ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ-3 ಮಿಷನ್ನ ವಿದ್ಯುತ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಇಸ್ರೋ ಸಂಸ್ಥೆಯು ಶುಕ್ರವಾರ ಶ್ರೀಹರಿಕೋಟಾದ ಎಸ್ಡಿಎಸ್ಸಿ - ಎಸ್ಎಚ್ಎಆರ್ನಲ್ಲಿರುವ ಲಾಂಚ್ ವ್ಯೂ ಗ್ಯಾಲರಿಯಿಂದ ಚಂದ್ರಯಾನ-3 ಉಡಾವಣೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ವೀಕ್ಷಿಸಲು ಬಯಸುವ ನಾಗರಿಕರು, https://lvg.shar.gov.in/VSCREGISTRATIO ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಇಸ್ರೋ ಟ್ವೀಟ್ ಮಾಡಿದೆ.
ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆ:ಈ ಹಿಂದೆ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ (ಇಸ್ರೋ) ನಿರ್ದೇಶಕ ಎಸ್. ಸೋಮನಾಥ್ ಮಾತನಾಡಿ, ಭಾರತದ ಮೂರನೇ ಚಂದ್ರನ ಪರಿಶೋಧನಾ ಮಿಷನ್ ಅನ್ನು ಘೋಷಣೆ ಮಾಡಿತ್ತು. ಚಂದ್ರಯಾನ-3ರ ಅನ್ನು ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.
ಎಲ್ಲವೂ ಸರಿಯಾಗಿ ಅಂದುಕೊಂಡಂತೆ ನಡೆದರೆ, ಆಗಸ್ಟ್ 23ರಂದು (ಚಂದ್ರನ ಮೇಲೆ) ಇಳಿಯಲಿದೆ. ಸೂರ್ಯೋದಯವು ಚಂದ್ರನ ಮೇಲೆ ಯಾವಾಗ ಇರುತ್ತದೆ ಎಂಬುದರ ಆಧಾರದ ಮೇಲೆ ದಿನಾಂಕ ನಿರ್ಧರಿಸಲಾಗಿದೆ. ಇದು ಲೆಕ್ಕಾಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಅದು ವಿಳಂಬವಾದರೆ, ನಾವು ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಲ್ಯಾಂಡಿಂಗ್ ಇರಿಸಬೇಕಾಗುತ್ತದೆ ಎಂದರು.
ಚಂದ್ರಯಾನ-3ರ ಸುರಕ್ಷಿತ, ಮೃದು ಲ್ಯಾಂಡಿಂಗ್ಗೆ ಒತ್ತು:ಚಂದ್ರಯಾನ-3 ಮಿಷನ್, ಚಂದ್ರಯಾನ-2ರ ಮುಂದುವರಿದ ಕಾರ್ಯಾಚರಣೆಯಾಗಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್‌ನಲ್ಲಿ ಕೊನೆಯವರೆಗೆ ಸಾಮರ್ಥ್ಯ ಪ್ರದರ್ಶಿಸುತ್ತದೆ. ಚಂದ್ರಯಾನ-3ರ ಲ್ಯಾಂಡರ್ ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ನಿರೀಕ್ಷೆಯಿದೆ. ಚಂದ್ರಯಾನ-3ರ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವುದು ಇಸ್ರೋದ ಪ್ರಮುಖ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
14 ದಿನಗಳವರೆಗೆ ಚಂದ್ರನ ಮೇಲೆ ಕೆಲಸ ಮಾಡಲಿದೆ ರೋವರ್:"ನಮ್ಮ ಮುಖ್ಯ ಉದ್ದೇಶವು ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಆಗಿದೆ. ಎಲ್ಲಾ ಉಪಕರಣಗಳು ಸುರಕ್ಷಿತವಾಗಿ ಹೋದರೆ, ಮೃದುವಾದ ಲ್ಯಾಂಡಿಂಗ್ ಆದರೆ ತುಂಬಾ ಉತ್ತಮವಾಗಿರುತ್ತದೆ. ಲ್ಯಾಂಡಿಂಗ್ ವ್ಯವಸ್ಥೆಯಲ್ಲಿ ನಾವು ಉತ್ತಮವಾಗಿದ್ದೇವೆ. ಲ್ಯಾಂಡಿಂಗ್ ನಂತರ ರೋವರ್ ಹೊರಬರುತ್ತದೆ. ರೋವರ್ 6 ಚಕ್ರಗಳನ್ನು ಹೊಂದಿದೆ.
ನಾವು ರೋವರ್ ಚಂದ್ರನ ಮೇಲೆ 14 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ರೋವರ್‌ನಲ್ಲಿರುವ ಬಹು ಕ್ಯಾಮೆರಾಗಳ ಸಹಾಯದೊಂದಿಗೆ, ನಾವು ಚಿತ್ರಗಳನ್ನು ಸ್ವೀಕರಿಸುತ್ತೇವೆ. ನಾವು ರೋವರ್‌ನಲ್ಲಿ ಸೌರ ಫಲಕವನ್ನು ಅಳವಡಿಸಿದ್ದೇವೆ. ಈಗಾಗಲೇ ನಾವು ಅದನ್ನು ಬ್ಯಾಟರಿಯೊಂದಿಗೆ ಪರೀಕ್ಷೆ ಮಾಡಿದ್ದೇವೆ. ನಾವು ಉತ್ತಮ ಫಲಿತಾಂಶಗಳನ್ನು ಪಡೆದಿದ್ದೇವೆ'' ಸೋಮನಾಥ್ ತಿಳಿಸಿದರು.
ಇದನ್ನೂ ಓದಿ:ನಾಸಾದ ವರ್ಚುಯಲ್ ಮಾರ್ಸ್ ಸಿಮ್ಯುಲೇಶನ್‌ನಲ್ಲಿ 4 ಗಗನಯಾತ್ರಿಗಳು.. ಇವರು ಒಂದು ವರ್ಷದವರೆಗೆ ಏಕೆ ಲಾಕ್ ಆಗ್ತಾರೆ ಗೊತ್ತಾ?