ಟ್ವಿಟರ್‌ನ ಹೊಸ ಸಿಇಒ ಆಗಿ ಇಂದಿನಿಂದ ಲಿಂಡಾ ಯಾಕರಿನೊ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಟ್ವಿಟರ್ ಖರೀದಿ ಬಳಿಕ ಟೆಸ್ಲಾ ಮತ್ತು ಸ್ಪೆಸ್ಎಕ್ಸ್ ಮಾಲೀಕರಾದ ಎಲೋನ್ ಮಸ್ಕ್ಗೆ ಇದರ ಸಿಇಒ ಆಗಿ ಮುಂದುವರೆದಿದ್ದರು. ಆದರೆ, ಟೆಸ್ಲಾ ಮತ್ತು ಸ್ಪೆಸ್ಎಕ್ಸ್ ಕಡೆ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ತಾವು ಸಿಇಒ ಆಗಿ ಮುಂದುವರೆಯುವುದಿಲ್ಲ ಎಂಬುದುನ್ನು ಅವರು ಕೆಲವು ತಿಂಗಳ ಹಿಂದೆ ಬಹಿರಂಗಪಡಿಸಿದ್ದರು. ಇದಾದ ಬಳಿಕ ಮುಂದಿನ ಆರು ವಾರಗಳಲ್ಲಿ ಮಹಿಳಾ ಉದ್ಯಮಿಯೊಬ್ಬರು ಈ ಸಿಇಒ ಸ್ಥಾನ ಸ್ವೀಕರಿಸಲಿದ್ದಾರೆ ಎಂದು ಮಸ್ಕ್ ಘೋಷಿಸಿದ್ದರು. ಕಳೆದ ತಿಂಗಳು, ಲಿಂಡಾ ಒಂದೆರಡು ವಾರಗಳಲ್ಲಿ ಟ್ವಿಟರ್‌ನ ಹೊಸ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಲಾಗಿತ್ತು.
ಅದರಂತೆ ಅವರು ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಬೆನ್ನಿಗೆ ತಮ್ಮ ಪ್ರಮುಖ ಸಹಚರನನ್ನು ಟ್ವಿಟರ್ಗೆ ನೇಮಿಸಿಕೊಂಡಿದ್ದಾರೆ ಈ ಕುರಿತು ಲಿಂಡಾ ಕೂಡ ತಮ್ಮ ಟ್ವಿಟರ್ ಜಾಲತಾಣದಲ್ಲಿ ತಿಳಿಸಿದ್ದಾರೆ. ಎನ್‌ಬಿಸಿ ಯೂನಿವರ್ಸಲ್‌ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಜೋ ಬೆನಾರೊಕ್ ಅವರನ್ನು ಸಹ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಲಿಂಡಾ ಕೂಡ ಎನ್‌ಬಿಸಿ ಯೂನಿವರ್ಸಲ್‌ನಲ್ಲಿ ಗ್ಲೋಬಲ್ ಅಡ್ವರ್ಟೈಸಿಂಗ್ ಮತ್ತು ಪಾಲುದಾರಿಕೆಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಬೆನಾರೊಕ್ ಲಿಂಡಾಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದಾರೆ. ಇನ್ನು ಟ್ವಿಟರ್ನಲ್ಲಿ ತಮ್ಮ ಹುದ್ದೆ ಕುರಿತು ಮಾತನಾಡಿರುವ ಅವರು, ಟ್ವಿಟರ್ನಲ್ಲಿ ವಿಭಿನ್ನ ವೃತ್ತಿಪರ ಸಾಹಸವನ್ನು ಪ್ರಾರಂಭಿಸಲು ಸಜ್ಜಾಗಿದ್ದೇನೆ. ವ್ಯಾಪಾರ ಕಾರ್ಯಾಚರಣೆಗಳ ಮೇಲೆ ತಮ್ಮ ಪಾತ್ರ ನಿರ್ವಹಣೆ ನಡೆಸುವುದಾಗಿ ಅವರು ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ತಿಳಿಸಿದ್ದಾರೆ.