ನವದೆಹಲಿ:ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ಎಲೋನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್, ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್ ಮೆಟಾ ಸೇರಿದಂತೆ ಟೆಕ್ ದೈತ್ಯರಿಗೆ ಕೇಂದ್ರ ಸರ್ಕಾರ ಮಂಗಳವಾರ ಪ್ರಬಲವಾದ ಸಲಹೆ ನೀಡಿದೆ.
ಸಾಮಾಜಿಕ ಜಾಲತಾಣವಾದ ಎಕ್ಸ್, ಸರ್ಚ್ ಇಂಜಿನ್ ದೈತ್ಯ ಗೂಗಲ್, ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಮತ್ತು ಟೆಲಿಗ್ರಾಮ್, ಶೇರ್‌ಚಾಟ್ ಮತ್ತು ಭಾರತೀಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಸೇರಿದಂತೆ ಇತರ ಮಧ್ಯವರ್ತಿಗಳಿಗೆ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆ ನೀಡಲಾಗಿತ್ತು. ನಂತರ ಈ ವರ್ಷ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಇಲಾಖೆ ನೀಡಿರುವ ಸಲಹೆಯು ನಿರ್ದಿಷ್ಟವಾಗಿ ಕೃತಕ ಬುದ್ಧಿಮತ್ತೆಯ ಡೀಪ್ಫೇಕ್ಗೆ ಸಂಬಂಧಿಸಿದೆ.
ಸಾಮಾಜಿಕ ಜಾಲತಾಣ, ಐಟಿ ದೈತ್ಯರೊಂದಿಗೆ ಸರ್ಕಾರ ಚರ್ಚೆ: ಕಳೆದ ಒಂದು ತಿಂಗಳಿನಿಂದ ಐಫೋನ್ ತಯಾರಕ Apple Inc ಮತ್ತು HP ಮತ್ತು Dell ನಂತಹ ಹಾರ್ಡ್‌ವೇರ್ ತಯಾರಕರು ಸೇರಿದಂತೆ ಟೆಕ್ ಕಂಪನಿಗಳು ಸೇರಿದಂತೆ ಸಾಮಾಜಿಕ ಜಾಲತಾಣ ಮತ್ತು ಐಟಿ ದೈತ್ಯರೊಂದಿಗೆ ಸರ್ಕಾರವು ಚರ್ಚಿಸಿದ ನಂತರ, ಮಂಗಳವಾರದ ಸಲಹೆ ನೀಡಲಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಉದ್ಯಮ ಪ್ರತಿನಿಧಿಗಳ ನಡುವಿನ ಚರ್ಚೆಯ ನಂತರ ಹೊರಡಿಸಲಾದ ಸಲಹೆಯು ನಿಷೇಧಿತ ವಿಷಯದ ಬಗ್ಗೆ ವಿಶೇಷವಾಗಿ ಐಟಿ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳು ಬಳಕೆದಾರರೊಂದಿಗೆ ಅತ್ಯಂತ ಸ್ಪಷ್ಟ ಮತ್ತು ನಿಖರವಾದ ರೀತಿಯಲ್ಲಿ ಸಂವಹನ ನಡೆಸಬೇಕು. ಇದನ್ನು ಐಟಿ ನಿಯಮಗಳ ನಿಯಮ 3(1)(ಬಿ) ಅಡಿ ನಿರ್ದಿಷ್ಟ ಪಡಿಸಲಾಗಿದೆ.
''ತಪ್ಪು ಮಾಹಿತಿಯು ಇಂಟರ್ನೆಟ್ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆ ಬಗ್ಗೆ ಹೆದರಿಕೆ ಶುರುವಾಗಿದೆ. ಅದರಲ್ಲೂ ಎಐನಿಂದ ರಚಿತವಾಗುವ ಡೀಪ್ಫೇಕ್ನ ತಪ್ಪು ಮಾಹಿತಿಯು ಡಿಜಿಟಲ್ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆ ಕುರಿತ ಹೆದರಿಕೆ ಇನ್ನಷ್ಟು ಹೆಚ್ಚಾಗಿದೆ'' ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು. ಐಟಿ ನಿಯಮಗಳ ಅಡಿಯಲ್ಲಿ ಅನುಮತಿಸದ ವಿಷಯಗಳು, ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಪಟ್ಟಿ ಮಾಡಲಾದ ವಿಷಯವನ್ನು ಅದರ ಸೇವಾ ನಿಯಮಗಳು ಮತ್ತು ಬಳಕೆದಾರ ಒಪ್ಪಂದಗಳ ಮೂಲಕ ಬಳಕೆದಾರರಿಗೆ ಸ್ಪಷ್ಟ ಮತ್ತು ನಿಖರವಾದ ಭಾಷೆಯಲ್ಲಿ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.