- ಚಂದ್ರನ ಮೇಲೆ ಧ್ವಜ ನೆಟ್ಟಾಗಿದೆ, ಇನ್ನು ಮುಂದೆ ಆದಿತ್ಯ ಎಲ್-1
- ಮಂಗಳಯಾನ, ಮಾನವ ಸಹಿತ ಗಗನಯಾನ ಬಾಕಿ ಇವೆ
- ಇವೆಲ್ಲವುಗಳಲ್ಲಿ ಭಾರತದ ವಿಜ್ಞಾನಿಗಳು ಯಶಸ್ವಿಯಾಗುತ್ತಾರೆ
- ಇಸ್ರೋದ ಈ ಸಾಧನೆಯನ್ನು ಭಾರತ ಸೂರ್ಯಚಂದ್ರಾದಿವರೆಗೆ ನೆನಪಿಡಬೇಕು
- ಇಸ್ರೋದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ
ETV Bharat / science-and-technology
ಶಹಬ್ಬಾಸ್ ಇಸ್ರೋ: ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಪ್ರಧಾನಿ ಮೋದಿ ಬಣ್ಣನೆ - undefined
![ಶಹಬ್ಬಾಸ್ ಇಸ್ರೋ: ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಪ್ರಧಾನಿ ಮೋದಿ ಬಣ್ಣನೆ ಚಂದ್ರಯಾನ-3](https://etvbharatimages.akamaized.net/etvbharat/prod-images/23-08-2023/1200-675-19339530-thumbnail-16x9-don.jpg)
Published : Aug 23, 2023, 5:48 PM IST
|Updated : Aug 23, 2023, 6:16 PM IST
18:15 August 23
ಇಸ್ರೋದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ
18:11 August 23
ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಪ್ರಧಾನಿ ಮೋದಿ ಬಣ್ಣನೆ
- ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಇಸ್ರೋಗೆ ಪ್ರಧಾನಿ ಮೋದಿ ಅಭಿನಂದನೆ
- ಭಾರತ ಈಗ ಚಂದ್ರನಲ್ಲಿ ಧ್ವಜವನ್ನು ಹಾರಿಸಿದೆ
- ಇದು ಬರೀ ಚಂದ್ರಯಾನವಲ್ಲ, ಮಹಾಯಾನ ಎಂದು ಬಣ್ಣನೆ
- ದೇಶದ 140 ಕೋಟಿ ಜನರ ನಿರೀಕ್ಷೆಯನ್ನು ಚಂದ್ರಮಂಡಲಕ್ಕೆ ಕೊಂಡೊಯ್ದ ಇಸ್ರೋ
- ವಿಶ್ವದ ಯಾವುದೇ ದೇಶಗಳು ಹೋಗದ ಜಾಗದಲ್ಲಿ ನಾವಿದ್ದೇವೆ
- ಇಂದಿನಿಂದ ಭಾರತದ ವೈಜ್ಞಾನಿಕ ಲೋಕವೇ ಬದಲಾಗಲಿದೆ
- ಚಂದಮಾಮ ಬಹುದೂರ ಇದ್ದಾನೆ ಎಂದು ಹೇಳುತ್ತಿದ್ದರು
- ನಮ್ಮ ತಾಯಿಂದಿರು ಇನ್ನು ಮುಂದೆ ಚಂದಮಾಮ ಇಲ್ಲೇ ಇದ್ದಾನೆ ಎನ್ನಬೇಕು
- ಇಂಡಿಯಾದ ಸಕ್ಸಸ್ಫುಲ್ ಮಿಷನ್ ಬರೀ ಭಾರತವಲ್ಲ ವಿಶ್ವವೇ ಶ್ಲಾಘಿಸಬೇಕು
18:04 August 23
ಚಂದ್ರನ ಮೇಲೆ ಇಳಿದ ಲ್ಯಾಂಡರ್, ಜೈ ಹೋ ಇಂಡಿಯಾ
- ಚಂದ್ರನ ಮೇಲೆ ಇಳಿದ ಲ್ಯಾಂಡರ್
- ಶಶಿಯ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ಸೃಷ್ಟಿಸಿದ ಇಸ್ರೋ
- ವಿಶ್ವಕ್ಕೆ ಮಾದರಿಯಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ
18:02 August 23
ಹಾರಿಜೆಂಟರ್ ಮಾದರಿಯಿಂದ ವರ್ಟಿಕಲ್ ಮಾದರಿಗೆ ಬಂದ ಲ್ಯಾಂಡರ್
- ಹಾರಿಜೆಂಟರ್ ಮಾದರಿಯಿಂದ ವರ್ಟಿಕಲ್ ಮಾದರಿಗೆ ಬಂದ ಲ್ಯಾಂಡರ್
- ಚಂದ್ರನಿಗೆ ನೇರವಾಗಿ ಲ್ಯಾಂಡರ್ ನಿಲ್ಲಿಸಿದ ಇಸ್ರೋ ವಿಜ್ಞಾನಿಗಳು
- ಇನ್ನೇನು ಚಂದ್ರನ ಮೇಲೆ ಇಳಿಯಲು ಸಜ್ಜಾದ ಲ್ಯಾಂಡರ್
17:58 August 23
ಲ್ಯಾಂಡರ್ ಇಳಿಕೆ ಕೌತುಕವನ್ನು ದಕ್ಷಿಣ ಆಫ್ರಿಕಾದಿಂದ ನೋಡುತ್ತಿರುವ ಪ್ರಧಾನಿ ಮೋದಿ
ಲ್ಯಾಂಡರ್ ಇಳಿಕೆ ಕೌತುಕವನ್ನು ದಕ್ಷಿಣ ಆಫ್ರಿಕಾದಿಂದ ನೋಡುತ್ತಿರುವ ಪ್ರಧಾನಿ ಮೋದಿ
ಬ್ರಿಕ್ಸ್ ಶೃಂಗಸಭೆಗೆ ಹಾಜರಾಗಲು ತೆರಳಿರುವ ಪ್ರಧಾನಿ ಮೋದಿ
ಲ್ಯಾಂಡರ್ ಅನ್ನು ಪರಿಶೀಲಿಸುತ್ತಿರುವ ಮಿಷನ್ ಆಪರೇಟರ್ ಟೀಂ
17:49 August 23
ಚಂದ್ರನಿಂದ 15 ಕಿಮೀ ದೂರದಲ್ಲಿರುವ ಲ್ಯಾಂಡರ್, ಶಶಿಗೆ ಇನ್ನಷ್ಟು ಸನಿಹ
- ಚಂದ್ರನತ್ತ ಇಳಿಯುತ್ತಿರುವ ಲ್ಯಾಂಡರ್ ಮಾಡ್ಯೂಲ್
- ರೋವರ್ ಹೊತ್ತಿರುವ ಲ್ಯಾಂಡರ್ ವೇಗ ನಿಯಂತ್ರಣದೊಂದಿಗೆ ಇಳಿಕೆ
- ಚಂದ್ರನಿಂದ 15 ಕಿಮೀ ದೂರದಲ್ಲಿರುವ ಲ್ಯಾಂಡರ್
- ಹಾರಿಜೆಂಟಲ್ ಮಾದರಿಯಲ್ಲಿ ನೌಕೆಯ ಇಳಿಕೆ
17:36 August 23
ಚಂದ್ರಯಾನ-3: ಲ್ಯಾಂಡರ್ ಇಳಿಕೆಗೆ ವೇಗ ತಗ್ಗಿಸುವ ಕಾರ್ಯ
ಬೆಂಗಳೂರು: ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಅನ್ನು ಶಶಿಯ ಮೇಲೆ ಇಳಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಜ್ಞಾನಿಗಳು ಲ್ಯಾಂಡರ್ ಅನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಇಳಿಯಲು ಸಜ್ಜುಗೊಳಿಸುತ್ತಿದ್ದಾರೆ.