ನವದೆಹಲಿ: ಭಾರತದಲ್ಲಿ 50ಕ್ಕೂ ಹೆಚ್ಚು ನಗರದಲ್ಲಿ ಈಗಾಗಲೇ 5ಜಿ ತಂತ್ರಜ್ಞಾನ ಸೇವೆಯನ್ನು ಜನರು ಆಹ್ಲಾದಿಸುತ್ತಿದ್ದಾರೆ ಎಂದು ಇಂಡಿಯಾ ಸೆಲ್ಯೂಲರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪಂಕಜ್ ಮೊಹಿಂದ್ರೂ ತಿಳಿಸಿದ್ದಾರೆ. 2023ರಲ್ಲಿ ಶೇ 75 ರಿಂದ 80 ಪ್ರತಿಶತ ಮೊಬೈಲ್ನಲ್ಲಿ ಈ 5ಜಿ ಸೇವೆ ಇರಲಿದೆ ಎಂದಿದ್ದಾರೆ. ಕಳೆದ ಅಕ್ಟೋಬರ್ 1ರಿಂದಲೇ ದೇಶದಲ್ಲಿನ 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ದೇಶದ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಸದ್ಯ ಈ 5ಜಿ ಸೇವೆ ಲಭ್ಯವಿದ್ದು, 2023 ಅಥವಾ 2024ಕ್ಕೆ ಮುಂಚೆ ದೇಶದೆಲ್ಲೆಡೆ ಈ ಸೇವೆ ಪಡೆಯಬಹುದಾಗಿದೆ. ಭಾರತದಲ್ಲಿ 5ಜಿ ತಂತ್ರಜ್ಞಾನದ ಆರಂಭಿಕ ಅಳವಡಿಕೆಯಾಗಿದೆ. ಈ 5G ತಂತ್ರಜ್ಞಾನವು ಹೊಸ ಪೀಳಿಗೆಯ ಟೆಲಿಕಾಂ ಉಪಕರಣ ತಯಾರಕರು, ಅಪ್ಲಿಕೇಶನ್ ಪೂರೈಕೆದಾರರು ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಮಿಷನ್-2-ಮಷಿನ್ (M2M) ಮತ್ತು ಆರೋಗ್ಯ ಸೇವೆಗಳು, ಇತರರಿಗೆ ವ್ಯಾಪಕ ಅವಕಾಶವನ್ನು ತೆರೆಯಲಿದೆ.