ಸ್ಯಾನ್ ಪ್ರಾನ್ಸಿಸ್ಕೊ: ಟೆಕ್ ದೈತ್ಯ ಆ್ಯಪಲ್ ಹೊಸ ಇನ್ ಹೌಸ್ ಚಿಪ್ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ತನ್ನ ಡಿವೈಸ್ಗಳಲ್ಲಿ ಎಲ್ಲವೂ ಒಂದೇ ಚಿಪ್ನಲ್ಲಿ ಕಾರ್ಯ ನಿರ್ವಹಿಸುವಂತಹ ಚಿಪ್ಗಳ ತಯಾರಿಕೆ ನಡೆಸುತ್ತಿದೆ. ಸದ್ಯ ಬ್ರಾಡ್ಕಾಮ್ ಮೇಲೆ ಆ್ಯಪಲ್ ತನ್ನ ಸೆಲ್ಯೂಲರ್, ವೈ-ಫೈ ಮತ್ತು ಬ್ಯೂಟುತ್ ಚಿಪ್ ತಯಾರಿಸುತ್ತಿದೆ. ಬ್ಲೂಬರ್ಗ್ ವರದಿ ಅನುಸಾರ ಐಫೋನ್ ತಯಾರಕರು ಕೂಡ ವೈಪೈ ಮತ್ತು ಬ್ಲೂಟೂತ್ ಚಿಪ್ಗಳನ್ನು ಬದಲಾಯಿಸಲು ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಇದು ಬ್ರಾಡ್ಕಾಮ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆ್ಯಪಲ್ 2025ರಲ್ಲಿ ಡಿವೈಸ್ನಲ್ಲಿ ಹೊಸ ಚಿಪ್ ಅಳವಡಿಸಲಿದೆ.
ಕ್ವಾಲ್ಕಾಮ್ ಮೋಡೆಮ್ ಬದಲಾವಣೆ: ಟೆಕ್ ದೈತ್ಯ ಕ್ವಾಲ್ಕಾಮ್ ಮೋಡೆಮ್ ಅನ್ನು ಬದಲಿಸಲು ತನ್ನದೇ ಆದ ಸೆಲ್ಯುಲಾರ್ ಮೋಡೆಮ್ ಅನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಕಂಪನಿಯು 2024 ರ ಆರಂಭದಲ್ಲಿ ಅಥವಾ 2025 ರ ಆರಂಭದಲ್ಲಿ ತನ್ನದೇ ಆದ ಮೋಡೆಮ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಆ್ಯಪಲ್ನ ಉತ್ಪನ್ನಕ್ಕಾಗಿ 2023 ರ ಐಫೋನ್ ಬಿಡುಗಡೆಗಾಗಿ ನಾವು 5ಜಿ ಮೋಡೆಮ್ ಅಭಿವೃದ್ಧಿ ನಿರೀಕ್ಷಿಸುತ್ತೇವೆ ಎಂದು ಕ್ವಾಲ್ಕಾಮ್ ವಕ್ತಾರ ಕ್ಲೇರ್ ಕಾನ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದು ನಮ್ಮ ಹಿಂದಿನ ನಿರೀಕ್ಷೆಗಿಂತ ಶೇ 20ರಷ್ಟು ಹೆಚ್ಚಿದೆ.
ಚಿಪ್ ಮತ್ತು ಆಧುನಿಕ ಬೆಳವಣಿಗೆ ಮೇಲೆ ಕೆಲಸ: ಇದರ ಹೊರತಾಗಿ ನಮ್ಮ ಯಾವುದೇ ಯೋಜನೆಯಲ್ಲಿ ಬದಲಾವಣೆ ಇಲ್ಲ ಎಂದು ಕ್ವಾಲ್ಕಾಮ್ ವಕ್ತಾರ ತಿಳಿಸಿದ್ದಾರೆ. ಈ ಜಂಟಿ ಸೆಲ್ಯೂಲರ್ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಆ್ಯಪಲ್ ಸದ್ಯ ತನ್ನ ಉತ್ಪನ್ನಗಳ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ. ಸದ್ಯ ಇನ್ ಹೌಸ್ ಚಿಪ್ ಮತ್ತು ಆಧುನಿಕ ಬೆಳವಣಿಗೆಗೆ ಕೆಲಸ ನಿರ್ವಹಿಸಲಿದೆ.