ಕರ್ನಾಟಕ

karnataka

ETV Bharat / science-and-technology

ಅಗರ್​ವಾಲ್​ ಬೆಂಕಿ ಉಸಿರಾಡುವ ಡ್ರ್ಯಾಗನ್​ ಅಲ್ಲ; ಮಾಜಿ ಸಿಇಒ ವಜಾದ ಕುರಿತು ಮಸ್ಕ್​ ಮಾತು - ಟ್ವಿಟರ್​ ಮಾಜಿ ಸಿಇಒ ಪರಾಗ್​ ಅಗರವಾಲ್

ಟ್ವಿಟರ್​ ಖರೀದಿ ಬಳಿಕ ಆಗಿನ ಸಮಯದಲ್ಲಿ ಸಿಇಒ ಆಗಿದ್ದ ಭಾರತ ಮೂಲದ ಪರಾಗ್​ ಅಗರ್​ವಾಲ್​ ಅವರನ್ನು ಮಸ್ಕ್​ ಉದ್ಯೋಗದಿಂದ ವಜಾ ಮಾಡಿದ್ದರು.

Agarwal was not a fire-breathing dragon said by musk
Agarwal was not a fire-breathing dragon said by musk

By ETV Bharat Karnataka Team

Published : Sep 7, 2023, 2:49 PM IST

ನವದೆಹಲಿ: ಟ್ವಿಟರ್​ ಖರೀದಿ ಬಳಿಕವೇ ಉದ್ಯೋಗ ವಜಾ ಆರಂಭಿಸಿದ್ದ ಎಲಾನ್​ ಮಸ್ಕ್,​ ಟ್ವಿಟರ್​ ಮಾಜಿ ಸಿಇಒ ಪರಾಗ್​ ಅಗರವಾಲ್​ ಅವರನ್ನು ಕೂಡ ಉದ್ಯೋಗದಿಂದ ವಜಾಗೊಳಿಸಿದ್ದರು. ಪರಾಗ್​ ಅವರನ್ನು ಸಂಸ್ಥೆಯಿಂದ ಕಿತ್ತು ಹಾಕಿರುವ ಕುರಿತು ತಿಳಿಸಿರುವ ಮಸ್ಕ್​, ಪರಾಗ್​​ ಬೆಂಕಿ ಉಸಿರಾಡುವ ಡ್ರ್ಯಾಗನ್​ ಅಲ್ಲ ಎಂದಿದ್ದಾರೆ. ಅದರರ್ಥ ನಮ್ಮ ನಿರೀಕ್ಷೆ ಮೀರಿದ ಉತ್ಸಾಹಿತನ ತೋರಿಲ್ಲ. ನಮ್ಮ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಲು ಬಯಸಿತ್ತು ಎಂದು ಸಮಾಜಾಯಿಷಿ ನೀಡಿದ್ದಾರೆ.

ವಿಶ್ವದ ಬಿಲೇನಿಯರ್​, ಪ್ರೈವೇಟ್​ ಸ್ಪೇಸ್​ ಅವಿಷ್ಕಕನಾಗಿರುವ ಎಲೋನ್​ ಮಸ್ಕ್​ ಕುರಿತು ಅಮೆರಿಕದ ಲೇಖಕ ಮತ್ತು ಪತ್ರಕರ್ತನೂ ಆಗಿರುವ ವಾಲ್ಟರ್​​ ಇಸ್ಸಕ್ಸೊನ್​ ಬರೆದ ಪುಸ್ತಕದಲ್ಲಿ ಪರಾಗ್​ ಉದ್ಯೋಗ ವಜಾದ ಕುರಿತು ಕೂಡ ಉಲ್ಲೇಖಿಸಲಾಗಿದೆ ಪತ್ರಕರ್ತ ಉಲ್ಲೇಖಿಸಿರುವಂತೆ,​​ ಅಗರ್​ವಾಲ್​ ಕುರಿತು ಮಸ್ಕ್​​ ತಮ್ಮದೇ ಆದ ಒಂದು ಅಭಿಪ್ರಾಯವನ್ನು ಹೊಂದಿದ್ದರು. ಅಗರವಾಲ್​ ಒಳ್ಳೆಯ ವ್ಯಕ್ತಿ. ಆದರೆ, ಮ್ಯಾನೇಜರ್​ಗಳು ಗುರಿ ಕೇವಲ ಇಷ್ಟವಾಗುವ ಗುಣ ಹೊಂದಿರುವುದಲ್ಲ. ಟ್ವಿಟರ್​​ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್​ ಬೇಕಾಗಿತ್ತು. ಪರಾಗ್​ ಆ ರೀತಿ ಇರಲಿಲ್ಲ ಎಂದು ಹೇಳಿದ್ದರು ಎಂದು ಲೇಖಕರು ಪುಸ್ತಕದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್​ನಲ್ಲಿ 44 ಬಿಲಿಯನ್​ ಡಾಲರ್​​ಗೆ ಟ್ವಿಟರ್​ ಖರೀದಿಸಿದ ಮಸ್ಕ್​, ಹಿಂದಿನ ಟ್ವಿಟರ್​ ಮಾಲೀಕ ಜಾರ್ಕ್​ ಡೋರ್ಸೆ ನೇಮಿಸಿದ್ದ ಅಗರ್​​ವಾಲ್​ ಮತ್ತು ಮಾಜಿ ಕಾನೂನು ಮತ್ತು ಸಾರ್ವಜನಿಕ ನಿಯಮದ ಮುಖ್ಯಸ್ಥ ವಿಜಯ್​​ ಗಡ್ಡೆ ಅವರನ್ನು ಉದ್ಯೋಗದಿಂದ ವಜಾ ಮಾಡಿದ್ದರು. ಈ ಇಬ್ಬರು ಕಾರ್ಯನಿರ್ವಹಣಾಧಿಕಾರಿಗಳು ಭಾರಿ ನಿರ್ಗಮನ ಪ್ಯಾಕೇಜ್​ಗಳೊಂದಿಗೆ ಕಂಪನಿಯನ್ನು ತೊರೆದಿದ್ದರು.

ಅಗರ್​ವಾಲ್​ ಅಕ್ಟೋಬರ್​ 6, 2022ರವರೆಗೆ ಟ್ವಿಟರ್​ನಲ್ಲಿ ಸಕ್ರಿಯವಾಗಿದ್ದರು. 6 ಲಕ್ಷದ 19 ಸಾವಿರ ಫಾಲೋವರ್ಸ್​ಗಳನ್ನ ಇವರು ಹೊಂದಿದ್ದರು. ಟ್ವಿಟರ್​ ತೊರೆದ ಬಳಿಕ ಅವರು ಈ ಮೈಕ್ರೋಬ್ಲಾಗಿಂಗ್​ ತಾಣ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಕ್ರಿಯರಾಗಿಲ್ಲ. ಸಂಸ್ಥೆ ಖರೀದಿ ಆರಂಭದಲ್ಲಿ ನಕಲಿ ಖಾತೆಗಳ ಕುರಿತು ಆಗಿ ಪರಾಗ್​ ಮತ್ತು ಮಸ್ಕ್​ ವಿರುದ್ಧ ಟ್ವೀಟ್​ ವಾರ್​ ಕೂಡ ನಡೆದಿತ್ತು.

ಇನ್ನು ಪರಾಗ್​ ಟ್ವಿಟರ್​​ ಸಿಇಒ ಆಗಿ ನೇಮಕ ಕುರಿತು ಕಳೆದ ಜುಲೈನಲ್ಲಿ ಮಾತನಾಡಿದ್ದ ಎಂಜೆಲ್​ ಇನ್ವೆಸ್ಟರ್​​ ಅಲೆಕ್ಸ್​ ಕೊಹೆನ್​, ಸಂಸ್ಥೆಗೆ ಸೇರಿ 11 ತಿಂಗಳಿಗೆ 60 ಮಿಲಿನಯ್​ ಡಾಲರ್​ ವೇತನದೊಂದಿಗೆ ಪರಾಗ್​​ ಹೇಗೆ ಸಿಇಒ ಆದರೂ ಎಂದು ನಂಬಲು ಆಗುತ್ತಿಲ್ಲ. ಇದೀಗ ಅವರು ಹಿಂದೆ ಕುಳಿತು ತಮ್ಮ ಅದ್ಬುತ ನಾಟಕವನ್ನು ಸಂಭ್ರಮಿಸುತ್ತಿದ್ದಾರೆ ಎಂದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಟ್ವಿಟರ್​ ಸಿಇಒ ಸ್ಥಾನದಿಂದ ಅಗರ್​​ವಾಲ್​ ವಜಾ.. ಅಧಿಕೃತವಾಗಿ ಟ್ವಿಟರ್​​​​​​​​​ ಆಡಳಿತ ಕೈಗೆ ತೆಗೆದುಕೊಂಡ ಮಸ್ಕ್​!

ABOUT THE AUTHOR

...view details