ಬೆಂಗಳೂರು: ಸದ್ಯ ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳಹೊರಟಿದೆ ಎಂದರೆ ತಪ್ಪಾಗಲಾರದು. ಚಾಟ್ಜಿಪಿಟಿ ಬಳಿಕ ಕೃತಕ ಬುದ್ದಿಮತ್ತೆ ಅಭಿವೃದ್ಧಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧೆ ಶುರುವಾಗಿದೆ. ಇದರಿಂದಾಗಿ ಭಾರತದಲ್ಲಿ 45 ಸಾವಿರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಈ ಸಂಬಂಧ ತಂತ್ರಜ್ಞಾನ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹುಡುಕಾಟ ನಡೆಸುವ ಟೀಮ್‌ಲೀಸ್ ಡಿಜಿಟಲ್ ವರದಿ ಪ್ರಕಟಿಸಿದ್ದು, ಭಾರತದಲ್ಲಿ 45 ಸಾವಿರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಉದ್ಯೋಗಾವಕಾಶವಿದೆ. ಸೈಟಿಂಸ್ಟ್ ಮತ್ತು ಮೆಷಿನ್ ಲರ್ನಿಂಗ್ (ಎಂಎಲ್) ಇಂಜಿನಿಯರ್ಗಳಿಗೆ ಹೆಚ್ಚಿನ ವೃತ್ತಿ ಅವಕಾಶ ಇದೆ ಎಂದು ಹೇಳಿದೆ.
ಕೆಲವು ಆಯ್ದ ಕ್ಷೇತ್ರದಲ್ಲಿ ಎಐ ಸಾಮರ್ಥ್ಯದ ವಿಶ್ಲೇಷಣೆ ನಡೆಸಲಾಗಿದೆ. ಕೈಗಾರಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಎಐ ಪರಿಣತಿ ಹೊಂದಿರುವವರಿಗೆ ಬೇಡಿಕೆ ಹೆಚ್ಚಿದೆ. ಎಂಎಲ್ ಸ್ಕೇಲೆಬಲ್ಗೆ ಗಮನ ಹೆಚ್ಚಿದ್ದು, ವೃತ್ತಿಪರ ಬರವಣಿಗೆ ಭಾಷೆಗಳ ಪ್ರಾವೀಣ್ಯತೆಯ ಎಐ ವೃತ್ತಿಪರರಿಗೆ ಬೇಡಿಕೆ ಹೆಚ್ಚಿದೆ. ಎಂಎಲ್ನ ಮಾದರಿಗಳ ನಿರ್ಮಾಣ ಎಐ ವೃತ್ತಿ ಜೀವನಕ್ಕೆ ಅಗತ್ಯವಾಗಿರುವ ಸ್ಕಿಲ್ ಒಳಗೊಂಡಿದೆ.
ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶ?: ಆರೋಗ್ಯ ಸೇವೆ (ಕ್ಲಿನಿಕಲ್ ಡಾಟಾ ಅನಾಲಿಸ್ಟ್, ಮೆಡಿಕಲ್ ಇಮೇಂಜಿಂಗ್ ಸ್ಪೆಷಲಿಸ್ಟ್, ಆರೋಗ್ಯ ಮಾಹಿತಿ ವಿಶ್ಲೇಷಣೆ ಸೇರಿದಂತೆ ಹಲವು ಕ್ಷೇತ್ರ) ಶಿಕ್ಷಣ (ಎಜುಡೆಕ್ ಪ್ರೊಡಕ್ಟ್ ಮ್ಯಾನೇಜರ್, ಎಐ ಲರ್ನಿಂಗ್ ಆರ್ಕಿಟೆಕ್ಚರ್, ಎಐ ಕ್ಯಾರಿಕುಲಮ್ ಡೆವಲಪ್ರ್, ಚಾಟ್ಬೂಟ್ ಡೆವಲಪತ್ ಮುಂದಾದವು), ಬಿಎಫ್ಎಸ್ಐ (ವಂಚನೆ ವಿಶ್ಲೇಷಣೆ, ಕ್ರೆಡಿಟ್ ರಿಸ್ಕ್ ಅನಾಲಿಸ್ಟ್) ಉತ್ಪಾದನೆ (ಇಂಡಸ್ಟಿಯಲ್ ಡಾಟಾ ಸೈಂಟಿಂಸ್ಟ್, ಕ್ಯೂಸಿ ಆನಾಲಿಸ್ಟ್ ಪ್ರೊಸೆಸ್ ಆಟೊಮೆಷನ್ ಸ್ಪೆಷಲಿಸ್ಟ್, ರೊಬೊಟಿಕ್ ಇಂಜಿನಿಯರ್ ಇತ್ಯಾದಿ) ಮತ್ತು ರಿಟೇಲ್ (ರಿಟೇಲ್ ಡಾಟಾ ಅನಾಲಿಸ್ಟ್, ಐಟಿ ಮಾಡೆಲರ್, ಡಿಜಿಟಲ್ ಇಮೇಂಜಿಂಗ್ ಲೀಡರ್) ಈ ಕ್ಷೇತ್ರಗಳಲ್ಲಿ ಎಐ ಪ್ರಮುಖ ಹುದ್ದೆಗಳನ್ನು ಹೊಂದಿದೆ.