ನವದೆಹಲಿ: ವಿಶ್ವದ ಪ್ರಖ್ಯಾತ ಚಿಪ್ ತಯಾರಕ ಕಂಪನಿ AMD ಸೋಮವಾರ ಭಾರತದಲ್ಲಿ ಮೊಬೈಲ್‌ಗಾಗಿ ಹೊಸ Ryzen 7020 ಮತ್ತು Athlon 7020 ಸರಣಿ ಪ್ರೊಸೆಸರ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಇವನ್ನು ಕಡಿಮೆ ವೆಚ್ಚದ ಮತ್ತು ಕಡಿಮೆ ಶಕ್ತಿ ಬಳಸುವ ದೈನಂದಿನ ಲ್ಯಾಪ್‌ಟಾಪ್ ಸಾಧನಗಳಿಗೆ ಶಕ್ತಿಯನ್ನು ನೀಡುವಂತೆ ತಯಾರಿಸಲಾಗಿದೆ. ಮೊಬೈಲ್‌ಗಳಲ್ಲಿ ರೈಜೆನ್ ಮತ್ತು ಅಥ್ಲಾನ್ 7020 ಸರಣಿಯ ಪ್ರೊಸೆಸರ್‌ಗಳು ಅತ್ಯುತ್ತಮ ದೈನಂದಿನ ಕಾರ್ಯಕ್ಷಮತೆಯನ್ನು ಮತ್ತು 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ. ಹೀಗಾಗಿ ಬಳಕೆದಾರರು ತಮ್ಮ ಲ್ಯಾಪ್‌ಟಾಪ್‌ಗಳನ್ನು ಮತ್ತೂ ಹೆಚ್ಚಿನ ಕೆಲಸಗಳಿಗಾಗಿ ಮತ್ತು ಅವಧಿಗಾಗಿ ಬಳಸಬಹುದು ಎಂದು ಕಂಪನಿ ಹೇಳಿದೆ.
2023 ರಲ್ಲಿ ನಮ್ಮ OEM ಗಳ ಸಹಭಾಗಿತ್ವದಲ್ಲಿ, AMD ವರ್ಕ್, ಗೇಮಿಂಗ್ ಮತ್ತು ಸಂಪರ್ಕಕ್ಕಾಗಿ ಸುಧಾರಿತ ದಕ್ಷತೆಯನ್ನು ಒದಗಿಸಲು 6nm 'Zen 2' ವರ್ಧಿತ ಆರ್ಕಿಟೆಕ್ಚರ್ ಅನ್ನು ಆಧರಿಸಿ ಹೆಚ್ಚಿನ ಕಾರ್ಯಕ್ಷಮತೆ, ಕೈಗೆಟುಕುವ ಲ್ಯಾಪ್‌ಟಾಪ್‌ಗಳನ್ನು ತಯಾರಿಸಿದೆ ಎಂದು AMD ಇಂಡಿಯಾ ಮಾರಾಟ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಸಿನ್ಹಾ ತಿಳಿಸಿದ್ದಾರೆ. ಅಲ್ಲದೆ TSMC ಯ (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) ಸುಧಾರಿತ 6nm ಉತ್ಪಾದನಾ ತಂತ್ರಜ್ಞಾನದಲ್ಲಿ ಇವುಗಳನ್ನು ನಿರ್ಮಿಸಲಾಗಿರುವುದರಿಂದ, ಇವು ಮೊಬೈಲ್‌ಗಾಗಿ ವೇಗ, ಶೈಲಿ ಮತ್ತು ಸಹಿಷ್ಣುತೆಯ ಪರಿಪೂರ್ಣ ಸಮತೋಲನ ನೀಡುತ್ತದೆ. ಸ್ಮಾರ್ಟ್ ಬ್ಯಾಟರಿ ನಿರ್ವಹಣೆ ಮತ್ತು ಮೀಸಲಾದ ವಿಡಿಯೋ ಮತ್ತು ಆಡಿಯೊ ಪ್ಲೇಬ್ಯಾಕ್ ಹಾರ್ಡ್‌ವೇರ್‌ನೊಂದಿಗೆ, ಹೊಸ ಪ್ರೊಸೆಸರ್‌ಗಳನ್ನು ಒಳಗೊಂಡಿರುವ ವ್ಯವಸ್ಥೆಗಳು ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಸಹಯೋಗ, ಕಚೇರಿ ಉತ್ಪಾದಕತೆ ಮತ್ತು ಮಲ್ಟಿಟಾಸ್ಕಿಂಗ್ಗೆ ಸೂಕ್ತವಾಗಿವೆ.
ಇದಲ್ಲದೇ, ಹೊಸ ಪ್ರೊಸೆಸರ್‌ಗಳನ್ನು ಒಳಗೊಂಡಿರುವ ಸಿಸ್ಟಮ್‌ಗಳು ವಿಂಡೋಸ್ 11 ರೆಡಿ ಆಗಿವೆ ಮತ್ತು Windows 11 ಭದ್ರತಾ ವೈಶಿಷ್ಟ್ಯಗಳ ಸಂಪೂರ್ಣ ಬೆಂಬಲಕ್ಕಾಗಿ ಮೈಕ್ರೋಸಾಫ್ಟ್ Pluton ಸೆಕ್ಯೂರಿಟಿ ಪ್ರೊಸೆಸರ್ ಅನ್ನು ಒಳಗೊಂಡಿವೆ. ಹೊಸ ಪ್ರೊಸೆಸರ್‌ಗಳು ಆಧುನಿಕ ಪ್ಲಾಟ್‌ಫಾರ್ಮ್ ಮತ್ತು ಆಧುನಿಕ ಸ್ಟ್ಯಾಂಡ್‌ಬೈ, ವೇಕ್-ಆನ್-ವಾಯ್ಸ್ ಮತ್ತು ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಸುಧಾರಿತ ತಂತ್ರಜ್ಞಾನ ಬೆಂಬಲವನ್ನು ಹೊಂದಿವೆ.