ನವದೆಹಲಿ: ಇದೀಗ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಜಗತ್ತನ್ನು ಆಳಲು ಹೊರಟಿದೆ. ಈಗಾಗಲೇ ಈ ಕೃತಕ ಬುದ್ದಿಮತ್ತೆಗೆ ಸೋತಿರುವ ಅನೇಕ ಕಂಪನಿಗಳು ಅದನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇದೀಗ ಈ ಸರದಿಗೆ ಅಮೆಜಾನ್ ಸೇರಿದೆ. ವೇಗವಾಗಿ ಬೆಳೆಯುತ್ತಿರುವ ಎಐ ಮಾರುಕಟ್ಟೆಯನ್ನು ಅಮೆಜಾನ್ ಪ್ರವೇಶಿಸಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್ ಅಪ್‌ಗಳಿಗೆ ಸಹಾಯ ಮಾಡಲು ಎಐ ಬಳಕೆ ಪ್ರಾರಂಭಿಸಿದೆ.
ಅಮೆಜಾನ್ ವೆಬ್ ಸೇವೆಗಳು (ಎಡಬ್ಲ್ಯೂಎಸ್) ಜನರೇಟಿವ್ ಎಐ ವೇಗವರ್ಧಕ 10 ಜನರೇಟಿವ್ ಎಐ ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲು ಮುಂದಾಗಿದೆ ಎಂದು ತಿಳಿಸಿದೆ. ಇದು ಜಾಗತಿಕ ಕಾರ್ಯಕ್ರಮವಾಗಿದ್ದು ಅದು ಆರಂಭಿಕ ಹಂತವನ್ನು ಪ್ರದರ್ಶಿಸುತ್ತದೆ. ಆಯ್ದ ಸ್ಟಾರ್ಟ್‌ಅಪ್‌ಗಳು ತಮ್ಮ ಎಐ ಸೇವೆಗಳು ಮತ್ತು ಪರಿಹಾರಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಎಡಬ್ಲ್ಯೂಎಸ್ ಕ್ರೆಡಿಟ್‌ಗಳಲ್ಲಿ 3,00,000 ಡಾಲರ್ವರೆಗೆ ಪಡೆಯುತ್ತವೆ.
ಯಾರು ಅರ್ಜಿ ಸಲ್ಲಿಸಬಹುದು: ಆಯ್ಕೆ ಮಾಡಿದ 10 ಸ್ಟಾರ್ಟ್ ಅಪ್ಗಳಲ್ಲಿ ಎರಡು ವಾರದಲ್ಲಿ ಈ ಅಪ್ಲಿಕೇಷನ್ ತೆರೆಯಲಿದೆ ಎಂದು ಕಂಪನಿ ತಿಳಿಸಿದೆ. ಈಗಾಗಲೇ ಅಭಿವೃದ್ಧಿಪಡಿಸಿದ ಕನಿಷ್ಠ ಕಾರ್ಯಸಾಧ್ಯವಾದ ಉತ್ಪನ್ನವನ್ನು (ಎಂವಿಪಿ) ಹೊಂದಬಹುದು. ಈಗಾಗಲೇ ಆರಂಭಿಕ ಹಂತದ ಹೂಡಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಮುಂದಿನ 18 ತಿಂಗಳ ಕಾಲ ಯೋಜನೆ ಮಾಡಲಾಗುವುದು ಎಂದು ಅಮೆಜಾನ್ ತಿಳಿಸಿದೆ. ನಾವು ಮಷಿನ್ ಲರ್ನಿಂಗ್ ಜೊತೆಗೆ ತಾಂತ್ರಿಕ ಕಲಿಕೆ ಲೀಡ್ಗಳನ್ನು ನಾವು ಸ್ವಾಗತಿಸುತ್ತೇವೆ.
ಇದು ತಂತ್ರಜ್ಞಾನ ಅಥವಾ ಯೋಜನೆಯನ್ನು ಹೊಂದಿರುತ್ತದೆ. ಜನರೇಟಿವ್ ಎಐ ಜಾಗದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದರೆ ನಾವು ಬೆಂಬಲಿಸುತ್ತೇವೆ. ಎಡಬ್ಲ್ಯೂಎಸ್ ಫೌಂಡೇಶನಲ್ ಮಾಡೆಲ್ ಪೂರೈಕೆದಾರರಿಂದ ಗ್ರಾಹಕ ಅಪ್ಲಿಕೇಶನ್‌ಗಳವರೆಗೆ ಸಂಪೂರ್ಣ ಜನರೇಟಿವ್ ಎಐ ಸ್ಟಾಕ್ ಅನ್ನು ಬೆಂಬಲಿಸುತ್ತದೆ. ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯು ಎಐನಲ್ಲಿ ನಾವೀನ್ಯತೆಗಾಗಿ ವೇಗವರ್ಧಕವಾಗಿದೆ. ವಿಶ್ವದ ಉನ್ನತ ಜನರೇಟಿವ್ ಎಐ ಕಂಪನಿಗಳಿಗೆ ಬೆಂಬಲದ ಮತ್ತೊಂದು ಮಾರ್ಗವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.
ಈ ಕಾರ್ಯಕ್ರಮವು ಮೇ 24-25ರಿಂದ ಸ್ಯಾನ್ ಪ್ರಾನ್ಸಿಸ್ಕೊ ಪ್ರದೇಶದಲ್ಲಿ ಚಾಲನೆ ಪಡೆಯಲಿದೆ ಎಂದು ಕಂಪನಿ ತಿಳಿಸಿದೆ. ಇದರ ಡೆಮೊ ದಿನವನ್ನು ಜು 16 ಮತ್ತು 27ಕ್ಕೆ ನಿಗದಿ ಮಾಡಿದ್ದು, ಇಲ್ಲಿ ಎಐ ಸಾಮರ್ಥ್ಯದ, ಪ್ರಕ್ರಿಯೆ ಪ್ರದರ್ಶಿಸಲಾಗುವುದು. 10 ವಾರದ ಕಾರ್ಯಕ್ರಮ ಮುಕ್ತಾಯದ ಬಳಿಕ, ಹೂಡಿಕೆದಾರರು, ಪತ್ರಿಕೆ ಮತ್ತು ಗ್ರಾಹಕರು ಸೇರಿದಂತೆ ಜನರೇಟಿವ್ ಎಐ ಕಮ್ಯೂನಿಟಿಯನ್ನು ಆಯ್ಕೆ ಮಾಡಿ ಅದರ ಕುರಿತು ಜಾಗೃತಿ ಮೂಡಿಸಬಹುದು ಎಂದು ಅಮೆಜಾನ್ ತಿಳಿಸಿದೆ. ಜನರೇಟಿವ್ ಎಐ ಮಾರ್ಕೆಟ್ ಪ್ರಸ್ತುತ ಮೈಕ್ರೋಸಾಫ್ಟ್ ಮಾಲೀಕತ್ವದ ಚಾಟ್ಜಿಪಿಟಿ ಒಪನ್ಐ ಹಕ್ಕನ್ನು ಹೊಂದಿದೆ. ಇನ್ನು ಇದರ ಪ್ರತಿಸ್ಪರ್ಧಿಯಾಗಿರುವ ಗೂಗಲ್, ಬಾರ್ಡ್ ಎಂಬ ತನ್ನ ಎಐ ಸೇವೆ ನೀಡಲು ಮುಂದಾಗಿದೆ.
ಜನರೇಟಿವ್ ಎಐ ವೇಗವರ್ಧಕವು ಚೀನಾ, ಕ್ಯೂಬಾ, ಇರಾನ್, ಉತ್ತರ ಕೊರಿಯಾ, ರಷ್ಯಾ ಅಥವಾ ಸಿರಿಯಾದಲ್ಲಿರುವ ಸ್ಟಾರ್ಟ್ ಅಪ್‌ಗಳನ್ನು ಹೊರತುಪಡಿಸಿ ಜಾಗತಿಕವಾಗಿ ಸ್ಟಾರ್ಟ್ ಅಪ್‌ಗಳಿಗೆ ಮುಕ್ತ ಅವಕಾಶ ನೀಡಿದ್ದು, ಅವರು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಗೌಪ್ಯತೆ ಅಪಾಯ; OpenAIಗೆ ಭಾರೀ ದಂಡದ ಎಚ್ಚರಿಗೆ ನೀಡಿದ ಇಟಲಿ