ನವದೆಹಲಿ :ತೈವಾನ್ ಮೂಲದ ತಂತ್ರಜ್ಞಾನ ಕಂಪನಿ ಆಸುಸ್ ಭಾರತದ ಮಾರುಕಟ್ಟೆಗೆ ತನ್ನ ಹೊಸ ಪಿಸಿ ಮತ್ತು ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡಿದೆ. 37,990 ರೂ.ಗಳ ಆರಂಭಿಕ ಬೆಲೆಗಳಲ್ಲಿ ಇವು ಲಭ್ಯವಿವೆ. ಹೊಸ ಶ್ರೇಣಿಯ ಡೆಸ್ಕ್ ಟಾಪ್ ಗಳಲ್ಲಿ ASUS S500SE, ASUS S501ME ಮತ್ತು ಗೇಮಿಂಗ್-ಕೇಂದ್ರಿತ ROG DT G22 ಮತ್ತು AIO M3402 ಗಳು ಸೇರಿವೆ.
ಹೊಸ ROG DT 22 ಇದು 1,99,990 ರೂ. ಆರಂಭಿಕ ಬೆಲೆಯಲ್ಲಿ ಮತ್ತು ಗ್ರಾಹಕ ಡೆಸ್ಕ್ ಟಾಪ್ ಗಳಾದ ASUS S500SE & S501ME ಗಳು ಕ್ರಮವಾಗಿ 41,990, 37,990 ರೂ. ಮತ್ತು M3402 49,990 ರೂ.ಗಳ ಆರಂಭಿಕ ಬೆಲೆಗಳಲ್ಲಿ ಲಭ್ಯವಿವೆ. ಹೊಸ ಶ್ರೇಣಿಯ ಪಿಸಿ ಮತ್ತು ಲ್ಯಾಪ್ಟಾಪ್ಗಳನ್ನು ಈಗ ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಆನ್ಲೈನ್ ಮತ್ತು ಆಫ್ಲೈನ್ ಮಳಿಗೆಗಳಿಂದ ಖರೀದಿಸಬಹುದು.
"ಎಐಒ ಮತ್ತು ಡೆಸ್ಕ್ಟಾಪ್ ಶ್ರೇಣಿಯನ್ನು ವಿಸ್ತರಿಸುವ ನಮ್ಮ ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಬಳಕೆದಾರರಿಗೆ ಅತ್ಯುತ್ತಮ ಅನುಭವಗಳನ್ನು ತಲುಪಿಸುವ ಆಸುಸ್ನ ಬದ್ಧತೆಗೆ ಉದಾಹರಣೆಯಾಗಿದೆ. ಬಳಕೆದಾರರಿಗೆ ಶಕ್ತಿಯುತ ಮತ್ತು ತಡೆರಹಿತ ಕಂಪ್ಯೂಟಿಂಗ್ ಪರಿಹಾರಗಳನ್ನು ಒದಗಿಸುವ ಮೂಲಕ ಈ ಹಿಂದಿಗಿಂತ ಉತ್ತಮವಾದುದನ್ನು ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಆಸುಸ್ ಇಂಡಿಯಾದ ಪಿಸಿ ಮತ್ತು ಗೇಮಿಂಗ್ ವ್ಯವಹಾರದ ಉಪಾಧ್ಯಕ್ಷ ಅರ್ನಾಲ್ಡ್ ಸು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿಯ ಪ್ರಕಾರ, ROG DT G22 ಇದೊಂದು ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಶನ್ಗಾಗಿ ಬಳಸಬಹುದಾದ ಶಕ್ತಿಯುತ ಕಂಪ್ಯೂಟರ್ ಆಗಿದ್ದು, 30M Cache ಯೊಂದಿಗೆ Intel Core I 7-13700 ಎಫ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಕಾಂಪ್ಯಾಕ್ಟ್ ಸಾಧನವಾಗಿದ್ದು, ಸಣ್ಣ ಡೆಸ್ಕ್ ಗಳ ಮೇಲೆ ಇಟ್ಟು ಕೆಲಸ ಮಾಡಬಹುದು.