗಿ ಬಳಕೆದಾರರು ಯಾವುದೇ ಸಮಯದಲ್ಲಿ ಕಸ್ಟಮ್ ಸೂಚನೆಗಳನ್ನು ಎಡಿಟ್ ಮಾಡಬಹುದು ಅಥವಾ ಅಳಿಸಬಹುದು.