ಬೆಂಗಳೂರು: ಆ್ಯಪಲ್ ಗ್ರಾಹಕರ ದೀರ್ಘ ಕಾಯುವಿಕೆ ಅವಧಿ ಮುಗಿದಿದ್ದು, ಐಫೋನ್ 15 ಸರಣಿಯ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜನರಲ್ಲಿ ಸಾಕಷ್ಟು ಕ್ರೇಜ್ ಮೂಡಿಸಿರುವ ಈ ಫೋನ್ ಕೊಳ್ಳಲು ಗ್ರಾಹಕರು ಕೂಡ ಉತ್ಸಾಹ ತೋರಿದ್ದು, ಸರತಿ ಸಾಲಿನಲ್ಲಿ ನಿಂತಿದ್ದಾರೆ. ಐಫೋನ್ ಸರಳಿಯ ಮೊಬೈಲ್ಗಳಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐ ಪೋನ್ 15 ಪ್ರೋ ಮಾಕ್ಸ್ ಮೊಬೈಲ್ಗಳಿವೆ. ಇದರ ಜೊತೆಗೆ ಆ್ಯಪಲ್ ವಾಚ್ನ ಸೀರಿಸ್ 9 ಮತ್ತು ವಾಚ್ ಅಲ್ಟ್ರಾ 2 ಕೂಡ ಬಿಡುಗಡೆಯಾಗಿದೆ.
ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್: ಐ ಫೋನ್ ಸರಣಿಯಲ್ಲಿ ವೈಶಿಷ್ಟ್ಯಗಳಲ್ಲಿ ಒಂದು ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್ ಆಗಿದೆ. ಆರಂಭದಲ್ಲಿ ಈ ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್ ಅನ್ನು ಐಫೋನ್ 14 ಪ್ರೋ ಮತ್ತು ಪ್ರೋ ಮಾಕ್ಸ್ನಲ್ಲಿ ನೀಡಲಾಗಿತ್ತು. ಇದೀಗ ಈ ವೈಶಿಷ್ಟಯ 15 ಮತ್ತು ಐಫೋನ್ 15 ಪ್ಲಸ್ನಲ್ಲಿಯೂ ಇದೆ.
ವರ್ಜ್ ಪ್ರಕಾರ, ಐಫೋನ್ 15 OLED ಸೂಪರ್ ರೆಟಿನಾ ಡಿಸ್ಪ್ಲೇ ಒಂದಿದ್ದು, ಇದು ಡಾಲ್ಬಿ ವರ್ಷನ್ ಕಂಟೆಟ್ ಜೊತೆಗೆ 1,600 ಬ್ರೈಟ್ನೆಸ್ ಹೊಂದಿದೆ. ಸೂರ್ಯನ ಬೆಳಕಿನಲ್ಲಿ ಇದರ ಹೆಚ್ಚಿನ ಮಟ್ಟದ ಡಿಸ್ಪ್ಲೈ ಬ್ರೈಟ್ನೆಸ್ 2,000 ನಿಟ್ಸ್ ಆಗಿದ್ದು, ಐಫೋನ್ 14ಗಿಂತ ಇದು ದುಪ್ಪಟ್ಟಾಗಿರಲಿದೆ.
ಇನ್ನು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಕ್ಯಾಮೆರಾ ವ್ಯವಸ್ಥೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬಹುದಾಗಿದೆ. ಮುಖ್ಯ ಕ್ಯಾಮೆರಾ ಸೆನ್ಸಾರ್ನಲ್ಲಿ 48 ಮೆಗಾಪಿಕ್ಸೆಲ್ ಇರಲಿದೆ. ಪೋಟ್ರಾಯಟ್ ಮೂಡ್ನಲ್ಲಿ ಮ್ಯಾನುಯಲ್ ಸ್ವಿಚಿಂಗ್ ಅವಶ್ಯಕತೆಯನ್ನು ತೆಗೆಯಲಾಗಿದೆ.
ಐ ಫೋನ್ 15 6.1 ಇಂಚ್ ಸ್ಕ್ರೀನ್ ಹೊಂದ್ದರೆ, ಐಫೋನ್ 15 ಪ್ಲಸ್ 6.7 ಇಂಚಿನ ಸ್ಕ್ರೀನ್ ಲಭ್ಯವಿದೆ. ಈ ಐಫೋನ್ಗಳು ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ.
ಭಾರತದಲ್ಲಿ ಐಫೋನ್ ದರಗಳ ಪಟ್ಟಿ ಹೀಗಿದೆ
ಐಫೋನ್ 15 (128 GB): Rs 79,900
ಐಫೋನ್ 15 (256 GB): Rs 89,900
ಐಫೋನ್ 15 (512GB): Rs 1,09,900