ಕರ್ನಾಟಕ

karnataka

ETV Bharat / science-and-technology

ವಾಟ್ಸಾಪ್​ನಿಂದ ಹೊಸ ಫೀಚರ್​: ಡೆಸ್ಕ್​ಟಾಪ್​ ಗ್ರೂಪ್​ ಚಾಟ್​​ ಮ್ಯೂಟ್ ಶಾರ್ಟ್​ಕಟ್​ - ವಾಟ್ಸಾಪ್​ ಡೆಸ್ಕ್​ಟಾಪ್​ ಬೆಟಾ

ಇದರ ಮಧ್ಯೆ, ಬಳಕೆದಾರರು ತಮ್ಮ ಡೆಸ್ಕ್​ಟಾಪ್​ನಲ್ಲಿ ಗ್ರೂಪ್​ ಚಾಟ್​ಗಳ ಬಳಕೆದಾರರ ಪ್ರೊಫೈಲ್​ ಫೋಟೋಗಳನ್ನು ನೋಡುವ ಅವಕಾಶವನ್ನು ವಾಟ್ಸಾಪ್​ ನೀಡಿದೆ

ವಾಟ್ಸಾಪ್​ನಿಂದ ಮತ್ತೊಂದು ಹೊಸ ಫೀಚರ್​:  ಡೆಸ್ಕ್​ಟಾಪ್​ ಗ್ರೂಪ್​ ಚಾಟ್​​ ಮ್ಯೂಟ್ ಶಾರ್ಟ್​ಕಟ್​
another-new-feature-from-whatsapp-desktop-group-chat-mute

By

Published : Nov 28, 2022, 11:48 AM IST

ವಾಷಿಂಗ್ಟನ್​:ವಾಟ್ಸಾಪ್​ ಡೆಸ್ಕ್​ಟಾಪ್​ ಬೆಟಾದಲ್ಲಿ ಭವಿಷ್ಯದಲ್ಲಿ ವಾಟ್ಸಾಪ್​ ಗ್ರೂಪ್​ಚಾಟ್​ ಮ್ಯೂಟ್​ ಶಾರ್ಟ್​ಕಟ್​ ಆಗಿ ಕೆಲಸ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರೂಪ್​ಚಾಟ್​ನ ಮೇಲ್ಭಾಗದಲ್ಲಿ ಈ ಮ್ಯೂಟ್​ ಶಾರ್ಟ್​ಕಟ್​ ಕಾಣಲಿದೆ. ಇದರಿಂದ ಬಳಕೆದಾರರು ನೋಟಿಫಿಕೇಷನ್​ ಅನ್ನು ಡಿಸೆಬಲ್​ ಕೂಡ ಮಾಡಬಹುದಾಗಿದೆ ಎಂದು ವಾಬೆಟಾಇನ್ಫೋ ತಿಳಿಸಿದೆ.

ಈ ತಿಂಗಳಾರಂಭದಲ್ಲಿ 1,024 ಬಳಕೆದಾರರರನ್ನು ಗ್ರೂಪ್​ಗೆ ಸೇರಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಹೊಸ ವೈಶಿಷ್ಠ ಎಲ್ಲರಿಗೂ ಪ್ರಯೋಜನಕಾರಿ. ಗ್ರೂಪ್​ ಚಾಟ್​ಗಳ ನೋಟಿಫಿಕೇಷನ್​ ಇಷ್ಟ ಇಲ್ಲದವರಿಗೆ ಇದರ ಕಿರಿಕಿರಿ ತಪ್ಪಲಿದೆ ಎಂದು ಮೆಟಾ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ತಿಳಿಸಿದ್ದರು.

ಆ್ಯಂಡ್ರಾಯ್ಡ್​​ ಬಳಕೆದಾರರು ಕೂಡ ಇದೇ ವೈಶಿಷ್ಟ್ಯವನ್ನು ಪಡೆಯಲಿದ್ದಾರೆ. ಎರಡು ವಾರಗಳ ಕಾಲ ಅವರು ತಮ್ಮ ದೊಡ್ಡ ಗುಂಪಿನ ನೋಟಿಫಿಕೇಷನ್​ ಡಿಸೆಬಲ್​ ಸೌಲಭ್ಯ ಪಡೆಯಲಿದ್ದಾರೆ.

ಇದರ ಮಧ್ಯೆ, ಬಳಕೆದಾರರು ತಮ್ಮ ಡೆಸ್ಕ್​ಟಾಪ್​ನಲ್ಲಿ ಗ್ರೂಪ್​ ಚಾಟ್​ಗಳ ಬಳಕೆದಾರರ ಪ್ರೊಫೈಲ್​ ಫೋಟೋಗಳನ್ನು ನೋಡುವ ಅವಕಾಶವನ್ನು ವಾಟ್ಸಾಪ್​ ನೀಡಿದೆ. ಇದರಿಂದಾಗಿ ತಮ್ಮ ಸಂಪರ್ಕದಲ್ಲಿ ಇಲ್ಲದ ಸದಸ್ಯರ ಫೋಟೋಗಳನ್ನು ಗ್ರೂಪ್​ ಚಾಟ್​ಗಳಲ್ಲಿ ಬಳಕೆದಾರರು ನೋಡಬಹುದಾಗಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​​ ವಿಂಡೋ ಬೆಟಾದಲ್ಲೂ ಶೇರ್​ ಮಾಡಬಹುದು ಕಾಂಟಾಕ್ಟ್​ ಕಾರ್ಡ್​

ABOUT THE AUTHOR

...view details