ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ದೈತ್ಯ ಆ್ಯಪಲ್ ಕಂಪನಿಯು ಹೇ ಸಿರಿ ಧ್ವನಿ ಸಹಾಯಕವನ್ನು ಕೇವಲ ಸಿರಿ ಎಂದು ಬದಲಾಯಿಸುವ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಧ್ವನಿ ಸಹಾಯಕ ಪ್ರಕ್ರಿಯೆಯನ್ನು ಉಪಯೋಗಿಸಲು ಇನ್ನಷ್ಟು ಸುಲಭಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಬ್ಲೂಮ್ಬರ್ಗ್ ಮಾರ್ಕ್ ಗುರ್ಮನ್ ಪ್ರಕಾರ, ಈ ಒಂದು ಹೊಸ ವೈಶಿಷ್ಟ್ಯವು ಹಲವಾರು ತಿಂಗಳಿನಿಂದ ಅಭಿವೃದ್ಧಿಯಲ್ಲಿದೆ. ಮುಂದಿನ ವರ್ಷ ಅಥವಾ 2024ರಲ್ಲಿ ಬಿಡುಗಡೆಯಾಗುತ್ತದೆ ಎಂದು ‘ದಿ ವರ್ಜ್’ ವರದಿ ಮಾಡಿದೆ.
ಸ್ಮಾರ್ಟ್ ಅಸಿಸ್ಟೆಂಟ್ ಸಕ್ರಿಯಗೊಳಿಸಲು, ಬಳಕೆದಾರರು "ಸಿರಿ" ಎಂದು ಹೇಳಬೇಕಾಗುತ್ತದೆ. ಈ ಒಂದು ಹೊಸ ವೈಶಿಷ್ಟ್ಯವನ್ನು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲು, ಕಂಪನಿಯು ಗಮನಾರ್ಹ ಕೃತಕ ಬುದ್ದಿಮತ್ತೆಯ ತರಬೇತಿ ಆಧಾರವಾಗಿರುವ ಇಂಜಿನಿಯರಿಂಗ್ ಕೆಲಸಗಳನ್ನು ನಿರ್ಮಿಸುವ ಅಗತ್ಯವಿದೆ. ಏಕೆಂದರೆ ಒಂದೇ ಎಚ್ಚರಿಕೆಯ ಪದವನ್ನು ವಿವಿಧ ಉಚ್ಚಾರಣೆ ಮತ್ತು ಉಪಭಾಷೆಗಳಲ್ಲಿ ಪದಗಳನ್ನು ಕಂಡು ಹಿಡಿಯಬೇಕಾಗುತ್ತದೆ ಎಂದು ವರದಿ ತಿಳಿಸಿದೆ.