ವಾಷಿಂಗ್ಟನ್( ಅಮೆರಿಕ): 50 ವರ್ಷದ ಬಳಿಕ ಇದೀಗ ನಾಲ್ಕು ಮಂದಿ ಗಗನಯಾನಿಗಳು ಚಂದ್ರನ ಅಂಗಳದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದು, ಇವರಿಗೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತ ಭವನದಲ್ಲಿ ಆತಿಥ್ಯ ನೀಡಿದರು. ಈ ವೇಳೆ, ಓವಲ್ ಕಚೇರಿಯಲ್ಲಿ ಅಪೋಲೋ ಕಾಲಘಟ್ಟದಲ್ಲಿ ಸಂಗ್ರಹಿಸಿ ಚಂದ್ರನ ಕಲ್ಲುಗಳನ್ನು ತೋರಿಸಲಾಯಿತು.
ಈ ವರ್ಷದ ಆರಂಭದಲ್ಲಿ ಆರ್ಟೆಮಿಸ್ II ಮೂವರು ಅಮೆರಿಕನ್ ಮತ್ತು ಒಬ್ಬ ಕೆನಡಿಯನ್ ಈ ಗಗನಯಾನ ಕೈಗೊಳ್ಳುವುದಾಗಿ ಘೋಷಣೆ ಮಾಡಲಾಗಿತ್ತು. ಯೋಜನೆಗೆ ಅವರನ್ನು ಹೆಸರಿಸಿದ ನಂತರ ಶ್ವೇತಭವನದಲ್ಲಿ ಆತಿಥ್ಯ ನೀಡುವ ಭರವಸೆ ಪೂರ್ಣಗೊಳಿಸಿದರು. ಇದೇ ವೇಳೆ, ಅವರು ಉಪ ಅಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು. ಅವರ ನಾಯಕತ್ವದಲ್ಲಿ ನಮ್ಮ ಈ ಅದ್ಭುತ ಪ್ರಯಾಣ ಸಾಧ್ಯವಾಗುತ್ತಿದ್ದು, ಅವರನ್ನು ಭೇಟಿಯಾಗಿ, ಕೈ ಕುಲುಕಿ ಮಾತನಾಡಿಸಿದ್ದು ಸಂತಸವಾಗಿದೆ ಎಂದು ಪೈಲಟ್ ವಿಕ್ಟರ್ ಗ್ಲೊವರ್ ತಿಳಿಸಿದ್ದಾರೆ.
ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್ ಕ್ಯಾಪ್ಸುಲ್ನಲ್ಲಿ ಹಾರಾಡಲಿದ್ದಾರೆ. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯಿಂದ ಇವರ ಪ್ರಯಾಣ ಆರಂಭ ಆಗಲಿದೆ. ಅವರು ಚಂದ್ರನ ಕಕ್ಷೆಯಲ್ಲಿ ಇಳಿಯುವುದಿಲ್ಲ. ಬದಲಾಗಿ ಚಂದ್ರನ ಸುತ್ತ, ಭೂಮಿಗೆ ನೇರವಾಗಿ ಹಾರಾಟ ನಡೆಸಲಿದ್ದಾರೆ. ವರ್ಷದ ಬಳಿಕ ಚಂದ್ರನ ಅಂಗಳದಲ್ಲಿ ಇಳಿಯುವ ಯೋಜನೆ ರೂಪಿಸಲಾಗಿದೆ.
ಇನ್ನು ಈ ಕುರಿತ ದಿನಾಂಕವನ್ನು ನಾವು ಯೋಚಿಸಿಲ್ಲ ಎಂದು ಕಮಾಂಡರ್ ರೇಡ್ ವೈಸ್ಮ್ಯಾನ್ ತಿಳಿಸಿದ್ದಾರೆ. ನಾಸಾ ಮತ್ತು ವಾಹನ ಯಾವಾಗ ಸಿದ್ದವಾಗುತ್ತದೆಯೋ ಆಗ ನಾವು ಹೋಗುತ್ತೇವೆ. ಈ ನಡುವೆ ನಾಲ್ಕು ಮಂದಿ ಸಿದ್ಧತೆ ನಡೆಸಲಿದ್ದಾರೆ. ಅವರು ಹೇಗೆ ಸುರಕ್ಷಿತವಾಗಿ ಹೋಗಿ ಬರುವುದು ಮಿಷನ್ ನಿಯಂತ್ರಣದ ಕೆಲಸ ನಿರ್ವಹಿಸಲಿದ್ದಾರೆ. ಫೆಬ್ರವರಿಯಿಂದ ಡ್ರೆಸ್ನ ಪೂರ್ವ ತಯಾರಿ ನಡೆಸಲಿದ್ದಾರೆ. ಅಲ್ಲಿ ಅವರು ಫೆಸಿಫಿಕ್ ಸಾಗರದಲ್ಲಿನ ಕ್ಯಾಪ್ಸುಲ್ ಮೇಲೆ ಸುತ್ತಾಟದ ಅಭ್ಯಾಸ ನಡೆಸಲಿದ್ದಾರೆ.