ಕರ್ನಾಟಕ

karnataka

ETV Bharat / science-and-technology

ಆಪಲ್​ನಿಂದ ಮುಂದಿನ ವರ್ಷ ಐಪ್ಯಾಡ್ ಪ್ರೊ ಮಾಡೆಲ್‌ಗಳ ಬಿಡುಗಡೆ: ಪ್ರಸ್ತುತ ಮಾದರಿಗಳಿಗಿಂತ ಹೆಚ್ಚು ದುಬಾರಿ ಸಾಧ್ಯತೆ - ಹೊಸ ಐಪ್ಯಾಡ್ ಪ್ರೊ ಮಾದರಿ

ಆಪಲ್ ಕಂಪನಿ 2024 ರಲ್ಲಿ 11 ಇಂಚಿನ ಉದ್ದ ಮತ್ತು 13 ಇಂಚಿನ ಅಗಲ ಡಿಸ್‌ಪ್ಲೇ ಗಾತ್ರ ಹೊಂದಿರುವ ಹೊಸ ಐಪ್ಯಾಡ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

Apple iPad Pro models with OLED display
ಆಪಲ್​ನಿಂದ ಮುಂದಿನ ವರ್ಷ ಐಪ್ಯಾಡ್ ಪ್ರೊ ಮಾಡೆಲ್‌ಗಳ ಬಿಡುಗಡೆ: ಪ್ರಸ್ತುತ ಮಾದರಿಗಳಿಗಿಂತ ಹೆಚ್ಚು ದುಬಾರಿ ಸಾಧ್ಯತೆ

By

Published : Mar 15, 2023, 9:49 PM IST

ನವದೆಹಲಿ: ಜಗತ್ತಿನ ಟೆಕ್​ ದಿಗ್ಗಜ ಆಪಲ್ ಕಂಪನಿ 2024 ರಲ್ಲಿ 11 ಇಂಚಿನ ಉದ್ದ ಮತ್ತು 13 ಇಂಚಿನ ಅಗಲ ಡಿಸ್‌ಪ್ಲೇ ಗಾತ್ರ ಹೊಂದಿರುವ ಹೊಸ ಐಪ್ಯಾಡ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕ್ಯುಪರ್ಟಿನೊ ಮೂಲದ ಟೆಕ್ ಮೇಜರ್ ಮುಂಬರುವ ಮಾದರಿಗಳ ಬಗ್ಗೆ ಯಾವುದೇ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಅದಕ್ಕೂ ಮೊದಲೇ ಅವುಗಳ ಬೆಲೆ ವಿವರಗಳು ಬಹಿರಂಗವಾಗಿವೆ.

OLED ಡಿಸ್‌ಪ್ಲೇ ಹೊಂದಿರುವ Apple ನ 2024 iPad Pro ಮಾದರಿಯ ಬೆಲೆ ಪ್ರಸ್ತುತ iPad Pro OLED ಡಿಸ್‌ಪ್ಲೇ ಹೊಂದಿರುವ Apple iPad Pro ಮಾದರಿಗಿಂತ ಶೇ 80 ಹೆಚ್ಚು ದುಬಾರಿಯಾಗಬಹುದು ಎಂದು ಆನ್‌ಲೈನ್‌ನಲ್ಲಿ ಹೇಳಲಾಗುತ್ತಿದೆ. ಕಂಪನಿಯು OLED ಪ್ಯಾನೆಲ್‌ಗಳ ಪೂರೈಕೆ ವೆಚ್ಚದ ಕುರಿತು ತಯಾರಕರಾದ LG ಮತ್ತು Samsung ಡಿಸ್‌ಪ್ಲೇ ಜೊತೆಗೆ ಮಾತುಕತೆ ನಡೆಸುತ್ತಿದೆ. ಕಳೆದ ವರ್ಷ ಆಪಲ್ 11-ಇಂಚಿನ ಮತ್ತು 12.9-ಇಂಚಿನ LCD ಡಿಸ್‌ಪ್ಲೇಯೊಂದಿಗೆ ಎರಡು iPad Pro 2022 ಮಾದರಿಗಳನ್ನು ಬಿಡುಗಡೆ ಮಾಡಿತ್ತು.

ದಿ ಎಲೆಕ್ ವರದಿಯ ಪ್ರಕಾರ, ಒಎಲ್ಇಡಿ ಡಿಸ್‌ಪ್ಲೇ ಹೊಂದಿರುವ ಆಪಲ್​ನ ಐಪ್ಯಾಡ್ ಪ್ರೊ ಮಾದರಿಗಳು ಪ್ರಸ್ತುತ ಇರುವುದಕ್ಕಿಂತ ಹೆಚ್ಚು ದುಬಾರಿಯಾಗಿರಲಿವೆ. 11 ಇಂಚಿನ ಐಪ್ಯಾಡ್ ಪ್ರೊ ಬೆಲೆ ಸುಮಾರು 1,23,000 ರೂ.ಗಳಾಗಿದ್ದರೆ, 13 ಇಂಚಿನ ಡಿಸ್​ಪ್ಲೇ ಗಾತ್ರದ ಮಾದರಿಯ ಬೆಲೆ ಸುಮಾರು 1,47,600 ರೂ. ಇದು ಪ್ರಸ್ತುತ ಮಾದರಿಗಿಂತ ಶೇ 60 ಹೆಚ್ಚು ದುಬಾರಿಯಾಗಿರಲಿವೆ ಮತ್ತು ಪ್ರಸ್ತುತ ತಲೆಮಾರಿಗಿಂತ ಶೇ 80 ಹೆಚ್ಚು ದುಬಾರಿ ಬೆಲೆಯಾಗಿರಲಿದೆ ಎಂದು ಅಂದಾಜಿಸಲಾಗಿದೆ.

11 ಇಂಚಿನ ಡಿಸ್​ಪ್ಲೇ ಹೊಂದಿರುವ ಐಪ್ಯಾಡ್ ಪ್ರೊ ಮೂಲ ಮಾದರಿಗೆ ಸುಮಾರು 65,500 ರೂ ಇದ್ದರೆ, ಮತ್ತೊಂದೆಡೆ, 12.9-ಇಂಚಿನ iPad Pro ನ ಆರಂಭಿಕ ಬೆಲೆ ಸುಮಾರು 90,100 ರೂ. ಆಗಿದೆ. ಮುಂಬರುವ iPad Pro ಮಾದರಿಗಳ ಸೋರಿಕೆಯಾದ ಬೆಲೆಗಳು ಪ್ರಸ್ತುತ ಲಭ್ಯವಿರುವ ಕೆಲವು M2 ಚಿಪ್‌ಸೆಟ್ - ಚಾಲಿತ ಮ್ಯಾಕ್‌ಬುಕ್ ಪ್ರೋಗಳಿಗಿಂತ ಹೆಚ್ಚು ದುಬಾರಿಯಾಗಿರಲಿವೆ. MacBook Air 2022 ಬೆಲೆ ಸುಮಾರು 93,300 ರೂ.ಗಳಿಂದ ಪ್ರಾರಂಭವಾಗುತ್ತದೆ, ಆದರೆ 13-ಇಂಚಿನ Apple MacBook Pro 2022 ಬೆಲೆ ಸುಮಾರು 1,01,000 ರೂ.ಗಳಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ:ಹೊಸ ಮೊಬೈಲ್‌ನಲ್ಲಿ Install ಆಗಿರುವ Appಗಳಿಂದ ಮಾಹಿತಿ ಕಳವು?: ಸದ್ಯದಲ್ಲೇ ಇದಕ್ಕೆ ಕಡಿವಾಣ

ಮುಂದಿನ ವಾರ ಬಿಡುಗಡೆಯಾಗಲಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ F14 5G:ಕೈಗೆಟುಕುವ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್14 5ಜಿ (Galaxy F14 5G) ಸ್ಮಾರ್ಟ್‌ಫೋನ್ ಭಾರತದಲ್ಲಿ ಮುಂದಿನ ವಾರ ಬಿಡುಗಡೆಯಾಗಲಿದೆ. 15,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಇದು ಲಭ್ಯವಾಗಲಿದೆ ಎಂದು ಉದ್ಯಮ ಮೂಲಗಳು ಸೋಮವಾರ ತಿಳಿಸಿವೆ. ಗ್ಯಾಲಕ್ಸಿ ಎಫ್14 5G 6000mAh ಬ್ಯಾಟರಿ ಮತ್ತು ಉತ್ತಮ ಕಾರ್ಯಕ್ಷಮತೆ ನೀಡಲು ಶಕ್ತಿಯುತ 5 nm Exynos ಚಿಪ್‌ಸೆಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಬೆಲೆಯ ಫೋನ್​ಗಳ ವಿಭಾಗದಲ್ಲಿ ಇದು ಕಂಪನಿಯ ಪ್ರಮುಖ ಉತ್ಪನ್ನವಾಗಲಿದೆ.

ABOUT THE AUTHOR

...view details