ಬೆಂಗಳೂರು: ಬಳಕೆದಾರರಿಗೆ ಮತ್ತಷ್ಟು ಉತ್ತಮ ಮನರಂಜನೆಯ ಅನುಭವ ನೀಡುವ ನಿಟ್ಟಿನಲ್ಲಿ ಅಮೆಜಾನ್ ಕಂಪನಿ ಭಾರತದಲ್ಲಿ ತನ್ನ ಥರ್ಡ್ ಜನರೇಶನ್ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ಫೈರ್ ಟಿವಿ ಕ್ಯೂಬ್ (Fire TV Cube) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಸದ್ಯ 13,999 ರೂಪಾಯಿ ಆಗಿದೆ. ಹೊಸ ಡಿವೈಸ್ ನ್ಯೂ ಆಕ್ಟಾ-ಕೋರ್ 2.0 GHz ಪ್ರೊಸೆಸರ್ ಹೊಂದಿದ್ದು, ಸಿನೆಮ್ಯಾಟಿಕ್ 4K ಅಲ್ಟ್ರಾ HD, ಡಾಲ್ಬಿ ವಿಷನ್, HDR, ಇಮ್ಮರ್ಸಿವ್ ಡಾಲ್ಬಿ ಅಟ್ಮಾಸ್ ಆಡಿಯೊಗಳನ್ನು ಸಪೋರ್ಟ್ ಮಾಡುತ್ತದೆ. ಇದು Wi-Fi 6 ಕಂಪ್ಯಾಟಿಬಲ್ ಆಗಿದೆ.
ಹೊಚ್ಚ ಹೊಸ ತಂತ್ರಜ್ಞಾನದ ಫೈರ್ ಟಿವಿ ಕ್ಯೂಬ್ ನೊಂದಿಗೆ ಗ್ರಾಹಕರು ತಮ್ಮ ಮನೆಯಲ್ಲಿ ಉತ್ತಮ ಮನರಂಜನೆಯ ಆನಂದವನ್ನು ಪಡೆಯಬಹುದು. ಸಿನೆಮ್ಯಾಟಿಕ್ 4K ಸಪೋರ್ಟ್ ಮಾಡುವ ಇದು, ಹೋಮ್ ಎಂಟರ್ಟೇನ್ಮೆಂಟ್ ಸಿಸ್ಟಂಗಳನ್ನು ಹ್ಯಾಂಡ್ಸ್ ಫ್ರೀ ಮೋಡ್ನಲ್ಲಿ ಕಂಟ್ರೋಲ್ ಮಾಡಲು ಅಲೆಕ್ಸಾವನ್ನು ಸಹ ಸಪೋರ್ಟ್ ಮಾಡುತ್ತದೆ ಎಂದು ಅಮೆಜಾನ್ ಡಿವೈಸಸ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಮತ್ತು ಡೈರೆಕ್ಟರ್ ಪರಾಗ್ ಗುಪ್ತಾ ಹೇಳಿದರು.