ವಾಟ್ಸ್ಆ್ಯಪ್ ವಿಶ್ವದಲ್ಲಿಯೇ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಆ್ಯಪ್ ಆಗಿದೆ. ಈ ತಂತ್ರಾಂಶದಲ್ಲಿ ಹಲವಾರು ಬದಲಾವಣೆಗಳನ್ನು ತಂದು ಬಳಕೆದಾರರ ಸ್ನೇಹಿಯನ್ನಾಗಿ ಮಾಡಲಾಗುತ್ತಿರುತ್ತದೆ. ಅದೇ ರೀತಿ ಈಗ ಮತ್ತೆರಡು ಹೊಸ ಫೀಚರ್ಸ್ಅನ್ನು ಪರಿಚಯಿಸಲಾಗಿದೆ. ಪ್ರಸ್ತುತ ಈ ಹೊಸ ಫೀಚರ್ಸ್ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಿಗಲಿದೆ ಎಂದು ಕಂಪನಿ ತಿಳಿಸಿದೆ.
WhatsApp Voice Message Pause and play: ವಾಟ್ಸ್ಆ್ಯಪ್ ಪರಿಚಯಿಸಿರುವ ಹೊಸ ಬದಲಾವಣೆ ಧ್ವನಿ ಸಂದೇಶ ವಿರಾಮ. ಅಂದರೆ ನಾವು ಯಾರಿಗಾದರೂ ಧ್ವನಿ ಸಂದೇಶವನ್ನು(ವಾಯ್ಸ್ ಮೆಸೇಜ್) ಕಳುಹಿಸುವಾಗ ಅದನ್ನು ತಡೆ ಹಿಡಿದು ಮತ್ತೆ ಪ್ಲೇ ಮಾಡಿ ಅದೇ ಸಂದೇಶಕ್ಕೆ ಇನ್ನಷ್ಟು ಮಾಹಿತಿಯನ್ನು ಸೇರಿಸಬಹುದು.
ತಾತ್ಕಾಲಿಕ ನಿಲುಗಡೆ ಮತ್ತು ಮರು ಆರಂಭ(pause and play) ಮಾಡುವ ಅವಕಾಶವನ್ನು ವಾಟ್ಸ್ಆ್ಯಪ್ನಲ್ಲಿ ಅಳವಡಿಸಲಾಗಿದೆ. ಇದಕ್ಕಾಗಿ ರೆಕಾರ್ಡಿಂಗ್ ಬಟನ್ ಅನ್ನು ಸ್ವೈಪ್ ಮಾಡಬೇಕಾಗುತ್ತದೆ. ಇದು ಈಗಾಗಲೇ ಆ್ಯಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಲಭ್ಯವಿದೆ.