ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಇಬ್ಬರು ಹದಿಹರೆಯದ ಆರ್ಯನ್ ಶರ್ಮಾ ಮತ್ತು ಆಯುಷ್ ಪಾಠಕ್ ಎಂಬುವರು ಸ್ಥಾಪಿಸಿದ ಕೃತಕ ಬುದ್ಧಿಮತ್ತೆ (ಎಐ) ಸ್ಟಾರ್ಟ್ಅಪ್ ಕಂಪನಿಯಲ್ಲಿ ಚಾಟ್ ಜಿಪಿಟಿ ಡೆವಲಪರ್ ಓಪನ್ಎಐ ಸಿಇಒ ಸ್ಯಾಮ್ ಆಲ್ಟಮನ್ ಹೂಡಿಕೆ ಮಾಡಿದ್ದಾರೆ. "ಮಾನವನಂತಹ ತಾರ್ಕಿಕತೆಯೊಂದಿಗೆ ಕ್ಲೌಡ್ನಲ್ಲಿ ಬ್ರೌಸರ್ನ ಕೆಲಸದ ಹರಿವುಗಳ ಕಾರ್ಯಗತಗೊಳಿಸುವಿಕೆಯನ್ನು ಸ್ವಯಂಚಾಲಿತಗೊಳಿಸುವ ವರ್ಚುವಲ್ ಎಐ ಕಾರ್ಮಿಕರನ್ನು ರಚಿಸಲು ನಾವು ಎಲ್ಲರಿಗೂ ಅವಕಾಶ ನೀಡುತ್ತೇವೆ" ಎಂದು ಶರ್ಮಾ ಬುಧವಾರ ಹೇಳಿದರು.
ಬಾಲಾಜಿ ಶ್ರೀನಿವಾಸನ್ (ಮಾಜಿ ಸಿಟಿಒ ಕಾಯಿನ್ ಬೇಸ್), ಜೂಲಿಯನ್ ವೈಸರ್ (ಸಹ-ಸಂಸ್ಥಾಪಕ, ಆನ್ ಡೆಕ್), ಟೈಲರ್ ವಿಲ್ಲೀಸ್ (ಸಹ-ಸಂಸ್ಥಾಪಕ, ಅನ್ ಸುಪರ್ ವೈಸಡ್), ಕೋರಿ ಲೆವಿ (ಝಡ್ ಫೆಲೋಸ್), ನಕುಲ್ ಗುಪ್ತಾ (ಕಾಯಿನ್ ಬೇಸ್), ಅಂಕುರ್ ನಂದ್ವಾನಿ (ಜೀಟಾಚೈನ್ ಸಂಸ್ಥಾಪಕ), ಸುದರ್ಶನ್ ಶ್ರೀಧರನ್ (ಪೈಪ್ ಲೈನ್ ಸಂಸ್ಥಾಪಕ), ರಾಹುಲ್ ಅಗರ್ವಾಲ್ (ಸಹ-ಸಂಸ್ಥಾಪಕ, ವ್ಯಾಲೆಂಟ್), ಎನ್ಜೋ ಕಾಗ್ಲಿಟೋರ್, ದಕ್ಷ್ ಮಿಗ್ಲಾನಿ (ಸಹ-ಸಂಸ್ಥಾಪಕ, ವ್ಯಾಲೆಂಟ್), ರಾಹುಲ್ ರಾಯ್, ಸನತ್ ಕಪೂರ್ (ಡ್ರ್ಯಾಗನ್ ಫ್ಲೈ ಕ್ಯಾಪಿಟಲ್), ಕೈಲರ್ ವಾಂಗ್ ಮತ್ತು ಕರಣ್ ದಲಾಲ್ ಈ ಎಂಜೆಲ್ ಇನ್ವೆಸ್ಟರ್ಗಳು ಕೂಡ ಭಾರತೀಯ ಮೂಲದ ಯುವಕರ ಸ್ಟಾರ್ಟಪ್ನಲ್ಲಿ ಹೂಡಿಕೆ ಮಾಡಿದ್ದಾರೆ.