ಸ್ಯಾನ್ ಫ್ರಾನ್ಸಿಸ್ಕೋ:ಆಪಲ್ ಕಂಪನಿ ಈ ವರ್ಷದ ಕೊನೆಯಲ್ಲಿ M2 ಚಿಪ್‌ನೊಂದಿಗೆ ಹಲವಾರು ಹೊಸ ಮ್ಯಾಕ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕಂಪನಿಯು 13-ಇಂಚಿನ ಮ್ಯಾಕ್‌ಬುಕ್ ಪ್ರೊ, ಮ್ಯಾಕ್ ಮಿನಿ, 24 - ಇಂಚಿನ ಐಮ್ಯಾಕ್ ಮತ್ತು ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್ನನ್ನು M2 ಚಿಪ್‌ನೊಂದಿಗೆ ಬಿಡುಗಡೆಗೊಳಿಸಲಿದೆ ಎಂದು ದಿ ವರ್ಜ್ ವರದಿ ಮಾಡಿದೆ.
M2 ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದೆಂದು ನಂಬಲಾಗಿದ್ದು, ಇದು ಪ್ರಸ್ತುತ ಇರುವ M1ಗಿಂತ ಬದಲಾಗಿರಬಹುದು ಎನ್ನಲಾಗ್ತಿದೆ. M2 8-ಕೋರ್ಗಿಂತ ಹೆಚ್ಚಿನ CPU ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಇದನ್ನು ಸಣ್ಣ ನೋಡ್‌ನಲ್ಲಿ ನಿರ್ಮಿಸಲಾಗಿರುವುದರಿಂದ ವೇಗ ಮತ್ತು ದಕ್ಷತೆ ಹೆಚ್ಚಿರುತ್ತದೆ.