ಕರ್ನಾಟಕ

karnataka

ಭಾರತದಲ್ಲಿ ಐಫೋನ್​ 14 ಮತ್ತಿತ್ತರ ಟಾಪ್​ ಮಾಡೆಲ್​ನಲ್ಲಿ 5ಜಿ ಸೇವೆ ಆರಂಭಿಸಿದ ಆ್ಯಪಲ್​

By

Published : Dec 14, 2022, 3:00 PM IST

ಆ್ಯಪಲ್​ನ ಏರ್​ಟೆಲ್​ ಮತ್ತು ಜಿಯೋ ಗ್ರಾಹಕರು ಈ ಐಒಎಸ್​ 16 ಬೆಟಾ ಸಾಫ್ಟ್​ವೇರ್​ ಪ್ರೋಗ್ರಾಂ ಅನ್ನು ಅಪ್​ಡೇಟ್​​ ಮಾಡುವ ಮೂಲಕ ಬಳಕೆ ಮಾಡಬಹುದಿತ್ತು.

ಭಾರತದಲ್ಲಿ ಐಫೋನ್​ 14 ಮತ್ತಿತ್ತರ ಟಾಪ್​ ಮಾಡೆಲ್​ನಲ್ಲಿ 5ಜಿ ಸೇವೆ ಆರಂಭಿಸಿದ ಆ್ಯಪಲ್​
apple-launched-5g-service-in-iphone-14-and-other-top-models-in-india

ನವದೆಹಲಿ:5ಜಿ ಯುಗಕ್ಕೆ ಭಾರತ ಪ್ರವೇಶ ಮಾಡಿದೆ. ಈ ಹಿನ್ನಲೆ ಭಾರತದಲ್ಲಿ ಐಫೋನ್​ 14, ಐ ಫೋನ್​ 13, ಐಫೋನ್​ ಎಸ್​ಇ ಮತ್ತು ಐಫೋನ್​ 12 5ಜಿಗೆ ಬೆಂಬಲಿಸಲಿದ ಎಂದು ಆ್ಯಪಲ್​ ಘೋಷಿಸಿದೆ. ಐಫೋನ್​ 12 ಅಥವಾ ಅದರ ನಂತರ ಬಂದ ಮಾಡೆಲ್​ಗೆ ರಿಲಯನ್ಸ್​ ಜಿಯೋ ಮತ್ತು ಏರ್​ಟೆಲ್​ 5ಜಿ ಸಂಪರ್ಕ ಪಡೆಯಲಿದ್ದು, ಇದಕ್ಕೆ ಐಒಎಸ್​ 16.2 ಅಪ್ಡೇಟ್​​ ಮಾಡಬೇಕಿದ್ದು, ಇದು ಹೆಚ್ಚಿನ ವೈಶಿಷ್ಟ್ಯ ಹೊಂದಿದೆ.

ಕೆಲ ಆಯ್ದ ಐಫೋನ್​ಗಳಲ್ಲಿ ಐಒಎಸ್​ 16 ಬೆಟಾ ಸಾಫ್ಟ್​​ವೇರ್​​ ಪ್ರೋಗ್ರಾಂ ಮೂಲಕ ಕಳೆದ ವಾರದಿಂದಲೇ ದೇಶದಲ್ಲಿ 5ಜಿ ಸೇವೆ ಪಡೆಯ ಬಹುದಿತ್ತು. ಆ್ಯಪಲ್​ನ ಏರ್​ಟೆಲ್​ ಮತ್ತು ಜಿಯೋ ಗ್ರಾಹಕರು ಈ ಐಒಎಸ್​ 16 ಬೆಟಾ ಸಾಫ್ಟ್​ವೇರ್​ ಪ್ರೋಗ್ರಾಂ ಅನ್ನು ಅಪ್ಡೇಟ್​​ ಮಾಡುವ ಮೂಲಕ ಬಳಕೆ ಮಾಡಬಹುದಿತ್ತು. ನೆಟ್​ವರ್ಕ್​ ವಾಲಿಡೇಷನ್​ ಮತ್ತು ಕಾರ್ಯಕ್ಷಮತೆ ಬಳಿಕ ಭಾರತದ ಐಫೋನ್​ ಬಳಕೆದಾರರು ಉತ್ತಮ 5ಜಿ ಸೇವೆ ಹೊಂದಲು ಆ್ಯಪಲ್​ ಕಾರ್ಯ ನಿರ್ವಹಿಸಿದೆ ಎಂದು ಸಂಸ್ಥೆ ತಿಳಿಸಿತ್ತು.

ಪ್ರಮುಖ ಮೆಟ್ರೋ ನಗರಗಳಲ್ಲಿ ಭಾರತದ 5ಜಿ ಸೇವೆಯನ್ನು ಹಂತ ಹಂತವಾಗಿ ನೀಡಲು ಮುಂದಾಗಿದೆ. ಸ್ಮಾರ್ಟ್​ಫೋನ್​ಗಳು ಕೂಡ ತಮ್ಮ ಡಿವೈಸ್​ಗಳಲ್ಲಿ 5ಜಿ ಸೇವೆ ಸಿಗುವಂತೆ ಕಾರ್ಯ ನಿರ್ವಹಣೆಗೆ ಮುಂದಾಗಿದೆ. ಈ ಸಂಬಂಧ ಆ್ಯಪಲ್​, ಐಫೋನ್​ ಬಳಕೆದಾರರಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಲು ಪರೀಕ್ಷೆಗಳನ್ನು ನಡೆಸಿದೆ. ಐಫೋನ್​ ಕೂಡ ತಮ್ಮ ಬಳಕೆದಾರರಿಗೆ ಸೂಪರ್​ - ಫಾಸ್ಟ್​ ಡೌನ್​ಲೋಡ್​ ಮತ್ತು ಅಪ್ಲೋಡ್​​ ಸೇವೆ ಜೊತೆಗೆ ಉತ್ತಮ ಸ್ಟ್ರೀನಿಂಗ್​, ರಿಯಲ್​ ಟೈಮ್​ ಸಂಪರ್ಕ ನೀಡಲು ಮುಂದಾಗಿದೆ.

ಐಫೋನ್​ನಲ್ಲಿ 5ಜಿ ಬೆಂಬಲವು ಈಗ ಪ್ರಪಂಚದಾದ್ಯಂತ 70 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ 250ಕ್ಕೂ ಹೆಚ್ಚು ವಾಹಕ ಪಾಲುದಾರರಿಗೆ ವಿಸ್ತರಿಸಿದೆ, ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳಿಗೆ ಆದ್ಯತೆ ನೀಡುವುದರಿಂದ ಭಾರತದಲ್ಲಿ 5ಜಿ ​​ಆರಂಭಿಕ ಅಳವಡಿಕೆ ಸಕ್ರಿಯಗೊಳಿಸುತ್ತದೆ.

ಇದನ್ನೂ ಓದಿ:5ಜಿ ಸ್ಮಾರ್ಟ್​ಫೋನ್​ಗೆ ಹೊಸ ಡೈಮೆನಿಸ್ಟಿ 8200 ಚಿಪ್​ ಬಿಡುಗಡೆ ಘೋಷಿಸಿದ ಮೀಡಿಯಾ ಟೆಕ್​

ABOUT THE AUTHOR

...view details