ಹೈದರಾಬಾದ್:ಚಂದ್ರಯಾನ-3 ಮಿಷನ್‌ನ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ತಿಳಿಸಿದೆ.
"ಚಂದ್ರಯಾನ-3 ಮಿಷನ್: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎಚ್ಚರಗೊಳ್ಳುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸಾಧಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ದೊರೆತಿಲ್ಲ. ಸಂಪರ್ಕವನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಗಳು ಮುಂದುವರಿವೆ" ಎಂದು ಇಸ್ರೋ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಸ್ಲೀಪ್ ಮೋಡ್‌ಗೆ ತೆರಳಿದ್ದ ರೋವರ್:ಸೆಪ್ಟೆಂಬರ್ 2ರಂದು ರೋವರ್ ಸ್ಲೀಪ್ ಮೋಡ್‌ಗೆ ತೆರಳಿದ ನಂತರ, ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಅದನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಮತ್ತು ಸ್ಲೀಪ್ ಮೋಡ್‌ಗೆ ಸೆಟ್ ಮಾಡಲಾಗಿದೆ. ಎಪಿಎಕ್ಸ್ಎಸ್ ಮತ್ತು ಎಲ್ಐಬಿಎಸ್ ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪ್ರಸ್ತುತ, ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೆಪ್ಟೆಂಬರ್ 22ರಂದು ನಿರೀಕ್ಷಿಸಲಾದ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಸೌರ ಫಲಕವು ಸಿದ್ಧವಾಗಿದೆ. ರಿಸೀವರ್ ಇರಿಸಲಾಗಿದೆ. ಮತ್ತೊಂದು ಸುತ್ತಿನ ಕಾರ್ಯಯೋಜನೆಯ ಯಶಸ್ವಿಗಾಗಿ ಆಶಿಸುತ್ತಿದ್ದೇವೆ ಎಂದು ಇಸ್ರೋ ಸಂಸ್ಥೆ ಹೇಳಿತ್ತು.