ನವದೆಹಲಿ: ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಜುಲೈನಲ್ಲಿ iOS ಆ್ಯಪ್ ಸ್ಟೋರ್ನ ಸರಾಸರಿ ಇನ್ - ಆ್ಯಪ್ ಪರ್ಚೇಸ್ಗಳ (IAPs) ದರ ಶೇ 40 ರಷ್ಟು ಹೆಚ್ಚಾಗಿದೆ. ಖಾಸಗಿತನ ನಿಯಮಗಳ ಬದಲಾವಣೆಯಿಂದ ದರಗಳಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ.
ಇನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಇನ್-ಆ್ಯಪ್ ಪರ್ಚೇಸ್ ದರಗಳು ಶೇ 9ರಷ್ಟು ಮಾತ್ರ ಹೆಚ್ಚಾಗಿವೆ. ಆ್ಯಪ್ ಇಂಟೆಲಿಜೆನ್ಸ್ ಸಂಸ್ಥೆ ಆಪ್ಟೋಪಿಯಾ ದ ಅಂಕಿ - ಅಂಶಗಳ ಪ್ರಕಾರ, ಗ್ರಾಹಕರ ಬೆಲೆ ಸೂಚ್ಯಂಕವು ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 8.5ಕ್ಕೆ ಏರಿದೆ. ಬಹುತೇಕ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ.
2022 ರಲ್ಲಿ ಉಂಟಾದ ಹಣದುಬ್ಬರಕ್ಕಿಂತಲೂ ಮುಂಚೆಯೇ iOS ನಲ್ಲಿನ ದರಗಳು ಹೆಚ್ಚಾಗಿವೆ. ಆ್ಯಪಲ್ನ ಆ್ಯಪ್ ಟ್ರ್ಯಾಕಿಂಗ್ ಟ್ರಾನ್ಸಪರೆನ್ಸಿ (ATT) ನೀತಿಯಿಂದಾಗಿ ಬಳಕೆದಾರರನ್ನು ಗಳಿಸಿಕೊಳ್ಳುವುದು ಮುಂಚಿಗಿಂತಲೂ ದುಬಾರಿಯಾಗಿದೆ. ಅಂದರೆ ಪ್ರತಿ ಇನ್ಸ್ಟಾಲ್ಗೆ ತಗಲುವ ವೆಚ್ಚ ಜಾಸ್ತಿಯಾಗಿರುವುದರಿಂದ ಆ್ಯಪ್ ಪಬ್ಲಿಷರ್ಗಳು ಅದಕ್ಕೆ ಪ್ರತಿಕ್ರಿಯೆಯಾಗಿ ದರ ಹೆಚ್ಚು ಮಾಡಿದ್ದಾರೆ ಎಂದು ಆಪ್ಟೋಪಿಯಾ ವರದಿ ಹೇಳಿದೆ.