ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಜಾಗತಿಕ ಟೆಕ್ ದೈತ್ಯ ಆ್ಯಪಲ್ ಕಂಪನಿ ಮುಂದಿನ ವರ್ಷ ನಾಲ್ಕನೇ ತಲೆಮಾರಿನ ಐಫೋನ್ ಎಸ್‌ಇ ಬಿಡುಗಡೆ ಮಾಡುವ ಯಾವುದೇ ಯೋಚನೆಯನ್ನು ಹೊಂದಿಲ್ಲ. 2024ರಲ್ಲಿ ಐಫೋನ್ ಎಸ್ಇ ಸ್ಮಾರ್ಟ್‌ಫೋನ್ ಮಾಸ್ ಪ್ರೊಡಕ್ಷನ್ ಯೋಜನೆ ರದ್ದುಗೊಳಿಸಲಾಗಿದೆ ಎಂದು ಆ್ಯಪಲ್ ತನ್ನ ಪೂರೈಕೆದಾರರಿಗೆ ತಿಳಿಸಿದೆ ಎಂದು ಖ್ಯಾತ ವಿಶ್ಲೇಷಕ ಮಿಂಗ್ ಚಿ ಕುವೊ ಹೇಳಿದ್ದಾರೆ.
5ಜಿ ಬೆಂಬಲದ ಆಕರ್ಷಕ ಲುಕ್ ಹೊಂದಿರುವ ಈ ಐಫೋನ್ ಎಸ್ಇ ಫೋನ್‌ಗಾಗಿ ಐಫೋನ್ ಪ್ರಿಯರು ಎದುರು ನೋಡುತ್ತಿದ್ದರು. ಆದರೆ, ಮುಂದಿನ ವರ್ಷ ಈ ಫೋನ್ ಬಿಡುಗಡೆ ಮಾಡದಿರುವ ಆ್ಯಪಲ್ ಕಂಪನಿಯ ನಿರ್ಧಾರದಿಂದಾಗಿ ನಿರಾಶೆ ಉಂಟು ಮೂಡಿಸಿದಂತೆ ಆಗಲಿದೆ. ಹೊಸದಾದ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆ, ಕೈಗೆಟುಕುವ ದರದಲ್ಲಿ ಐಫೋನ್ ಖರೀದಿ ಮಾಡಬೇಕೆಂದು ಹುಡುಕುತ್ತಿದ್ದ ಗ್ರಾಹಕರಿಗೆ ಎಸ್ಇ ಸರಣಿಯ ಫೋನ್ಗಳು ಬಹಳ ನೆಚ್ಚಿನದಾಗಿವೆ. ಇದರ ಹಿಂದಿನ ಮೂರು ಆವೃತ್ತಿಗಳು ಸಹ ಯಶಸ್ವಿಯಾಗಿರುವುದು ಸಹ ಇದೇ ಕಾರಣಕ್ಕೆ. ಆದರೆ, ಐಫೋನ್ ಎಸ್‌ಇ 4 ಬಿಡುಗಡೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಈ ಸುದ್ದಿಯನ್ನು ಆ್ಯಪಲ್ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಇದನ್ನೂ ಓದಿ:ಮೊಬೈಲ್ ದರ ಹೆಚ್ಚಿಸಲಿರುವ ಟೆಲಿಕಾಂ ಕಂಪನಿಗಳು.. ಕೊರೊನಾ ಸಮಯದಲ್ಲಿ ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ!
ಸದ್ಯ ವಿಶ್ಲೇಷಕ ಮಿಂಗ್ ಚಿ ಕುವೊ ಪ್ರಕಾರ, ಆಪಲ್ ತನ್ನ ಐಫೋನ್ ಎಸ್ಇ 4 ಅನ್ನು ಮಾರುಕಟ್ಟೆಗೆ ಪರಿಚಯಿಸುವ ಕಲ್ಪನೆ ರದ್ದುಗೊಳಿಸಿದೆ. ಈ ಐಫೋನ್ ಕುರಿತು ಆ್ಯಪಲ್ ಎರಡು ರೀತಿಯಲ್ಲಿ ಆಯೋಚನೆಯನ್ನು ಹೊಂದಿದೆ. ಆದಾಗ್ಯೂ, ಆ್ಯಪಲ್ ತನ್ನ ಪೂರೈಕೆಯ ಪಾಲುದಾರರಿಗೆ 2024ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಐಫೋನ್ ಎಸ್‌ಇ 4 ಯೋಜನೆ ರದ್ದುಗೊಳಿಸಿರುವುದಾಗಿ ತಿಳಿಸಿದೆಯಂತೆ.