ಆ್ಯಪಲ್ ಸಂಸ್ಥೆ ತನ್ನ ಐಫೋನ್ 15 ಸಿರೀಸ್ ಅನಾವರಣಗೊಳಿಸಿದ್ದು, ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೋ ಹಾಗೂ ಐಫೋನ್ 15 ಪ್ರೋ ಮ್ಯಾಕ್ಸ್ ಎನ್ನುವ ನಾಲ್ಕು ಐಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೊಬೈಲ್ ಫೋನ್ಗಳ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 22ರಿಂದ ಫೋನ್ಗಳು ಮಾರಾಟವಾಗಲಿವೆ.
ಐಫೋನ್ 15 ಸಿರೀಸ್ ಅನಾವರಣಗೊಳಿಸಿದ ಆ್ಯಪಲ್
ಈ ಐಫೋನ್ ಸರಣಿಗಳನ್ನು ಮೊದಲ ಹಂತವಾಗಿ ಭಾರತವೂ ಸೇರಿ ಹಲವು ದೇಶಗಳಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಭಾರತ, ಮತ್ತು ಹಾಂಕಾಂಗ್, ದುಬೈ ಹಾಗೂ ಅಮೆರಿಕಾದಂತಹ ದೇಶಗಳ ನಡುವೆ ಐಫೋನ್ 15 ಸರಣಿ ಮೊಬೈಲ್ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ.
ಅದರಲ್ಲೂ ಐಫೋನ್ 15 ಪ್ರೋ ಮಾದರಿಗಳಾದ ಐಫೋನ್ 15 ಪ್ರೋ ಹಾಗೂ ಐಫೋನ್ 15 ಪ್ರೋ ಮ್ಯಾಕ್ಸ್ ಬೆಲೆಗಳ ನಡುವಿನ ವ್ಯತ್ಯಾಸ ನಮ್ಮ ಭಾರತ ಹಾಗೂ ಇತರ ದೇಶಗಳ ನಡುವೆ ಭಾರಿ ಅಂತರವಿದೆ. ಆ್ಯಪಲ್ ಐಫೋನ್ 15 ಗೆ ಕಳೆದ ವರ್ಷದ ಮಾಡೆಲ್ಗಿಂತ 5000 ರೂ ಹಾಗೂ ಐಫೋನ್ ಪ್ರೋ ಮ್ಯಾಕ್ಸ್ಗೆ 20,000 ರೂಗಳನ್ನು ಹೆಚ್ಚಿಸಲಾಗಿದೆ. ಅದಾಗ್ಯೂ ಪ್ರೋ ಮ್ಯಾಕ್ಸ್ ನ ಸ್ಟೋರೇಜ್ ಶಕ್ತಿಯನ್ನು 128GB ಯಿಂದ 256GB ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಸ್ಟೋರೇಜ್ ಸಮಸ್ಯೆ ಎದುರಿಸುವವರಿಗೆ ಬಿಗ್ ರಿಲೀಫ್ ನೀಡಲಾಗಿದೆ. ಈ ಮೊದಲು ಸಿಗುತ್ತಿದ್ದ ಸ್ಟೋರೇಜ್ ಅನ್ನು ಇನ್ ಬಿಲ್ಟ್ ಆಗಿಯೇ ನೀಡಲಾಗಿದೆ. ಇದರರ್ಥ ಐಫೋನ್ ಪ್ರಿಯರು ಎರಡು ಪಟ್ಟು ಸ್ಟೋರೇಜ್ ಅವಕಾಶ ಪಡೆಯಬಹುದು. ಅದರ ಜೊತೆಗೆ ಯುಎಸ್ಬಿ, ಟೈಪ್ -ಸಿ ಚಾರ್ಜಿಂಗ್ ಪೋರ್ಟ್ನ ಜೊತೆಗೆ ಹೊಸ ಐಫೋನ್ ಅನ್ನು ಕೂಡಾ ಇದೇ ವೇಳೆ ಬಿಡುಗಡೆ ಮಾಡಲಾಗಿದೆ.
ಭಾರತ ಮತ್ತು ದುಬೈನಲ್ಲಿ ಬಿಡುಗಡೆಯಾದ ಐಫೋನ್ ಪ್ರೊ ಬೆಲೆಯಲ್ಲಿ ತುಂಬಾ ವ್ಯತ್ಯಾಸವಿದೆ. ಯಾವ ದೇಶದಲ್ಲಿ ಐಫೋನ್ 15 ಸರಣಿಯ ಬೆಲೆಗಳು ಎಷ್ಟೆಷ್ಟಿವೆ ಎಂಬುದನ್ನು ನಾವಿಲ್ಲಿ ನೋಡೋಣ..
ಐಫೋನ್ ಮಾಡೆಲ್
ಸ್ಟೋರೇಜ್
ಭಾರತ
ಬ್ರಿಟನ್
ಅಮೆರಿಕಾ
ಸಿಂಗಾಪುರ
ಆಸ್ಟ್ರೇಲಿಯಾ
ವಿಯೆಟ್ನಾಂ
ಐಫೋನ್ 15
128GB
₹79,900
₹82,097
₹66,315
₹79,217
₹79,744
₹78.066
256GB
₹89,900
₹92,597
₹74,654
₹88,798
₹90,352
₹88.366
512GB
₹109,900
₹113,197
₹91,244
₹108,521
₹108,976
₹108.766
ಐಫೋನ್ 15 ಪ್ಲಸ್
128GB
₹89,900
₹92,597
₹74,654
₹88,448
₹87,741
₹88.366
256GB
₹99,900
₹102,897
₹82,866
₹98,118
₹98,429
₹98.666
512GB
₹119,900
₹123,497
₹99,458
₹117,682
₹117,027
₹118.966
ಐಫೋನ್ 15 ಪ್ರೋ
128GB
₹134,900
₹102,897
₹82,866
₹100,552
₹98,429
₹98.666
256GB
₹144,900
₹113,197
₹91,244
₹109,710
₹108,976
₹108.766
512GB
₹164,900
₹133,797
₹107,836
₹129,880
₹127,641
₹129.166
1TB
₹194,900
₹154,397
₹124,428
₹149,750
₹146,307
₹149.566
ಐಫೋನ್ 15 ಪ್ರೋ ಮ್ಯಾಕ್ಸ್
256GB
₹159,900
₹123,497
₹99,458
₹122,835
₹117,027
₹118.966
512GB
₹179,900
₹144,097
₹115,050
₹141,406
₹135,693
₹139.366
1TB
₹209,900
₹164,697
₹131,642
₹160,977
₹154,358
₹159.766
ಭಾರತದಲ್ಲಿ ಐಫೋನ್ 15ರ ಆರಂಭಿಕ ಬೆಲೆ 79 ಸಾವಿರ ರೂಗಳನ್ನು ನಿಗದಿ ಮಾಡಲಾಗಿದೆ. ಆದರೆ ಇದೇ ಬೆಲೆ ಅಮೆರಿಕದಲ್ಲಾದರೆ ಕೇವಲ 66 315 ರೂಗೆ ಸಿಗಲಿದೆ. ಇನ್ನು ಐಫೋನ್ 15 ಪ್ಲಸ್ ಬೆಲೆ 89 ಸಾವಿರದಿಂದ ಆರಂಭವಾಗುತ್ತದೆ. ಹೊಸ ಐಫೋನ್ 128 ಜಿಬಿಯಿಂದಲೇ ಆರಂಭವಾಗುತ್ತದೆ.