ಕರ್ನಾಟಕ

karnataka

ETV Bharat / science-and-technology

ಎರಡನೇ ಪೀಳಿಗೆಯ ಹೋಮ್​​ಪಾಡ್​ ಘೋಷಣೆ ಮಾಡಿದ ಆ್ಯಪಲ್: ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಲಭ್ಯ - ETV bharat karnataka

ಸಿರಿ ಇಂಟಲಿಜನ್ಸ್​ನೊಂದಿಗೆ ಮತ್ತು ಕಂಪ್ಯೂಟೇಶನ್​ ಆಡಿಯೋ ಮೂಲಕ ಅದ್ಭುತವಾದ ಸಂಗೀತ ಆಲಿಸಬಹುದಾಗಿದೆ - ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ - ಆರು ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯ.

apple-launches-2nd-gen-homepod-with-next-level-sound-experience
ಎರಡನೇ ಪೀಳಿಗೆಯ ಹೋಮ್​​ಪಾಡ್​ ಘೋಷಣೆ ಮಾಡಿದ ಆ್ಯಪಲ್: ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಲಭ್ಯ

By

Published : Jan 19, 2023, 7:43 PM IST

ಕ್ಯುಪರ್ಟಿನೊ (ಕ್ಯಾಲಿಫೋರ್ನಿಯಾ): ಜನಪ್ರಿಯ ಮೊಬೈಲ್​ ತಯಾರಿಕಾ ಕಂಪನಿ ಆ್ಯಪಲ್​, ಹೊಸ ಎಲೆಕ್ಟ್ರಾನಿಕ್​​ ಸಾಧನಗಳನ್ನು ಹೊತ್ತುಕೊಂಡು ಮಾರುಕಟ್ಟೆಗೆ ಬರುತ್ತಲೆ ಇರುತ್ತದೆ. ಅದೇ ರೀತಿ ಈಗ ಆ್ಯಪಲ್​ ಎರಡನೇ ತಲೆಮಾರಿನ ಹೋಮ್​ಪಾಡ್​ ಸ್ಪೀಕರ್​ ಅನ್ನು ಬುಧವಾರ ಘೋಷಣೆ ಮಾಡಿದೆ. ಎರಡನೇ ಜನರೇಷನ್​ನ ಹೋಮ್​ಪಾಡ್​ ಸ್ಪೀಕರ್​ ಸಾಂಪ್ರಾದಾಯಿಕ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಮುಂದಿನ ಹಂತದ ಸ್ಪಷ್ಟವಾದ ಅಕೌಸ್ಟಿಕ್ ​ಶಬ್ದಗಳೊಂದಿಗೆ ಲಭ್ಯವಿದೆ ಎಂದು ಆ್ಯಪಲ್​ ತಿಳಿಸಿದೆ. ಇದರ ಜೊತೆಗೆ ಹೊಚ್ಚ ಹೊಸ ಆ್ಯಪಲ್​ ಪ್ಯಾಕ್​ ಆವಿಷ್ಕಾರ ಮತ್ತು ಸಿರಿ ಇಂಟಲಿಜನ್ಸ್​ನೊಂದಿಗೆ ಮತ್ತು ಕಂಪ್ಯೂಟೇಶನ್​ ಆಡಿಯೋ ಮೂಲಕ ಆದ್ಭುತವಾದ ಸಂಗೀತ ಆಲಿಸುವ ಅನುಭವವನ್ನು ಹೋಮ್​ಪಾಡ್​ನಲ್ಲಿ ಪಡೆಯಬಹುದಾಗಿದೆ.

ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೋಮ್​ಪಾಡ್​ (ಎರಡನೇ ಜನರೇಷನ್​)ನ ಬೆಲೆ 32.900ರೂ ಗಳು. ಹೋಮ್​ಪಾಡ್​ ಸ್ಮಾರ್ಟ್ ಸ್ಪೀಕರ್​ಗಳು ಐಫೋನ್​ ಎಸ್​ಇ ಮತ್ತು ಐಫೋನ್ 8 ನಲ್ಲಿರುವ ಸ್ಪೀಕರ್​ಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

''ನಮ್ಮ ಆಡಿಯೋ ಪರಿಣತಿ ಮತ್ತು ಆವಿಷ್ಕಾರದ ಗುಣಮಟ್ಟವನ್ನು ಹೆಚ್ಚಿಸಿ, ಹೊಸ ಹೋಮ್​ಪಾಡ್​ನಲ್ಲಿ​ ಆಳವಾದ ಬಾಸ್​, ನೈಸರ್ಗಿಕ ಮಧ್ಯಮ ಶ್ರೇಣಿಯ ಸ್ಪಷ್ಟವಾದ, ವಿವರವಾದ ಶಬ್ದವನ್ನು ನೀಡುತ್ತದೆ. ಇದಕ್ಕಿಂತ ಮೊದಲು ಬಿಡುಗಡೆಯಾದ ಹೋಮ್​ಪಾಡ್​ ಮಿನಿಯ ಜನಪ್ರಿಯತೆಯಿಂದ ನಾವು ಎರಡನೇ ಪೀಳಿಗೆಯ ಹೋಮ್​ಪಾಡ್​ ಅನ್ನು ಮಾರುಕಟ್ಟೆಗೆ ತರುತ್ತಿದ್ದೇವೆ. ಇದರಲ್ಲಿ ಶಕ್ತಿಶಾಲಿಯಾದ ಅಕೌಸ್ಟಿಕ್​ ಶಬ್ದವನ್ನು ಆನಂದಿಸಬಹುದಾಗಿದೆ. ಮುಂದಿನ ಪೀಳಿಗೆಯ ಹೋಮ್​ಪಾಡ್​ ಅನ್ನು ಪ್ರಪಂಚದಾದ್ಯಂತ ಗ್ರಾಹಕರಿಗೆ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ ಎಂದು ಆ್ಯಪಲ್​ ಸಂಸ್ಥೆಯ ವರ್ಲ್ಡ್​ವೈಡ್​ ಮಾರ್ಕೆಂಟಿಗ್​ನ ಹಿರಿಯ ಉಪಾಧ್ಯಕ್ಷ ಗ್ರೆಗ್​ ತಿಳಿಸಿದರು.

ಇದನ್ನೂ ಓದಿ:ಸ್ಯಾಮ್‌ಸಂಗ್​ನ ISOCELL HP2 ಮಾರುಕಟ್ಟೆಗೆ ಬಿಡುಗಡೆ.. ಭಾರತದ 5G ಫೋನ್ ಮಾರುಕಟ್ಟೆ ಶೇ.70ರಷ್ಟು ವಿಸ್ತರಣೆ ಸಾಧ್ಯತೆ

ಹೋಮ್​ಪಾಡ್​ ಬಿಳಿ ಮತ್ತು ಮಿಡ್​ನೈಟ್​ ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಈ ಬಣ್ಣಗಳನ್ನು ಮೆಶ್​ ಫ್ಯಾಬ್ರಿಕ್​ ಮತ್ತು ಪವರ್​ ಕೇಬಲ್​ಗಳ ಮರು ಬಳಕೆಯಿಂದ ಬಣ್ಣವನ್ನು ತಯಾರಿಸಲಾಗಿದೆ. ಮತ್ತು ಹೋಮ್​ಪಾಡ್​ನಲ್ಲಿ S7 ಚಿಪ್​ ಮತ್ತು ಸಿಸ್ಟಮ್​ ಸೆನ್ಸಿಂಗ್​ ತಂತ್ರಜ್ಞಾನದೊಂದಿಗೆ ಸಾಫ್ಟ್​ವೇರ್​ಗಳನ್ನು ಸಂಯೋಜಿಸಲಾಗಿದ್ದು, ಇದರಿಂದ ಇನ್ನೂ ಹೆಚ್ಚು ಸುಧಾರಿತ ಕಂಪ್ಯೂಟೇಷನ್​ ಆಡಿಯೋವನ್ನು ಆಲಿಸಬಹುದಾಗಿದೆ.

ಬಳಕೆದಾರರು ಆ್ಯಪಲ್​ ಮ್ಯೂಸಿಕ್​ನ ಸುಮಾರು 100 ಮಿಲಿಯನ್​ ಹಾಡುಗಳನ್ನು ಕೇಳಬಹುದು ಮತ್ತು ಆ್ಯಪಲ್​ 4k ಟಿವಿ ಹೋಮ್​ಪಾಡ್​ ಅನ್ನು ಸಂಯೋಜಿಸಿ ಆಕರ್ಷಕ ಹೋಮ್​ ಥಿಯೇಟರ್​ ಅನುಭವವನ್ನು ಪಡೆಯಬಹುದಾಗಿದೆ ಎಂದು ಆ್ಯಪಲ್​ ತಿಳಿಸಿದೆ.

ಎರಡನೇ ಪೀಳಿಗೆಯ ಹೋಮ್​ಪಾಡ್​ನಲ್ಲಿ ಆರು ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ತಮ್ಮ ವೈಯಕ್ತಿಕ ಹಾಡುಗಳ ಪಟ್ಟಿಯನ್ನು ಕೇಳಬಹುದು, ಮತ್ತು ಕ್ಯಾಲೆಂಡರ್​ ಈವೆಂಟ್​ಗಳನ್ನು ಹೊಂದಿಸಬಹುದು ಮತ್ತು ಮರು ವಿನ್ಯಾಸಗೊಳಿಸಲಾದ ಹೋಮ್​ ಅಪ್ಲಿಕೇಶನ್​ನಿಂದ ಬಳಕೆದಾರರು ನ್ಯಾವಿಗೇಟ್​ ಮಾಡಬಹುದು. ಹವಮಾನ ವರದಿ, ಸ್ಮಾರ್ಟ್​ಹೋಮ್​ನ ದೀಪಗಳ ನಿಯಂತ್ರಣ ಮತ್ತು ಮಲ್ಟಿಕ್ಯಾಮರಾ ವೀಕ್ಷಣೆಯನ್ನು ಹೊಮ್​ ಅಪ್ಲಿಕೇಶನ್​ ಸಹಾಯದೊಂದಿಗೆ ಪಡೆದುಕೊಳ್ಳಬಹುದು.

ಇದನ್ನೂ ಓದಿ:ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಾಡಿಗೆ ಸೇವೆ ಪ್ರಾರಂಭ: ವಾಯು ಮಾಲಿನ್ಯ, ಇಂಧನ ದರಗಳ ವಿರುದ್ಧ ಹೋರಾಡುವ ಗುರಿ..

ABOUT THE AUTHOR

...view details