ಕರ್ನಾಟಕ

karnataka

ETV Bharat / science-and-technology

OPPO: ಭವಿಷ್ಯದ ಪೀಳಿಗೆಯ ಅಂಡರ್-ಸ್ಕ್ರೀನ್ ಕ್ಯಾಮರಾ ಅನಾವರಣ - ಒಪ್ಪೋ ಅಂಡರ್-ಸ್ಕ್ರೀನ್ ಕ್ಯಾಮೆರಾ

ಜಾಗತಿಕ ಸ್ಮಾರ್ಟ್​ಫೋನ್​ ಬ್ರ್ಯಾಂಡ್ OPPO ತನ್ನ ಬಳಕೆದಾರರಿಗೆ ಫುಲ್​​-ಸ್ಕ್ರೀನ್​ ಅನುಭವ ನೀಡುವ ಉದ್ದೇಶದಿಂದ, ತನ್ನ ಮುಂದಿನ ಪೀಳಿಗೆಯ ಅಂಡರ್-ಸ್ಕ್ರೀನ್ ಕ್ಯಾಮರಾ (USC) ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ಹೊಸ ಅಂಡರ್-ಸ್ಕ್ರೀನ್ ಕ್ಯಾಮೆರಾವು, ತಾಂತ್ರಿಕ ಮತ್ತು ಉತ್ಪಾದನೆ ಸಂಬಂಧಿತ ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ನೀಡುತ್ತದೆ.

OPPO
ಅಂಡರ್-ಸ್ಕ್ರೀನ್ ಕ್ಯಾಮೆರಾ ಅನಾವರಣ

By

Published : Aug 5, 2021, 5:27 PM IST

ನವದೆಹಲಿ: OPPO ತನ್ನ ಬಳಕೆದಾರರಿಗೆ ಫುಲ್​​-ಸ್ಕ್ರೀನ್​ ಅನುಭವ ನೀಡುವ ಉದ್ದೇಶದಿಂದ, ತನ್ನ ಮುಂದಿನ ಪೀಳಿಗೆಯ ಅಂಡರ್-ಸ್ಕ್ರೀನ್ ಕ್ಯಾಮರಾ (USC) ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ.

ಹಾರ್ಡ್‌ವೇರ್ ನಾವೀನ್ಯತೆ ಮತ್ತು OPPO ಯ ಸ್ವಾಮ್ಯದ AI ಅಲ್ಗೋರಿದಮ್ಸ್​ ಸಂಯೋಜಿಸುವ ಮೂಲಕ, ಹೊಸ ಸ್ಕ್ರೀನ್ ಅಡಿಯಲ್ಲಿರುವ ಕ್ಯಾಮರಾ ಸ್ಮಾರ್ಟ್​ ಫೋನ್ ಡಿಸ್​ಪ್ಲೇ ಅಡಿಯಲ್ಲಿ ಮುಂಭಾಗದ ಕ್ಯಾಮರಾವನ್ನು ವಿವೇಚನೆಯಿಂದ ಇಡೀ ಸ್ಕ್ರೀನ್​​ ಸಮಗ್ರತೆ ಮತ್ತು ಸ್ಥಿರತೆಯನ್ನು ನಿರ್ವಹಿಸುವ ರೀತಿಯಲ್ಲಿ ಇರಿಸುತ್ತದೆ. ಈ ಹೊಸ ಅಂಡರ್-ಸ್ಕ್ರೀನ್ ಕ್ಯಾಮರಾವು, ತಾಂತ್ರಿಕ ಮತ್ತು ಉತ್ಪಾದನೆ ಸಂಬಂಧಿತ ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ನೀಡುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂಡರ್-ಸ್ಕ್ರೀನ್ ಕ್ಯಾಮೆರಾ

ಅಂಡರ್-ಸ್ಕ್ರೀನ್ ಕ್ಯಾಮರಾದ ಮೇಲಿರುವ ಸ್ಕ್ರೀನ್ ಏರಿಯಾದಲ್ಲಿ ಲೋ ಡಿಸ್‌ಪ್ಲೇ ಕ್ವಾಲಿಟಿ, ಸ್ಕ್ರೀನ್‌ನಿಂದ ಕ್ಯಾಮರಾದ ಅಡಚಣೆಯಿಂದ ಉಂಟಾಗುವ ಕಳಪೆ ಇಮೇಜ್ ಗುಣಮಟ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಕ್ಯಾಮರಾಕ್ಕೆ ಸಂಬಂಧಿಸಿದಂತೆ, OPPO ನ ಯುಎಸ್​​ ಸಂಶೋಧನಾ ಸಂಸ್ಥೆಗಳು ಮಸುಕಾದ ಇಮೇಜ್​ಗಳು ಮತ್ತು ಸ್ಕ್ರೀನ್​​ ಕೆಳಗಿರುವ ಕ್ಯಾಮರಾಗಳಲ್ಲಿ ಕಂಡುಬರುವ ಕೆಲವು ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಡಿಫ್ರಾಕ್ಷನ್ ರಿಡಕ್ಷನ್, HDR ಮತ್ತು AWB ಸೇರಿದಂತೆ-ಇಮೇಜಿಂಗ್ AI ಅಲ್ಗರಿದಮ್​ ಸರಣಿಯನ್ನು ಅಭಿವೃದ್ಧಿಪಡಿಸಿದೆ. ಬಳಕೆದಾರರಿಗೆ ಸ್ಪಷ್ಟವಾದ, ಹೆಚ್ಚು ನೈಸರ್ಗಿಕವಾಗಿ ಕಾಣುವ ಚಿತ್ರಗಳನ್ನು ಸೆರೆಹಿಡಿಯಲು ಈ ಕ್ಯಾಮರಾ ಅನುವು ಮಾಡಿಕೊಡುತ್ತದೆ.

ಅಂಡರ್-ಸ್ಕ್ರೀನ್ ಕ್ಯಾಮೆರಾ ಅನಾವರಣ

ಕಂಪನಿಯು ತನ್ನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹಾರ್ಡ್‌ವೇರ್ ವಿನ್ಯಾಸ ಮತ್ತು ಅಲ್ಗಾರಿದಮಿಕ್ ಪ್ರೊಸೆಸಿಂಗ್ ಸಾಮರ್ಥ್ಯಗಳನ್ನು ಮುಂದುವರಿಸುವುದಾಗಿ ಹೇಳಿದೆ.

ABOUT THE AUTHOR

...view details