ದೆಹಲಿ: ಸ್ಕೂಟರ್ಗಳ ಉತ್ಪಾದಕ ಕಂಪನಿ ಹೀರೋ ಮೋಟೋಕಾರ್ಪ್ ಇಂದು ತನ್ನ ಪ್ಲೆಶರ್ ಸ್ಕೂಟರ್ ಶ್ರೇಣಿಯ ಹೊಸ ರೂಪಾಂತರ ಪ್ಲೆಶರ್+' XTec' ಅನ್ನು ಬಿಡುಗಡೆ ಮಾಡಿದೆ.
ಹೊಸ ಎಲ್‍ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,110 ಸಿಸಿ ವಿಭಾಗದಲ್ಲಿ ಮೊದಲ ವೈಶಿಷ್ಟ್ಯತೆ, ವರ್ಧಿತ ಸೌಂದರ್ಯ ಮತ್ತು ಜುಬಿಲಂಟ್ ಹಳದಿಯ ಹೊಸ ರೋಮಾಂಚಕ ಬಣ್ಣವು ಸ್ಕೂಟರ್ಗೆ ಹೊಸ ಆಕರ್ಷಣೆ ನೀಡುತ್ತದೆ.
ಹೀರೋ ಕಂಪನಿಯ ಕ್ರಾಂತಿಕಾರಿ i3S ತಂತ್ರಜ್ಞಾನದಂತಹ ವರ್ಧಿತ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ (ಐಡಲ್-ಸ್ಟಾಪ್-ಸ್ಟಾರ್ಟ್-ಸಿಸ್ಟಮ್), ಕಾಲ್ ಮತ್ತು ಎಸ್‍ಎಂಎಸ್ ಅಲರ್ಟ್‍ಗಳೊಂದಿಗಿನ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಮೆಟಲ್ ಫ್ರಂಟ್ ಫೆಂಡರ್‌ಗಳೊಂದಿಗೆ ಸವಾರರು ಯಾವುದೇ ಚಾಲನಾ ಪರಿಸ್ಥಿತಿ ವಿಶ್ವಾಸದಿಂದ ಕರಗತ ಮಾಡಿಕೊಳ್ಳಬಹುದು. LX ವೆರಿಯಂಟ್ಗೆ 61,900 ರೂ. ಮತ್ತು ಪ್ಲೆಶರ್+ 110 XTec ಗೆ 69,500 ರೂ. ಆರಂಭಿಕ ಬೆಲೆಯಿದೆ.
ಹೀರೋ ಮೋಟೋಕಾರ್ಪ್ ಸ್ಟ್ರಾಟಜಿ ಮತ್ತು ಜಾಗತಿಕ ಉತ್ಪನ್ನ ಯೋಜನೆ ಮುಖ್ಯಸ್ಥರಾದ ಮಾಲೋ ಲೆ ಮ್ಯಾಸನ್ ಮಾತನಾಡಿ, ಪ್ಲೆಶರ್+ 110 ಒಂದು ಟ್ರೆಂಡ್‍ಸೆಟರ್ ಆಗಿದ್ದು, ಇದು ದೇಶದ ಅತ್ಯಂತ ಮೆಚ್ಚುಗೆ ಪಡೆದ ಮತ್ತು ಜನಪ್ರಿಯ ಪಡೆದ ಸ್ಕೂಟರ್ಗಳಲ್ಲಿ ಒಂದಾಗಿದೆ.
XTec ಮಾದರಿಯು ಪ್ಲಾಟಿನಂ ಆವೃತ್ತಿಯಿಂದ ಸ್ಫೂರ್ತಿ ಪಡೆದ ಅಂಶಗಳು, ಫ್ರಂಟ್ ಮೆಟಲ್ ಫೆಂಡರ್ ನೊಂದಿಗೆ ಹೆಚ್ಚು ಬಾಳಿಕೆ, ಬ್ರಾಂಡ್ ಸೀಟ್ ಬ್ಯಾಕ್ರೆಸ್ಟ್ನೊಂದಿಗೆ ಹೆಚ್ಚು ಆರಾಮ ಮತ್ತು ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್, ಬ್ಲೂಟೂತ್ ಸಂಪರ್ಕ ಮತ್ತು ಪೇಟೆಂಟ್ i3S ತಂತ್ರಜ್ಞಾನದೊಂದಿಗೆ ಹೆಚ್ಚು ಆಕರ್ಷಣೀಯವಾಗಿಸುತ್ತದೆ. ಪ್ಲೆಶರ್+110 ಈಗ ಇನ್ನಷ್ಟು ಅಪೇಕ್ಷಣೀಯವಾಗಿದೆ ಎಂದರು.
ಇದನ್ನೂ ಓದಿ:ವಿಶ್ವ ಸಂಧಿವಾತ ದಿನ: ಸಂಧಿವಾತ ನಿರ್ಲಕ್ಷ್ಯ ಅಪಾಯಕ್ಕೆ ಆಹ್ವಾನ
ಹೀರೋ ಮೋಟೋಕಾರ್ಪ್ ಮುಖ್ಯಸ್ಥರಾದ ನವೀನ್ ಚೌಹಾಣ್ ಮಾತನಾಡಿ, "ಐಕಾನಿಕ್ ಪ್ಲೆಶರ್ ಬ್ರ್ಯಾಂಡ್ ಗ್ರಾಹಕರೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ. ಹೊಸ ಪ್ಲೆಶರ್+ ‘XTec’ ಖಂಡಿತವಾಗಿಯೂ ನಮ್ಮ ಸ್ಕೂಟರ್ ಬೇಡಿಕೆ ಬಲಪಡಿಸುತ್ತದೆ ಮತ್ತು ಈ ಹಬ್ಬದ ಸಂದರ್ಭದಲ್ಲಿ ಯುವಕರಿಗೆ ಹೆಚ್ಚಿನ ಸಂತೋಷ ನೀಡುತ್ತದೆ ಎಂದರು.
ಹೊಸ ಪ್ಲೆಶರ್+ XTec ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್‍ನೊಂದಿಗೆ ಬರುತ್ತದೆ. ಹೊಸ ಹೆಡ್‍ಲ್ಯಾಂಪ್ ಶೇ.25ರಷ್ಟು ಹೆಚ್ಚು ಬೆಳಕಿನ ತೀವ್ರತೆಯನ್ನು ದೀರ್ಘ ಮತ್ತು ವಿಶಾಲವಾದ ರಸ್ತೆಯ ನೋಟಕ್ಕೆ ಒದಗಿಸುತ್ತದೆ. ಮತ್ತು ಎಲ್ಲ ಚಾಲನಾ ಪರಿಸ್ಥಿತಿಗಳಲ್ಲಿ ಗರಿಷ್ಠ ಆನ್-ರೋಡ್ ಗೋಚರತೆಯನ್ನು ನೀಡುವ ಆಂಟಿ-ಫಾಗ್ ಅನುಕೂಲವನ್ನು ನೀಡುತ್ತದೆ.