ಹೈದರಾಬಾದ್: ಟೆಕ್ ದೈತ್ಯ ಆ್ಯಪಲ್ ಕೈಗೆಟುಕುವ ದರದಲ್ಲಿ ಬಹು ಬೇಡಿಕೆಯ ಆ್ಯಪಲ್ ಪೆನ್ಸಿಲ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಯುಎಸ್ಬಿ - ಸಿ ಪೋರ್ಟ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಬಿಡುಗಡೆಯಾದ ಹೊಸ ಆ್ಯಪಲ್ ಪೆನ್ಸಿಲ್ ಅನ್ನು ನವೆಂಬರ್ಗೆ ಮುನ್ನವೇ ಲಭ್ಯವಾಗಲಿದೆ ಎಂದು ಕಂಪನಿ ಘೋಷಿಸಿದೆ.
ಲಕ್ಷಣ: ಹೊಸ ಆ್ಯಪಲ್ ಪೆನ್ಸುಲ್ ಪಿಕ್ಸೆಲ್ ಪರಿಪೂರ್ಣತೆಯ ನಿಖರತೆ, ಕಡಿಮೆ ಲೆಟೆನ್ಸಿ ಮತ್ತು ಟಿಲ್ಟ್ ಸೆನ್ಸಿಟಿವಿಟಿ ಹೊಂದಿದ್ದು, ಮ್ಯಾಟ್ ಫಿನಿಶ್ ಜೊತೆಗೆ ಪ್ಲಾಟ್ ಸೈಡ್ ಜೊತೆಗೆ ಮ್ಯಾಗ್ನೆಟಿಕ್ ಆಗಿ ಜೋಡಣೆ ಹೊಂದಿದೆ. ಯುಎಸ್ಬಿ ಸಿ ಪೋರ್ಟ್ ಅನ್ನು ಕವರ್ ಮಾಡಲು ವಿಶೇಷವಾಗಿ ವಿನ್ಯಾಸ ಮಾಡಲಿದೆ. ಜೊತೆಗೆ ಸುಲಭದಾಯಕ ಸಂಪರ್ಕ ಮತ್ತು ಚಾರ್ಜಿಂಗ್ ಅವಕಾಶ ಹೊಂದಿದೆ. ಇದು ಸುಲಭ ಸಂಪರ್ಕ ಮತ್ತು ಚಾರ್ಜಿಂಗ್ ಅವಕಾಶವನ್ನು ಹೊಂದಿದೆ. ಇದು ಐಪ್ಯಾಡ್ನ ತುದಿಯಲ್ಲಿ ಮ್ಯಾಗ್ನೆಟಿಕ್ ಅಟ್ಯಾಚ್ ಕೂಡಾ ಹೊಂದಿದೆ. ಕಳೆದ ವರ್ಷ 10ನೇ ಜನರೇಷನ್ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ಸುಲಭವಾಗಿ ಸಂಪರ್ಕಿಸುವ ಮತ್ತು ಲಭ್ಯತೆ ಹೊಂದಿದೆ ಎಂದು ಆ್ಯಪಲ್ ತಿಳಿಸಿದೆ.
ದರ:ಆ್ಯಪಲ್ ಪ್ರಿಯರಿಗೆ ಈ ಪೆನ್ಸಿಲ್ 7,900 ರೂಗೆ ಲಭ್ಯವಾಗಲಿದ್ದು, ವಿದ್ಯಾರ್ಥಿಗಳಿಗೆ 6,900ಕ್ಕೆ ಸಿಗಲಿದೆ. ನವೆಂಬರ್ ಮುನ್ನವೇ ಲಭ್ಯವಾಗುವ ಇದು ಬಳಕೆದಾರರಿಗೆ ಉನ್ನತ ಅನುಭವ ನೀಡುವ ಭರವಸೆ ನೀಡಿದೆ.
ಸಾಮರ್ಥ್ಯ: ಆ್ಯಪಲ್ ಪ್ರಕಾರ, ಕಡೆಯ ಪೆನ್ಸಿಲ್ ಅನ್ನು ಎಲ್ಲ ಐಪ್ಯಾಡ್ ಮಾಡೆಲ್ನ ಯುಎಸ್ಬಿ -ಸಿ ಪೋರ್ಟ್ ಜೊತೆಗೆ ಸಂಯೋಜಿಸಲಾಗಿದೆ. ಇದು 10 ಜನರೇಷನ್ ಐಪಾಡ್ನಲ್ಲಿ ಕೂಡ ಹೊಂದಿದೆ. ಐಪಾಡ್ ಏರ್ (4-5ನೇ ಜನರೇಷನ್), ಐಪಾಡ್ ಪ್ರೊ 11 ಇಂಚ್ (1ರಿಂದ ನಾಲ್ಕು ಜನರೇಷನ್), ಐಪಾಡ್ ಪ್ರೋ 12.9 ಇಂಚ್ (3 ರಿಂದ 6ನೇ ಜನರೇಷನ್) ಮತ್ತು ಐಪಾಡ್ ಮಿನಿ (6ನೇ ಜನರೇಷನ್) ಒಳಗೊಂಡಿದೆ.