ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ಆ್ಯಪ್ನಲ್ಲೂ ಇನ್ನು ಮುಂದೆ ಜಾಹೀರಾತುಗಳು ಕಾಣಿಸುವ ಸಾಧ್ಯತೆಗಳಿವೆ. ಸ್ಟೋರೀಸ್ ಮತ್ತು ಚಾನೆಲ್ಗಳಲ್ಲಿ ಜಾಹೀರಾತುಗಳು ಕಾಣಿಸಬಹುದು, ಆದರೆ ಮೇನ್ ಬಾಕ್ಸ್ನಲ್ಲಿ ಯಾವುದೇ ಜಾಹೀರಾತು ತೋರಿಸುವುದಿಲ್ಲ ಎಂದು ವಾಟ್ಸ್ಆ್ಯಪ್ ಮುಖ್ಯಸ್ಥ ವಿಲ್ ಕ್ಯಾಥ್ಕಾರ್ಟ್ ಹೇಳಿದ್ದಾರೆ. ಬ್ರೆಜಿಲ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿಲ್ ಕ್ಯಾಥ್ಕಾರ್ಟ್, ಕಂಪನಿಯು ನಿಮ್ಮ ಮುಖ್ಯ ಚಾಟ್ನಲ್ಲಿ ಯಾವುದೇ ಜಾಹೀರಾತುಗಳನ್ನು ತೋರಿಸಲು ಯೋಜಿಸುತ್ತಿಲ್ಲ, ಆದರೆ ಇತರ ಸ್ಥಳಗಳಲ್ಲಿ ಜಾಹೀರಾತುಗಳನ್ನು ತೋರಿಸಬಹುದು ಎಂದು ಹೇಳಿದ್ದಾರೆ.
ಕಂಪನಿಯು ಪ್ರಸ್ತುತ ಯಾವುದೇ ದೇಶದಲ್ಲಿ ಸ್ಟೇಟಸ್ ಜಾಹೀರಾತು ವೈಶಿಷ್ಟ್ಯವನ್ನು ಟೆಸ್ಟ್ ಮಾಡುತ್ತಿಲ್ಲ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ. ಮಾರ್ಕ್ ಜುಕರ್ಬರ್ಗ್ ನೇತೃತ್ವದ ಕಂಪನಿಯಾಗಿರುವ ವಾಟ್ಸ್ಆ್ಯಪ್ ತನ್ನಲ್ಲಿ ಜಾಹೀರಾತು ತೋರಿಸುವ ವರದಿಗಳನ್ನು ಸೆಪ್ಟೆಂಬರ್ನಲ್ಲಿ ನಿರಾಕರಿಸಿತ್ತು. ವಾಟ್ಸ್ಆ್ಯಪ್ ಜಾಗತಿಕವಾಗಿ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಭಾರತದಲ್ಲೇ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿದ್ದಾರೆ.
ವಾಟ್ಸ್ಆ್ಯಪ್ ಈ ಹಿಂದೆ ಸ್ಟೇಟಸ್ನಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವ ವೈಶಿಷ್ಟ್ಯವನ್ನು ಸಿದ್ಧಪಡಿಸಿತ್ತು. ಆದರೆ ಅದನ್ನು ಜಾರಿ ಮಾಡಲಿಲ್ಲ. ಈಗ ಕೊನೆಗೂ ವಾಟ್ಸ್ಆ್ಯಪ್ ಮುಖ್ಯಸ್ಥರೇ ಇದರ ಬಗ್ಗೆ ಮಾತನಾಡಿರುವುದರಿಂದ ಜಾಹೀರಾತುಗಳು ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ. ಫೇಸ್ಬುಕ್ ಸಂಸ್ಥಾಪಕ ಜುಕರ್ಬರ್ಗ್ 2014 ರಲ್ಲಿ ವಾಟ್ಸ್ಆ್ಯಪ್ ಅನ್ನು 19 ಬಿಲಿಯನ್ ಡಾಲರ್ಗೆ ಖರೀದಿಸಿದ್ದರು.