ಸ್ಯಾನ್ ಫ್ರಾನ್ಸಿಸ್ಕೋ: ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿರುವ ಮಕ್ಕಳು ಇಂದು ಅಜ್ಜಿ-ಅಜ್ಜಂದಿರು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ನಿದ್ರೆಗೆ ಜಾರುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಕೊರತೆಯನ್ನು ನೀಗಿಸಲು ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಜ್ಜಾಗಿದೆ. ಇದಕ್ಕಾಗಿ ಚಾಟ್ಜಿಪಿಟಿ ಹೊಸ ಎಐ ಆಧಾರಿತ ಮಾದರಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದು ಮಕ್ಕಳಿಗೆ ಅವರ ಇಷ್ಟದ ಪಾತ್ರದಲ್ಲಿ ಚೆಂದದ ಕಥೆಯನ್ನು ರಾತ್ರಿ ಮಲಗುವ ಮುನ್ನ ಹೇಳಲಿದೆ.
ಬ್ಲುಯಿ ಜಿಪಿಟಿ ಎಂಬ ಕಥೆ ಹೇಳುವ ಎಐ ಈಗಾಗಲೇ ಕಾರ್ಯಾರಂಭ ಮಾಡಿದೆ. ಇದು ಹೆಸರು, ವಯಸ್ಸು, ಅವರ ದಿನಗಳನ್ನು ಕೇಳುವ ಮೂಲಕ ಕಥೆ ಹೇಳಬಲ್ಲದು. ಇದರ ಸಹೋದರಿ ಬಿಂಗೋ ಕೂಡ ಇದೇ ರೀತಿ ಅದರ ಶಾಲೆಯ ಹೆಸರು, ಇರುವ ಸ್ಥಳ, ಹೊರಗಿನ ವಾತಾವರಣಗಳ ಕುರಿತು ಮಾತನಾಡುವ ಮೂಲಕ ಮಕ್ಕಳನ್ನು ಹಿಡಿದಿಡುವ ಪ್ರಯತ್ನ ನಡೆಸಲಿದೆ ಎಂದು ಲಂಡನ್ ಮೂಲದ ಡೆವಲಪರ್ ಲುಕೆ ವಾರ್ನರ್ ತಿಳಿಸಿದ್ದಾರೆ.